‘ಕೈ’ ಹಿಡಿದ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಕನ್ನಯ್ಯ ಕುಮಾರ್

 

ನವದೆಹಲಿ ಸೆ 29 : ಗುಜರಾತ್ ದಲಿತ ಮುಖಂಡ ಮತ್ತು ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಹಾಗೂ ದೆಹಲಿಯ ಜೆಎನ್ ಯುನ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಹಾಗೂ ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

ಸಾಕಷ್ಟು ಸುದ್ದಿ ಮಾಡಿದ್ದ ಯುವ ನಾಯಕರು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಗ್ನೇಶ್ ಮೆವಾನಿಗೆ ಮತ್ತು ಕನ್ಹಯ್ಯ ಕುಮಾರ್ ಅವರಿಗೆ ಪಕ್ಷಕ್ಕೆ ಸ್ವಾಗತ ಕೋರಿದ್ದಾರೆ.

ಈ ಕುರಿತು ಅವರು ಟ್ವೀಟ್ ಮಾಡಿದ ಅವರು , ಬಿಜೆಪಿಯ ಕೋಮುವಾದ ಮತ್ತು ಸರ್ವಾಧಿಕಾರಿ ಆಡಳಿತದ ವಿರುದ್ದ ಹೋರಾಡುತ್ತಿರುವ ಈ ಯುವನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರಲಿದೆ ಮತ್ತು ದೇಶಕ್ಕೆ ಹಿತವಾಗಲಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ಹಯ್ಯ ಕುಮಾರ್ ಇಂದು ಕಾಂಗ್ರೆಸ್ ಪಕ್ಷ ಉಳಿಯದಿದ್ದರೆ ದೇಶ ಉಳಿಯುವುದಿಲ್ಲ ಎಂದು ದೇಶದ ಲಕ್ಷಾಂತರ, ಕೋಟ್ಯಂತರ ಯುವಜನರು ನಂಬಿದ್ದಾರೆ. ಹಾಗಾಗಿ ನಾನು ದೇಶದ ಹಳೆದ ಮತ್ತು ಪ್ರಭಾಪ್ರಭುತ್ವ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.

 ನಾನು ಪಕ್ಷೇತರ ಶಾಸಕನಾಗಿದ್ದೇನೆ. ನಾನು ಕಾಂಗ್ರೆಸ್ ಗೆ ಸೇರ್ಪಡೆಯಾದರೆ ಶಾಸಕನಾಗಿ ಮುಂದುವರೆಯಲು ಸಾಧ್ಯವಿಲ್ಲ. ಆದರೆ ನಾನು ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪುತ್ತೇನೆ. ಮುಂದಿನ ಗುಜರಾತ್ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತೇನೆ ಎಂದು ಜಿಗ್ನೇಶ್ ಮೆವಾನಿ ತಿಳಿಸಿದರು.

Exit mobile version