ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಹಲವು ಹೆದ್ದಾರಿಗಳ ಟೋಲ್ ದರ ಹೆಚ್ಚಿಸಲಿರುವ NHAI.

Bengaluru: ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಪ್ರಯಾಣಿಕರ ಮೇಲೆ NHAI ಗಾಯದ (NHAI Toll Price Increase) ಮೇಲೆ ಬರೆ ಎಳೆಯಲು ಹೊರಟಿದೆ. ಏಪ್ರಿಲ್ 1 ರಿಂದ

ಬೆಂಗಳೂರು-ಮೈಸೂರು ಹೆದ್ದಾರಿಯ (Bengaluru-Mysuru Expressway) ಟೋಲ್ ದರ ಹೆಚ್ಚಳವಾಗಲಿದೆ. ಜೊತೆಗೆ ಏಪ್ರಿಲ್ 1 ರಿಂದ ವಾಹನ ಸವಾರರು ಬೆಂಗಳೂರು-ಮೈಸೂರು ಹೆದ್ದಾರಿ,

ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ನ ಹೊಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಸಲು ಹೆಚ್ಚಿನ ಟೋಲ್ ಶುಲ್ಕವನ್ನು

ಪಾವತಿಸಬೇಕಾಗುತ್ತದೆ. 2023ರ ನವೆಂಬರ್ 17 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) STRR ನ 39.6-ಕಿಮೀ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗಕ್ಕೆ ಟೋಲ್

ಸಂಗ್ರಹಿಸಲು ಪ್ರಾರಂಭಿಸಿದ ಆರು ತಿಂಗಳ ಮುಂಚೆಯೇ ಶುಲ್ಕ ಮತ್ತೊಮ್ಮೆ ಹೆಚ್ಚಳವಾಗಿದೆ.ಸಗಟು ಬೆಲೆ ಸೂಚ್ಯಂಕ (WPI) ಪ್ರಕಾರ ಟೋಲ್ ಶುಲ್ಕ ಶೇಕಡಾ 3 ರಿಂದ 14 ರಷ್ಟು ಹೆಚ್ಚಾಗಿದೆ.

ಈ ಶುಲ್ಕ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ 7 (ಬೆಂಗಳೂರು-ಹೈದರಾಬಾದ್) ಟೋಲ್ ಶುಲ್ಕಗಳು 3% ಹೆಚ್ಚಿಸಲಾಗಿದೆ,

STRR ಬಳಸುವ ವಾಹನಗಳು 14% ಹೆಚ್ಚು (NHAI Toll Price Increase) ಪಾವತಿಸಬೇಕಾಗುತ್ತದೆ.

ಈ ಬಗ್ಗೆ NHAI ಯ ಬೆಂಗಳೂರು ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ಪ್ರತಿಕ್ರಿಯೆ ನೀಡಿದ್ದು, ಟೋಲ್ ಪರಿಷ್ಕರಣೆಯು “ವಾರ್ಷಿಕ ವಾಗಿ ನಡೆಯುವಂತದ್ದು ಮತ್ತೂ ರಾಷ್ಟ್ರವ್ಯಾಪಿ ಆಗಿರುತ್ತದೆ”.

ಮಾರ್ಚ್ 11 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 80 ಕಿಮೀ ವ್ಯಾಪ್ತಿಯ STRR ನ ಎರಡು ವಿಸ್ತರಣೆಗಳನ್ನು ಉದ್ಘಾಟಿಸಿದರು. ದಾಬಾಸ್ ಪೇಟೆ-ದೊಡ್ಡಬಳ್ಳಾಪುರ ಮಾರ್ಗವು

ಸಾರ್ವಜನಿಕರಿಗೆ ಮುಕ್ತವಾಗಿದೆ. ಜೊತೆ ಟೋಲ್ ಮುಕ್ತ ಕೂಡ. ಟೋಲ್ ಸಂಗ್ರಹಿಸಲು ಗುತ್ತಿಗೆದಾರರನ್ನು ಆಯ್ಕೆ ಮಾಡಲು ಟೆಂಡರ್‌ ಕರೆಯಲಾಗಿದೆ. ಹಾಗಾಗಿ ಟೋಲ್ ಶುಲ್ಕವನ್ನು

ಏಪ್ರಿಲ್‌ನಿಂದ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ!

Exit mobile version