ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸ್ಥಗಿತ ಹಿನ್ನಲೆ ಬರೋಬ್ಬರಿ 160 ಮಿಲಿಯನ್ ಡಾಲರ್‌ ನಷ್ಟ

ಬೆಂಗಳೂರು ಅ 5 : ಡಿಜಿಟಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಭಾಗವನ್ನೇ ಹೊಂದಿರುವ ಫೇಸ್​ಬುಕ್​, ವಾಟ್ಸಾಪ್​ ಹಾಗೂ ಇನ್ಟ್ಸಾಗ್ರಾಮ್​ ಸರ್ವರ್​ ಇದ್ದಕ್ಕಿದ್ದಂತೆ ಕೈಕೊಟ್ಟಿರುವುದರಿಂದ  ಜಾಗತಿಕ ಆರ್ಥಿಕತೆಯಲ್ಲೂ ಭಾರಿ ನಷ್ಟ ಉಂಟಾಗಿದೆ.

ಸದ್ಯ ಒಂದು ಗಂಟೆಗೂ ಹೆಚ್ಚು ಕಾಲದಿಂದ ಈ ಮೂರೂ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಸರ್ವರ್​ ಡೌನ್​ ಆಗಿದ್ದು, ಪರ್ಸನಲ್​ ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್​ ಎರಡೂ ಸಾಧ್ಯವಾಗುತ್ತಿರಲಿಲ್ಲ. ಸದ್ಯ ಇವುಗಳಿಗೆ ಪರ್ಯಾಯವಾಗಿ ಡಿಜಿಟಲ್​ ಬಳಕೆದಾರರು ಟ್ವಿಟರ್​, ಟೆಲಿಗ್ರಾಂ ಹಾಗೂ ಸಿಗ್ನಲ್​ಗೆ ಮೊರೆ ಹೋಗಿದ್ದರು.

ಈ ನಡುವೆ ನೆಟ್​ಬ್ಲಾಕ್ಸ್​ನ ದ ಕಾಸ್ಟ್​ ಆಫ್​ ಶಟ್​ಡೌನ್​ ಟೂಲ್​ (COST) ಫೇಸ್​ಬುಕ್​, ವಾಟ್ಸಾಪ್ ​ ​,ಇನ್ಟ್ಸಾಗ್ರಾಮ್ ​ನಿಂದ ಜಗತ್ತಿನ ಆರ್ಥಿಕತೆಗೆ ಗಂಟೆಯೊಂದರಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿದೆ. ಕಾಸ್ಟ್​ನ ಒಂದು ಅಂದಾಜಿನ ಪ್ರಕಾರ ಜಾಗತಿಕ ಆರ್ಥಿಕತೆಗೆ ಗಂಟೆಗೆ ಸುಮಾರು 160 ಮಿಲಿಯನ್​ ಡಾಲರ್ ನಷ್ಟ ಆಗಿದೆ. ಇದು ಇನ್ನೂ ಮುಂದುರಿಯುತ್ತಿದೆ. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್​​ಬುಕ್​ನ ಷೇರು ಕೂಡ ಶೇ. 6 ಕುಸಿದಿದೆ.

ತಮ್ಮ ಸರ್ವರ್​ ಡೌನ್​ ಆಗಿರುವುದನ್ನು ಟ್ವಿಟರ್​ ಮೂಲಕ ಹೇಳಿಕೊಂಡಿರುವ ಫೇಸ್​ಬುಕ್​, ಅದಕ್ಕಾಗಿ ಬಳಕೆದಾರರ ಕ್ಷಮೆಯನ್ನೂ ಕೋರಿದೆ. ಆದರೆ ಸರ್ವರ್​ ಡೌನ್​ಗೆ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ನಿಜವಾಗಿಯೂ ಸರ್ವರ್​ ಡೌನ್​ ಆಗಿದೆಯೇ ಅಥವಾ ಏನಾದರೂ ಹ್ಯಾಕ್​ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.  

Exit mobile version