ಕೆಪಿಸಿಸಿಗೆ ಹೊಸ ಕಾರ್ಯಾಧ್ಯಕ್ಷರ ನೇಮಕಕ್ಕೆ ಸಿದ್ಧತೆ: ಖರ್ಗೆ, ಕೆಸಿ ವೇಣುಗೋಪಾಲ್‌ ಜೊತೆ ಡಿಕೆಶಿ ಚರ್ಚೆ

Bengaluru: ಲೋಕಸಭಾ ಚುನಾವಣೆ ಹಿನ್ನೆಲೆ ಹೊಸ (New Working President for KPCC) ಮುಖಗಳಿಗೆ ಅವಕಾಶ ನೀಡಲು ಚರ್ಚೆ ನಡೆಸುತ್ತಿದ್ದು, ಕಾರ್ಯಾಧ್ಯಕ್ಷದ ಬದಲಾವಣೆಗೆ

ಕೆಪಿಸಿಸಿ ಮುಂದಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್‌ (D.K Shivakumar) ಹೈಕಮಾಂಡ್‌ ಜತೆ ಮಾತುಕಡೆ ನಡೆಸುತ್ತಿದ್ದು, ಸದ್ಯ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಲಕ್ಷ್ಮಣ ಸವದಿ

ಅವರಿಗೆ ಅವಕಾಶ ಸಿಗಲಿದೆಯೇ ಎಂದು ಎಲ್ಲರಲ್ಲಿಯೂ (New Working President for KPCC) ಕುತೂಹಲ ಮೂಡಿಸಿದೆ.

ಕೆಪಿಸಿಸಿಗೆ ಹೊಸ ಕಾರ್ಯಾಧ್ಯಕ್ಷರ ನೇಮಕ ಮಾಡುವ ನಿಟ್ಟಿನಲ್ಲಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ)

ಕೆಸಿ ವೇಣುಗೋಪಾಲ್ (K C Venugopal) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹೊಸ ಕಾರ್ಯಾಧ್ಯಕ್ಷರನ್ನು ನೇಮಕ

ಮಾಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೆಪಿಸಿಸಿಗೆ (KPCC) ಐದು ಕಾರ್ಯಾಧ್ಯಕ್ಷನ್ನು ನೇಮಕ ಮಾಡಲಾಗಿದ್ದು, ಅದರಲ್ಲಿ ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ (Ramalinga Reddy), ಈಶ್ವರ್ ಖಂಡ್ರೆ ಸಚಿವರಾಗಿ ಕಾರ್ಯನಿರ್ವಹಣೆ

ಮಾಡುತ್ತಿದ್ದಾರೆ. ಸಲೀಂ ಅಹಮ್ಮದ್ ಹಾಗೂ ಬಿಎನ್ ಚಂದ್ರಪ್ಪ (B N Chandrappa) ಅವರು ಸದ್ಯ ಕಾರ್ಯಾಧ್ಯಕ್ಷರಾಗಿದ್ದಾರೆ. ಆದರೆ, ಇದೀಗ ಐದು ಸ್ಥಾನಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಇಂದು ಅಥವಾ ನಾಳೆ ಈ ವಿಚಾರವಾಗಿ ಸಿಎಂ ಜತೆ ಚರ್ಚಿಸಿ ಎಐಸಿಸಿ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಕಾರ್ಯಾಧ್ಯಕ್ಷರಾಗಿರುವ ಸಚಿವ ರಾಮಲಿಂಗಾ ರೆಡ್ಡಿ, ಸಚಿವ ಈಶ್ವರ್ ಖಂಡ್ರೆ,

ಸಚಿವ ಸತೀಶ್ ಜಾರಕಿಹೊಳಿ (Sathish Jarakiholi), ಪರಿಷತ್ ಶಾಸಕ ಸಲೀಂ ಅಹಮದ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಹುದ್ದೆಗಳನ್ನುತೆರವುಗೊಳಿಸಿ ಮರು ಹಂಚಿಕೆ ಸಾಧ್ಯತೆ ಇದ್ದು,

ರಾಮಲಿಂಗಾ ರೆಡ್ಡಿ ಸ್ಥಾನಕ್ಕೆ ಒಕ್ಕಲಿಗ ಖೋಟಾದಲ್ಲಿ ರಾಜ್ಯ ಸಭಾ ಸದಸ್ಯ ಜೆ.ಸಿ.ಚಂದ್ರಶೇಖರ್ ಗೆ (J C Chandrashekar) ಅವಕಾಶ ಸಿಗುವ ಸಾಧ್ಯತೆ ಇದೆ.

ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಮಾಜಿ ಸಚಿವ ಈಶ್ವರ್ ಖಂಡ್ರೆ ಸ್ಥಾನಕ್ಕೆ ಅವಕಾಶ ನೀಡುವ ಸಾಧ್ಯತೆ ಇದ್ದು, ಅದೇ ರೀತಿಯಲ್ಲಿ

ಒಬಿಸಿ (OBC) ಕೋಟಾದಲ್ಲಿ ಒಂದು ಕಾರ್ಯಾಧ್ಯಕ್ಷ ಹುದ್ದೆಯನ್ನು ಸ್ಥಾನವನ್ನು ಮಾಜಿ ಸಚಿವ ವಿನಯ್ ಸೊರಕೆಗೆ ನೀಡುವ ಸಾಧ್ಯತೆ ಇದೆ.

ಲಕ್ಷ್ಮಣ ಸವದಿಗೆ ಸಿಗುತ್ತಾ ಸ್ಥಾನ?
ಲಿಂಗಾಯತರ ಖೋಟಾದಲ್ಲಿ ವಿನಯ್ ಕುಲಕರ್ಣಿ ಜೊತೆಗೆ ಲಕ್ಷ್ಮಣ ಸವದಿಯ (Lakshman Savadi) ಹೆಸರೂ ಮುನ್ನಲೆಯಲ್ಲಿದೆ. ಆದರೆ ಸತೀಶ್ ಜಾರಕಿಹೊಳಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ

ಎನ್ನಲಾಗಿದೆ. ಈ ನಿಟ್ಟಿನಲ್ಲಿ ವರಿಷ್ಠರು ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನು ಓದಿ: ಜೀವನಪರ್ಯಂತ ಕಾಡುವ ಬಿಪಿ ಮತ್ತು ಶುಗರ್ ಕಾಯಿಲೆಯನ್ನು ನಿಯಂತ್ರಿಸಬೇಕಾ? ಹಾಗಾದ್ರೆ ಈ ಆಹಾರವನ್ನು ಸೇವಿಸಿ

Exit mobile version