ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

PFI

New Delhi : ಕೇರಳದಲ್ಲಿ (Kerala) ಬಂಧಿತರಾಗಿರುವ 11 ಪಿಎಫ್ಐ (PFI) ಕಾರ್ಯಕರ್ತರನ್ನು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯವು ಅಕ್ಟೋಬರ್ 20 ರವರೆಗೆ 21 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.

ಏತನ್ಮಧ್ಯೆ, (NIA Court sends PFI Workers to custody) ರಾಷ್ಟ್ರೀಯ ತನಿಖಾ ಸಂಸ್ಥೆ, ಪಿಎಫ್ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ನನ್ನು ಪೊಲೀಸರಿಂದ ತನ್ನ ಕಸ್ಟಡಿಗೆ ಕೇಳಿದೆ.

ಈ ಹಿಂದೆ ನಡೆದ ದಾಳಿಯ ವೇಳೆ ಅಬ್ದುಲ್ ಸತ್ತಾರ್ ತಲೆಮರೆಸಿಕೊಂಡಿದ್ದನು. ನಂತರ ಆತನನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ ಇದೀಗ ಎನ್ಐಎ ಆತನನ್ನು 7 ದಿನಗಳ ಕಸ್ಟಡಿಗೆ ಕೇಳಿದೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/gold-on-old-hindu-idol/

ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ(ED) ಜಂಟಿಯಾಗಿ, ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳದ 93 ಸ್ಥಳಗಳಲ್ಲಿ ಇತ್ತೀಚೆಗೆ ದಾಳಿ ನಡೆಸಿದ್ದವು.

ಈ ವೇಳೆ ಪಿಎಫ್ಐನ ಉನ್ನತ ನಾಯಕರು ಮತ್ತು ಸದಸ್ಯರ ಮನೆಗಳು ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗಿತ್ತು. ಪಿಎಫ್‌ಐ ಸಂಘಟನೆ ಭಯೋತ್ಪಾದನೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಅದೇ ರೀತಿ ಮುಸ್ಲಿಂ ಯುವಕರಿಗೆ ಸಶಸ್ತ್ರ ತರಬೇತಿ ನೀಡಲು ತರಬೇತಿ ಶಿಬಿರಗಳನ್ನು ಆಯೋಜಿಸುತ್ತದೆ (NIA Court sends PFI Workers to custody) ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ತೀವ್ರಗಾಮಿಗೊಳಿಸುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಕೇಂದ್ರಕ್ಕೆ ವರದಿ ನೀಡಿತ್ತು.

https://youtu.be/cpUuk5DF_tE ಕುರುಬೂರು ಬಾಯ್ಸ್‌ ಕಮಾಲ್‌, ಹಳ್ಳಿ ಹೈದರ ಖೋ-ಖೋ ಕಮಾಲ್‌

ಎನ್‌ಐಎ ನೀಡಿದ ವರದಿಯ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಸಂಘಟನೆ ಮತ್ತು ಅದರ ಎಂಟು ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿತ್ತು.
Exit mobile version