ಮುಂದಿನ ವರ್ಷ ಮಠಗಳಿಗೆ ಅನುದಾನ ಕೊಡ್ತೇವೆ : ಎಂ.ಬಿ.ಪಾಟೀಲ್

ಬೆಂಗಳೂರು : ಈ ವರ್ಷ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ ಮಠಗಳಿಗೆ ಹೆಚ್ಚಿನ ಅನುದಾನ ಕೊಡಲು (Next year grants to maths) ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ವರ್ಷ

ಮಠಗಳಿಗೆ ಅನುದಾನ ನೀಡಲಾಗುವುದು. ನಮ್ಮ ಸರ್ಕಾರಕ್ಕೆ ಮಠ ಮಾನ್ಯಗಳ ಬಗ್ಗೆ ಗೌರವ ಇದೆ. ಸಿ.ಸಿ.ಪಾಟೀಲ ಅವರು ಈ ಬಗ್ಗೆ ಪ್ರಶ್ನಿಸಿರುವುದು ಸ್ವಾಗತಾರ್ಹ, ಮುಂದಿನ ವರ್ಷ ಅವರ ಮಠವಿದ್ದರೂ

ಹೇಳಿಲಿ ಅದಕ್ಕೂ ಅನುದಾನ ಕೊಡುತ್ತೇವೆ ಎಂದು ಟಾಂಗ್ ಕೊಡುವ ಮೂಲಕ ಸಚಿವ ಎಂಬಿ ಪಾಟೀಲ್ ಮಠಗಳಿಗೆ ಅನುದಾನ ಕೊಡುವ ಭರವಸೆ ನೀಡಿದ್ದಾರೆ.

ಇದನ್ನು ಓದಿ: ಕೆನಡಾ, ಯುಎಸ್, ಬ್ರಿಟನ್ನಲ್ಲಿ ಭಾರತೀಯ ರಾಜತಾಂತ್ರಿಕರನ್ನು ಕೊಲ್ಲುವಂತೆ ಖಲಿಸ್ತಾನಿಗಳಿಂದ ಕರೆ

ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ನಲ್ಲಿ ಶಿಕ್ಷಣ, ದಾಸೋಹ ನಡೆಸುವ ಮಠಗಳಿಗೆ ಅನುದಾನ ಕಡಿತ ಮಾಡಲಾಗಿದೆ. ಆದರೆ ಕೆಲ ಇತರ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಮಾಜಿ

ಸಚಿವ ಸಿಸಿ ಪಾಟೀಲ್ ಆರೋಪ ಮಾಡಿರುವ ಬಗ್ಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್, ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚ್ಗಳು, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನು ಸಮಾನವಾಗಿ

ಕಾಣುತ್ತೇವೆ. ಎಲ್ಲರಿಗೂ ಸರ್ಕಾರದಿಂದ ಅನುದಾನ ಕೊಡುತ್ತೇವೆ. ಒಂದು ವರ್ಷ ಸಿಸಿ ಪಾಟೀಲ್ ಅವರು ತಾಳ್ಮೆಯಿಂದ (Next year grants to maths) ಕಾಯಲಿ ಎಂದರು.

ಇದಕ್ಕೂ ಮುನ್ನ ರಾಜ್ಯ ಬಿಜೆಪಿ ಮಠಗಳಿಗೆ ಅನುದಾನ ಕಡಿತ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಿಸ್ಟರ್ ಸಿದ್ದರಾಮಯ್ಯ ಅವರೇ,’ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಅಂದರೆ ಇದೇನಾ..?

ಕಲೆಕ್ಷನ್ ಬಜೆಟ್ನಲ್ಲಿ ದ್ವೇಷ ರಾಜಕಾರಣ..! ಕಲೆಕ್ಷನ್ ಬಜೆಟ್ನಲ್ಲಿ ತುಷ್ಟೀಕರಣ ರಾಜಕೀಯದ ಅತಿರೇಕ..!
ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ಬ್ಯಾಂಕ್ ಸಾಲದ ಜತೆ 1 ಲಕ್ಷ ರೂ. ಸಹಾಯ..!
ಅಲ್ಪಸಂಖ್ಯಾತ ಯುವ ಜನರಿಗೆ ಕೌಶಲ್ಯ ತರಬೇತಿ..!
ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 360 ಕೋಟಿ ರೂ..!
54 ಕೋಟಿ ರೂ.ವೆಚ್ಚದಲ್ಲಿ 126 ಶಾದಿ ಮಹಲ್ ನಿರ್ಮಾಣ..!
ವಕ್ಫ್ ಮಂಡಳಿ ಆಸ್ತಿಗಳ ರಕ್ಷಣೆಗೆ 50 ಕೋಟಿ ರೂ. ಅನುದಾನ..!
ಬೆಂಗಳೂರಿನ ಹಜ್ ಭವನದಲ್ಲಿ ವಸತಿ ಸಹಿತ ವ್ಯವಸ್ಥೆ..!


ಹೀಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ತನ್ನ ಅಸಮಾಧಾನವನ್ನು ಹೊರಹಾಕಿತ್ತು.

Exit mobile version