ಮಂಗಳನ ಮೇಲ್ಮೈ ಅಡಿಯಲ್ಲಿ ನೀರಿನ ಕುರುಹು ಪತ್ತೆ: ಹೊಸ ಸಂಶೋದನೆ ನಡೆಸಿದ ಪರ್ಸೇವೇರೆನ್ಸ್ ರೋವರ್

ನಾಸಾದ (NASA) ಪರ್ಸೆವೆರೆನ್ಸ್ ರೋವರ್ ಹೊಸ ಸಂಶೋಧನೆಗಳನ್ನು ಮಾಡಿದ್ದು, ಮಂಗಳನ (New Research on Mars) ಜೇಝೆರೋ ಕ್ರೆಟರ್ನಲ್ಲಿ (Jezero Crater)

ಅಭಿವೃದ್ದಿ ಹೊಂದಿರುವಂತಹ ಸರೋವರಗಳ ಉಪಸ್ಥಿತಿಯ ಕುರಿತಾದ ಡೇಟಾವನ್ನು ಬಿಡುಗಡೆಗೊಳಿಸಿದೆ. ಈ ಗ್ರಹದಲ್ಲಿ ಸೂಕ್ಷ್ಮ ಜೀವಿಗಳು ವಾಸವಾಗಿದೆ ಎನ್ನುವ ಸುಳಿವನ್ನು

ನೀಡಿದ್ದು, ಈ ರೋವರ್ನ ಹೊಸ ಸಂಶೋಧನೆಯಲ್ಲಿ (New Research on Mars) ಏನಿದೆ ಎನ್ನುವ ಸಂಪೂರ್ಣ ಮಾಹಿತಿ ಹೀಗಿದೆ.

ಬಾಹ್ಯಕಾಶ ಪರಿಶೋಧನೆಯಲ್ಲಿ ಹೊಸ ಹೆಜ್ಜೆ
ಮಂಗಳಗ್ರಹ (Mars)ದಲ್ಲಿ ನೀರಿರುವ ಹಾಗೂ ಇತರ ಸೂಕ್ಷ್ಮಾಣು ಜೀವಿಗಳ ವಾಸವನ್ನು ನೋಡಿದರೆ ಭೂಮಿಯ ಹೊರತಾಗಿ ಮಂಗಳ ಗ್ರಹದಲ್ಲಿ ಮುಂದಿನ ದಿನಗಳಲ್ಲಿ

ವಾಸವಾಗಬಹುದು ಎಂದು ಪರಿಶೋಧನೆ ನಡೆಸಿ ನಿರೂಪಿಸಬೇಕು ಎನ್ನುವತ್ತ ಬಾಹ್ಯಾಕಾಶದ ಹೊಸ ಯೋಜನೆಯಾಗಿದೆ.

UCLAಯ ಅನುಭವಿ ಪ್ರಾದ್ಯಾಪಕರ ಅಭಿಪ್ರಾಯ
ಭೂಮಿ ಸೇರಿದಂತೆ ಎಲ್ಲ ಗ್ರಹಗಳ ಅಧ್ಯಯನ ನಡೆಸುವ UCLAಯ ಅನುಭವಿ ಪ್ರಾಧ್ಯಾಪಕ ಹಾಗೂ ಲೇಖಕರಾದ ಡೇವಿಡ್ ಪೈಜ್ (David Paige) ಮಂಗಳ ಗ್ರಹದ ವೈಶಿಷ್ಟ್ಯ

ಅರಿಯಲು ಮೇಲ್ಮೈ ಹಾಗೂ ಕೆಳಗೆ ಅನ್ವೇಷಣೆ ನಡೆಸುವುದು ಅನಿವಾರ್ಯ ಎಂದಿದ್ದಾರೆ.

ಮಂಗಳ ಗ್ರಹ ಹಿಂದೆ ಹೇಗಿತ್ತು?
ಕೆಂಪು ಗ್ರಹವೆಂದೆ ಕರೆಸಿಕೊಳ್ಳುವ ಮಂಗಳಗ್ರಹದ ಸಾಮರ್ಥ್ಯದ ಒಳನೋಟವನ್ನು ಅರಿಯಲು ಈ ಹಿಂದೆ ಹೇಗಿತ್ತು ಎಂದು ಭವಿಷ್ಯದಲ್ಲಿ ಹೇಗಿರಲಿದೆ ಎಂದು ಸಮೀಕ್ಷೆ ನಡೆಸಿ ಅದರ

ಹಿಂದಿನ ರಹಸ್ಯ ಅರಿಯಬಹುದಾಗಿದೆ.

ಮಹತ್ವದ ಸುಳಿವು ಲಭ್ಯ:
ಈ ಹಿಂದಿನ ಕಾರ್ಯಾಚರಣೆಗಳಲ್ಲಿ ಮಂಗಳಗ್ರಹದಲ್ಲಿ ಮಂಜುಗಡ್ಡೆಯ ಅಸ್ತಿತ್ವದ ಬಗ್ಗೆ ಮಾಹಿತಿ ದೊರೆತಿದ್ದರೆ ಈಗ ಜೀವ ರೂಪದಲ್ಲಿರುವ ಸೂಕ್ಷ್ಮಾಣು ಜೀವಿಗಳು ಅಲ್ಲಿ ವಾಸವಾಗಿವೆ

ಎನ್ನುವುದಕ್ಕೆ ಸುಳಿವು ದೊರೆತಿದ್ದು, ಬಾಹ್ಯಾಕಾಶ ಪರಿಶೋಧನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ.

ನೀರಿನ ಸರೋವರದ ಸುಳಿವು
ಮಂಗಳ ಗ್ರಹದಲ್ಲಿ ಕೇವಲ ನೀರಲ್ಲ. ನೀರಿನ ಸರೋವರವಿದೆ ಎಂದು ಇತ್ತೀಚಿನ ರೇಡಾರ್ಗಳು (Radar) ಮಾಹಿತಿ ನೀಡಿದ್ದು, ಅದಕ್ಕೆ ಸಂಬಂಧಿಸಿದ ಹಲವಾರು ಚಿತ್ರಗಳನ್ನು ಬಿಡುಗಡೆ

ಮಾಡಿದೆ. ಇದರಿಂದಾಗಿ ಮಂಗಳ ಗ್ರಹದ ಇನ್ನಷ್ಟು ಹಳೆಯ ರಹಸ್ಯಗಳು ಬಯಲಾಗುವ ಸಂಭವವಿದೆ.

ಮಿಷನ್ ಮಂಗಳ
2021ರಿಂದ ಕಾರ್ ಗಾತ್ರದ ರೋವರ್ ಜೇಝೆರೋ ಕ್ರೆಟರ್ ಭೂ ವಿಜ್ಞಾನ ಮತ್ತು ವಾತಾವರಣವನ್ನು ಅಧ್ಯಯನ ಮಾಡುತ್ತಲೇ ಇದ್ದು, ಮಂಗಳ ಗ್ರಹದ ಕುರಿತಾದ ಡೇಟಾವನ್ನು

(Data) ಸಂಗ್ರಹಿಸುತ್ತಲೆ ಇದೆ.

ಮಂಗಳ ಗ್ರಹದ ಕುರಿತಾದ ಡೇಟಾ
ಮಂಗಳ ಗ್ರಹದ ಬಗ್ಗೆ ಈಗಾಗಲೇ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಮೇ ಮತ್ತು ಡಿಸೆಂಬರ್ (December) 2022 ನಡುವೆ ನೆಲದಲ್ಲಿ ಕುಳಿಯಿರುವುದು ಹಾಗೂ ಡೆಲ್ಟಾ ಬಗ್ಗೆ

ಮಾಹಿತಿ ಪಡೆದಿತ್ತು. ಇನ್ನು ಅಲ್ಲಿರುವ ಡೆಲ್ಟಾ ಪ್ರಾಚೀನ ಕಾಲದ ನದಿ ತೀರದ ಕೆಸರನ್ನು ನೆನಪಿಸುವಂತಿದೆ.

ಖಚಿತಪಡಿಸಿಕೊಳ್ಳಲು ಹೋರಾಟ
ಬಗೆದಷ್ಟು, ಮತ್ತಷ್ಟು ಕೂತೂಹಲ ಕೆರಳಿಸುತ್ತಿರುವ ಮಂಗಳ ಗ್ರಹದಲ್ಲಿ ಇನ್ನಷ್ಟು ಪರಿಶೋಧನೆ ನಡೆಸಿ ಬಾಹ್ಯಾಕಾಶದ (outer space) ಪ್ರಗತಿಗೆ ಮುನ್ನುಡಿ ಹಾಡಬೇಕು ಎಂದು

ಹಲವಾರು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಮಂಗಳ ಗ್ರಹದಲ್ಲಿ ವಾಸಿಸಲು ಯೋಗ್ಯವಾದ ನೀರು, ಮೇಲ್ಮೈ ಹೊಂದಿದ್ದರೆ ಇದು ಅಭೂತ ಪೂರ್ವ ಯಶಸ್ಸು

ಕಾಣುವುದರಲ್ಲಿ ಸಂಶಯವಿಲ್ಲ.

ಇದನ್ನು ಓದಿ : ಜಾತಿ ,ಧರ್ಮದ ಕುರಿತಾದ ಪ್ರಚೋದನಕಾರಿ ಭಾಷಣಗಳಿಗಿಂತ ಅಭಿವೃದ್ಧಿ ಮುಖ್ಯ ಎಂದ ದಿನೇಶ್ ಗುಂಡೂರಾವ್

Exit mobile version