‘ಪರಿಶಿಷ್ಟ ವರ್ಗಗಳ ಕಲ್ಯಾಣ’ ಹೊಸ ಸಚಿವಾಲಯ ಉದ್ಘಾಟನೆ ಮಾಡಿದ ಸಿದ್ದರಾಮಯ್ಯ: 8 ಜನರಿಗೆ ವಾಲ್ಮೀಕಿ ಪ್ರಶಸ್ತಿ

Bengaluru: ವಿಧಾನಸೌಧದ (Vidhanasoudha) ಬ್ಯಾಂಕ್ವೆಟ್ ಹಾಲ್​ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಂಟು ಜನರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ (Valmiki Award) ಪ್ರಧಾನ ಮಾಡಲಾಯಿತು ಮತ್ತು ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯವನ್ನು ಉದ್ಘಾಟಿಸಿದರು.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ
ರಾಮಣ್ಣ ಗಸ್ತಿ – ಶಿಕ್ಷಣ
ಜಿ.ಓ. ಮಂಹಾಂತಪ್ಪ- ಸಮಾಜಸೇವೆ
ಎನ್.ವೈ. ಹನುಮಂತಪ್ಪ- ನಿವೃತ್ತ ನ್ಯಾಯಾಧೀಶರು
ಮಹಾದೇವಮ್ಮ – ಧಾರ್ಮಿಕ ಕ್ಷೇತ್ರ
ಸೋಮಣ್ಣ -ಸಾಮಾಜಿಕ ಸಂಘಟನೆ
ಸುಕನ್ಯಾ ಮಾರುತಿ – ಸಾಹಿತ್ಯ
ಶಾರದಾ ಪ್ರಭುಲಿಂಗ ಹುಲಿನಾಯಕ್ – ವೈದ್ಯಕೀಯ ಸೇವೆ
ಸುಜಾತಮ್ಮ – ರಂಗಭೂಮಿ

ಶುಕ್ರವಾರ ಸಿಎಂ (CM) ಜತೆ ಪ್ರತ್ಯೇಕ ಸಚಿವಾಲಯದ ಬಗ್ಗೆ ಚರ್ಚೆ ಮಾಡಿದ್ದು, ಈ ಸಮುದಾಯಗಳ ಅಭಿವೃದ್ಧಿಗೆ ಸಿದ್ದರಾಮಯ್ಯರಂತಹ ಸಿಎಂ ಬೇಕು. ಇವತ್ತು ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಪ್ರತ್ಯೇಕ ಸಚಿವಾಲಯ ಉದ್ಘಾಟನೆ ಮಾಡಿದ್ದಾರೆ. 15 ಎಸ್​ಟಿ (ST) ಮೀಸಲು ಕ್ಷೇತ್ರದಲ್ಲಿ 14 ಕ್ಷೇತ್ರ ಗೆದಿದ್ದೇವೆ. ಸತೀಶ್ ಅಣ್ಣ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಸಚಿವ ನಾಗೇಂದ್ರ (Nagendra) ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ (Dr. H C Mahadevappa), ಸಚಿವರಾದ ಬಿ. ನಾಗೇಂದ್ರ, ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ (Govindaraj), ಸಿಎಸ್ ವಂದಿತ ಶರ್ಮಾ ಉಪಸ್ಥಿತರಿದ್ದರು.

ಭವ್ಯಶ್ರೀ ಆರ್. ಜೆ

Exit mobile version