ಹೊಸ ಮದ್ಯದಂಗಡಿಗೆ ಯಾವುದೇ ಕಾರಣಕ್ಕೂ ಲೈಸನ್ಸ್ ಕೊಡುವುದಿಲ್ಲ: ಅಬಕಾರಿ ಸಚಿವ ತಿಮ್ಮಾಪೂರ

Hubballi: ಅಬಕಾರಿ ಇಲಾಖೆಯಲ್ಲಿ ಕಾನೂನುಗಳಿಗೆ ತಿದ್ದುಪಡಿ ನಡೆಸುವ ಚಿಂತನೆ ನಡೆದಿದ್ದು, ಹೊಸ ಮದ್ಯ ಮಾರಾಟದ ಪರವಾನಗಿಯನ್ನು ಯಾವುದೇ ಕಾರಣಕ್ಕೂ ನೀಡಲಾಗುವುದಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ (R B Thimmapur) ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಗ್ರಾಮಕ್ಕೊಂದು ಮದ್ಯದಂಗಡಿ ತೆರೆವ ವಿಚಾರಕ್ಕೆ ಸಂಬಂಧಿಸಿ ಉಂಟಾಗಿದ್ದ ಗೊಂದಲಕ್ಕೂ ತೆರೆ ಎಳೆದಿದ್ದಾರೆ.

ಗ್ರಾಮಕ್ಕೊಂದು ಮದ್ಯದಂಗಡಿ ಸ್ಥಾಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದ್ದು, ಎಂಬುದಾಗಿ ಅಬಕಾರಿ ಸಚಿವರು ಹೇಳಿಕೆಯನ್ನು ತಿಂಗಳ ಹಿಂದಷ್ಟೇ ನೀಡಿದ್ದರು. ರಾಜ್ಯದಲ್ಲಿ ಸುಮಾರು 1000ಕ್ಕೂ ಅಧಿಕ ಮದ್ಯದಂಗಡಿ ಹೊಸದಾಗಿ ಪ್ರಾರಂಭಿಸಲು ಯೋಜನೆ ರೂಪಿಸಿದೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಹೊಸ ಲೈಸೆನ್ಸ್ (License) ಕೊಡುವುದಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಸಾಧ್ಯತೆಗಳನ್ನು ಸಚಿವರು ಇದೀಗ ದೂರ ತಳ್ಳಿದ್ದಾರೆ.

ಇಲಾಖೆಯಲ್ಲಿ ಸಾಕಷ್ಟು ಬದಲಾಣೆ ಆಗಬೇಕಿದ್ದು ಈಗಿರುವ ಐದು ವರ್ಷಗಳ ಕಾಲದ ಪ್ರತಿ ವರ್ಷದ ಅವಧಿಯ ಲೈಸನ್ಸ್ ನವೀಕರಣವನ್ನ ಐದು ವರ್ಷಗಳ ಕಾಲ ವಿಸ್ತರಣೆ ಮಾಡಲಾಗುವುದು ಎಂದು ಶನಿವಾರ ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ತಿಳಿಸಿದರು

ಕಾರಣಾಂತರಗಳಿಂದ ರದ್ದಾದ ಹಳೇ ಲೈಸನ್ಸ್ ದಾರರು ಬಾಕಿ ಹಣ ತುಂಬಿದರೆ ಲೈಸನ್ಸ್ ರಿನಿವಲ್ (License Renewal) ಮಾಡಲಾಗುವುದಲ್ಲದೆ ಹಳೇ ಲೈಸನ್ಸ್ಗಳನ್ನು ನವೀಕರಣ ಮಾಡಲು ಅವಕಾಶ ಕೊಡಲಾಗುವುದು ಮತ್ತು ಯಾರು ಹಣ ತುಂಬಿದರೂ ಪರವಾನಿಗೆ ಕೊಡಲಾಗುವುದು ಎಂದು ಮಾಹಿತಿ ಕೊಟ್ಟರು.

ಮದ್ಯ ಪೂರೈಕೆ ಇಲ್ಲ.
ಹೊರ ರಾಜ್ಯದಿಂದ ಯಾವುದೇ ರೀತಿಯ ಮದ್ಯ ಪೂರೈಕೆ ಆಗದಂತೆ ನೋಡಿಕೊಳ್ಳಲಾಗುವುದು ಮತ್ತು ಜನರ ಬೇಡಿಕೆ ಮತ್ತು ಪೂರೈಕೆ ಆಧಾರದ ಮೇಲೆ ಕೊಡಲಾಗುವುದು. ಈಗ ಹೊಸ ಲೈಸನ್ಸ್ ಯಾವುದೇ ಕಾರಣಕ್ಕೂ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.

ಭವ್ಯಶ್ರೀ ಆರ್.ಜೆ

Exit mobile version