BP And Sugar Control Tips : ಬಿಪಿ ಮತ್ತು ಶುಗರ್ ಈ ಎರಡೂ ಕಾಯಿಲೆಗಳು ಒಮ್ಮೆ (Eat this Food for BP) ನಮ್ಮ ದೇಹದಲ್ಲಿ ಕಾಣಿಸಿಕೊಂಡರೆ ಸಾಯುವವರೆಗೂ
ಇದು ನಮ್ಮನ್ನು ಬಿಟ್ಟು ಹೋಗದ ರೋಗವಾಗಿದೆ. ಇಂದಿನ ದಿನಗಳಲ್ಲಿ ಸುಮಾರು ಹತ್ತು ಜನರನ್ನು ಪರೀಕ್ಷೆಗೆ ಒಳಪಡಿಸಿದರೆ, ಅದರಲ್ಲಿ ಅರ್ಧಕ್ಕೆ ಅರ್ಧ ಜನರಲ್ಲಿ ಈ ಕಾಯಿಲೆ
ಕಾಣಬರುತ್ತದೆ. ಹಾಗಾದ್ರೆ ಇದರ ನಿಯಂತ್ರಣ ಹೇಗೆ (Eat this Food for BP) ಮಾಡುವುದು ತಿಳಿಯೋಣ ಬನ್ನಿ.
ಅಪಾಯಕಾರಿ ಸಂಗತಿ ಏನಪ್ಪಾ ಅಂದರೆ ಈ ಕಾಯಿಲೆ ಒಂದು ಸಲ ಕಾಣಿಸಿಕೊಂಡ್ರೆ ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿ ಹೀಗಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರು, ಆಗಾಗ ತಮ್ಮ
ಆರೋಗ್ಯವನ್ನು ಡಾಕ್ಟರ್ (Doctor) ಬಳಿಹೋಗಿ ಪರೀಕ್ಷಿಸಿಕೊಳ್ಳಬೇಕು, ಮತ್ತು ವೈದ್ಯರ ಸಲಹೆಯಂತೆ ಔಷಧಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
ರಕ್ತದ ಒತ್ತಡ ಲಕ್ಷಣಗಳು:
ಕಣ್ಣು ಮಂಜು, ತಲೆಸುತ್ತು,ಸಡನ್ ಆಗಿ ಕೋಪಿಸಿಕೊಳ್ಳುವುದು, ತಲೆತಿರುಗಿ ಬೀಳುವುದು, ಇವೆಲ್ಲಾ ಅಧಿಕ ರಕ್ತದೊತ್ತಡದ ಲಕ್ಷಣಗಳು. ಹೀಗಾಗಿ ಈ ಕಾಯಿಲೆ ಇರುವವರು, ಆರೋಗ್ಯಕಾರಿ ಆಹಾರ
ಪದ್ಧತಿಯ ಜೊತೆಗೆ, ಸರಿಯಾದ ಉಪಹಾರದ ಜೀವನಶೈಲಿಯನ್ನು ಅನುಸರಿಸಬೇಕು.ಹಾಗಾದರೆ ಆಹಾರ ಪದ್ಧತಿ ಯಾವ ರೀತಿ ಇರಬೇಕು?
ಹಣ್ಣು ಮತ್ತು ತರಕಾರಿ:
ಕಿತ್ತಳೆ, ಮೂಸಂಬಿ, ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಏಪ್ರಿಕಾಟ್, ಸಿಹಿಗೆಣಸು, ಹೂಕೋಸು, ಎಲೆಕೋಸು, ಪಾಲಕ್ ಸೊಪ್ಪು, ಬ್ರೊಕೋಲಿ, ಟೊಮೆಟೊ (Tomato), ಆಲೂಗಡ್ಡೆ,ಇವುಗಳಲ್ಲಿ ವಿಟಮಿನ್ ಸಿ
(Vitamin C),ಪೊಟ್ಯಾಸಿಯಂ ಅಂಶ ಹೆಚ್ಚಿರುವುದರಿಂದ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವಿಸುವುದರಿಂದ. ಮುಖ್ಯವಾಗಿ ಇಂತಹ ಆಹಾರಗಳು ರಕ್ತನಾಳಗಳಿಗೆ ಒತ್ತಡ ಬೀಳದಂತೆ
ತಡೆಯುತ್ತವೆ.ಇದರ ಜೊತೆಗೆ ಕಡಿಮೆ ಕೊಬ್ಬಿನಾಂಶ ಇರುವ ಡೈರಿ ಉತ್ಪನ್ನಗಳು, ಮೀನು, ನೆನೆಸಿಟ್ಟ ಕಾಳುಗಳು ಇತ್ಯಾದಿ ಗಳನ್ನು ಸೇವಿಸುವುದು ಉತ್ತಮ.
ಖರ್ಜುರ,
ಈ ಹಣ್ಣಿನಲ್ಲಿ ಕಂಡು ಬರುವ ಹೆಚ್ಚಿನ ಪ್ರಮಾಣದ, ನೈಸರ್ಗಿಕ ಸಕ್ಕರೆಯಾಂಶ ಮತ್ತು ನಾರಿನಾಂಶ ಇರುವುದರಿಂದ ಇದನ್ನು ಇಡೀ ರಾತ್ರಿ ನೆನೆಸಿಟ್ಟು ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು
ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಸಣ್ಣ ಪಾತ್ರೆಯಲ್ಲಿ ಕುದಿಸಿದ ಹಾಲಿನಲ್ಲಿ, ನಾಲ್ಕೈದು ಖರ್ಜೂರಗಳನ್ನು
ನೆನೆಸಿಟ್ಟು, ಮರುದಿನ ಬೆಳಗಿನ ಸಮಯದಲ್ಲಿ, ಉಪಹಾರಕ್ಕೂ ಮುನ್ನ, ಈ ನೆನೆಸಿಟ್ಟ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಖರ್ಜೂರವನ್ನು ಹಾಗೆ ತಿನ್ನುವ ಬದಲು, ಹಾಲಿನಲ್ಲಿ ನೆನೆಸಿಟ್ಟು ತಿನ್ನವುದು ಉತ್ತಮ.
ಬಾಳೆಹಣ್ಣು
ಮನುಷ್ಯನ ಆರೋಗ್ಯಕ್ಕೆ, ಬೇಕಾಗುವ ಅಗತ್ಯ ಪೋಷಕಾಂಶಗಳಲ್ಲೆವೂ ಈ ಹಣ್ಣಿನಲ್ಲಿ ಸಮೃದ್ಧವಾಗಿದೆ ಮತ್ತು ವರ್ಷ ಪೂರ್ತಿ ಸಿಗುವ ಹಣ್ಣುಗಳ ಪಟ್ಟಿಯಲ್ಲಿ, “ಬಾಳೆಹಣ್ಣು” ಕೂಡ ಒಂದು. ಇನ್ನೂ ವಿಶೇಷತೆ
ಏನೆಂದರೆ ಬಾಳೆಹಣ್ಣಿನ”ಲ್ಲಿ ಸೇಬು ಹಣ್ಣಿಗಿಂತಲೂ ಹೆಚ್ಚಿನ ಪೋಷಕಾಂಶಗಳು ಇರುವುದರಿಂದ ರಕ್ತದೊತ್ತಡ ವನ್ನು ನಿಯಂತ್ರಿಸುವ ಪೊಟ್ಯಾಶಿಯಮ್ (Potassium) ಅಂಶ ಅಧಿಕ ಪ್ರಮಾಣದಲ್ಲಿದೆ
ಆದ್ದರಿಂದ ಆರೋಗ್ಯ ಕ್ಕೆ ತುಂಬಾ ಒಳೆಯದು ಎಂದು ತಜ್ಞರು ಕೂಡ ದೃಢಪಡಿಸಿದ್ದಾರೆ.
ಊಟ ಆದ ಮೇಲೆ ಒಂದರಿಂದ ಎರಡು ಬಾಳೆಹಣ್ಣು ಸೇವನೆ ಮಾಡಿದರೆ,ತುಂಬಾನೇ ಒಳ್ಳೆಯದು.ಪೊಟ್ಯಾಶಿಯಮ್ ಅಂಶ ಇರುವ ಹಣ್ಣುಗಳು, ಹೃದಯಾಘಾತ, ಪಾರ್ಶ್ವವಾಯು ಹಾಗೂ ರಕ್ತದೊತ್ತಡದಂತಹ
ಕಾಯಿಲೆಯನ್ನು ದೂರಮಾಡುತ್ತದೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 467 ಮಿ.ಗ್ರಾಂ ಪೊಟ್ಯಾಶಿಯಮ್ ಅಂಶ ಸಿಗುತ್ತದೆ.
ಬೀಟ್ರೂಟ್
ಭೂಮಿ ಒಳಗಡೆ ಬೆಳೆಯುವ ಗಡ್ಡೆ, ತರಕಾರಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ ಹಾಗಾಗಿ ಬೀಟ್ ರೂಟ್ (Beetroot) ಕೂಡ ಒಂದು. ಈ ತರಕಾರಿಯಲ್ಲಿ ಕಂಡು ಬರುವ
ಕಬ್ಬಿಣಾಂಶ, ಪೊಟಾಶಿಯಂ, ನೈಟ್ರಿಕ್ ಆಕ್ಸೈಡ್ (Nitric Acid) ಹಾಗೂ ವಿಟಮಿನ್ ಬಿ ಅಂಶವು ರಕ್ತಸಂಚಾರ ಸುಧಾರಣೆ ಮಾಡಿ, ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುತ್ತವೆ. ಹೀಗಾಗಿ
ಈ ಕಾಯಿಲೆಯಿಂದ ಬಳಲುತ್ತಿರುವವರು, ಪ್ರತಿದಿನ ಈ ತರಕಾರಿಯ ಜ್ಯೂಸ್ ಅಥವಾ ಬೀಟ್ ರೂಟ್ ಸಲಾಡ್, ಸೂಪ್, ಕೂಡ ಸೇವನೆ ಮಾಡಬಹುದು.
ದಾಳಿಂಬೆ, ವಿಟಮಿನ್ ಸಿ (Vitamin C) ಅಂಶ ಇರುವ ಸಿಟ್ರಸ್ ಹಣ್ಣುಗಳನ್ನು ಅಧಿಕ ರಕ್ತದೊತ್ತಡದ ಕಾಯಿಲೆ ಇದ್ದವರು, ನೈಸರ್ಗಿಕವಾಗಿ ಸಿಗುವ ತರಕಾರಿ,ಹಣ್ಣುಗಳ ಸೇವನೆ ಮಾಡುವ ಅಭ್ಯಾಸ ಮಾಡಿ
ಕೊಂಡರೆ ಒಳ್ಳೆಯದು.
ಅಧಿಕ ರಕ್ತದೊತ್ತಡವು ಹೃದಯಕ್ಕೆ ತುಂಬಾನೇ ಡೇಂಜರ್ (Danger), ಹಾಗಾಗಿ ವೈದ್ಯರ ಬಳಿ ತಿಂಗಳಿಗೊಮ್ಮೆ ಆದರೂ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ಒಬ್ಬ ಆರೋಗ್ಯವಂತ
ವ್ಯಕ್ತಿಯ ರಕ್ತದೊತ್ತಡವು 120/80 mmHg ಇರುತ್ತದೆ.
ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ನೆಲ್ಲಿಕಾಯಿಲೆ ಜ್ಯೂಸ್ (Juice) ಅನ್ನು ಸೇವನೆ ಮಾಡುವುದರಿಂದ, ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.
ಇದನ್ನು ಓದಿ: ಜೀವನಪರ್ಯಂತ ಕಾಡುವ ಬಿಪಿ ಮತ್ತು ಶುಗರ್ ಕಾಯಿಲೆಯನ್ನು ನಿಯಂತ್ರಿಸಬೇಕಾ? ಹಾಗಾದ್ರೆ ಈ ಆಹಾರವನ್ನು ಸೇವಿಸಿ
- ಮೇಘಾ ಮನೋಹರ ಕಂಪು