ಬಾಲ್ಯವಿವಾಹ ತಡೆಗಟ್ಟಲು ರಾಜಸ್ತಾನ ಸರ್ಕಾರದಿಂದ ಹೊಸ ಪ್ಲಾನ್: ವೆಡ್ಡಿಂಗ್ ಕಾರ್ಡ್ ನಲ್ಲಿ ಜನನ ವರ್ಷ ಕಡ್ಡಾಯ

ರಾಜಸ್ಥಾನ, ಏ. 10: ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ರಾಜಸ್ಥಾನ ಸರ್ಕಾರ ಮೆಗಾ ಪ್ಲಾನ್​ ಒಂದನ್ನು ಜಾರಿಗೆ ತಂದಿದೆ. ಮದುವೆ ಆಹ್ವಾನ ಪತ್ರಿಕೆಯಲ್ಲಿ ವಧು ಮತ್ತು ವರನ ಹೆಸರನ್ನು ಹಾಕಲಾಗಿರುತ್ತದೆ. ಅದೇ ರೀತಿ ಆಹ್ವಾನ ಪತ್ರಿಕೆಯ ಮುದ್ರಣಕ್ಕೆ ಕೊಡುವಾಗ ವಧು-ವರನ ಜನನ ಪ್ರಮಾಣಪತ್ರವನ್ನು ಮುದ್ರಣ ಮಾಡುವವರಿಗೆ (ಪ್ರಿಂಟಿಂಗ್ ಪ್ರೆಸ್​) ಕಡ್ಡಾಯವಾಗಿ ನೀಡಲೇಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ರಾಜಸ್ಥಾನ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಈ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ನಿಬಂಧನೆಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಧಿಕಾರಿಗಳ ಸಹಾಯದಿಂದ, ಬಾಲ್ಯವಿವಾಹವು ಅಪರಾಧ ಎಂದು ಸಾಮಾನ್ಯ ಜನರಿಗೆ ತಿಳಿಸಬೇಕು ಮತ್ತು ಅದರ ವಿರುದ್ಧದ ಕಾನೂನಿನ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಬಾಲ್ಯ ವಿವಾಹವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಈ ಕಾಯ್ದೆಯ ಅಡಿಯಲ್ಲಿ ಬಾಲ್ಯ ವಿವಾಹದಲ್ಲಿ ಪಾಲ್ಗೊಂಡ ಜನರು ಸಹ ಜವಾಬ್ದಾರರಾಗಲಿದ್ದು, ಅವರ ವಿರುದ್ಧ ಕ್ರಮಕ್ಕೂ ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬಾಲ್ಯ ವಿವಾಹದಲ್ಲಿ ಪಾಲ್ಗೊಳ್ಳುವ ಅಡುಗೆ ಮಾಡುವವರು, ಬ್ಯಾಂಡ್​ ಸಂಘಟನೆ, ಶಾಮಿಯಾನ ಮಾಲೀಕರು ಹಾಗೂ ವರನ ಕಡೆಯ ಜನರಿಗೆ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Exit mobile version