ರೂ. ಮೌಲ್ಯ ಕುಸಿಯುತ್ತಿಲ್ಲ, ಬದಲಾಗಿ ಅದು ತನ್ನ ಸ್ವಾಭಾವಿಕ ಹಾದಿಯನ್ನು ಕಂಡುಕೊಳ್ಳುತ್ತಿದೆ : ನಿರ್ಮಲಾ ಸೀತಾರಾಮನ್

Nirmala sitharaman

ಅಮೆರಿಕನ್ ಡಾಲರ್(American Dollar) ಎದುರು ಭಾರತದ ರೂಪಾಯಿಯ(Indian Rupee) ಮೌಲ್ಯ(Value) ಕುಸಿತ ಕಾಣುತ್ತಿರುವ ಕಳವಳದ ನಡುವೆ, ವಿತ್ತ ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) “ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ವಾಸ್ತವವಾಗಿ ಅದು ತನ್ನ ಸ್ವಾಭಾವಿಕ ಹಾದಿಯನ್ನು ಕಂಡುಕೊಳ್ಳುತ್ತಿದೆ” ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಮಾತನಾಡಿದ ಸೀತಾರಾಮನ್,

“ಆರ್ಥಿಕ ಹಿಂಜರಿತ ಅಥವಾ ಆರ್ಥಿಕ ಹಿಂಜರಿತದ ಯಾವುದೇ ಅಪಾಯವನ್ನು ಭಾರತ ಎದುರಿಸುವುದಿಲ್ಲ, ಏಕೆಂದರೆ ಅದರ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಪರಿಪೂರ್ಣವಾಗಿವೆ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸ್ಥಳೀಯ ಕರೆನ್ಸಿ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಒಂದು ವೇಳೆ ಅಸ್ಥಿರತೆ ಕಂಡುಬಂದಲ್ಲಿ ಮಾತ್ರವೇ ಮಧ್ಯಪ್ರವೇಶಿಸುತ್ತದೆ ಎಂದು ತಿಳಿಸಿದರು. ಆರ್‌ಬಿಐ ಮಧ್ಯಸ್ಥಿಕೆಯಿಂದ ರೂಪಾಯಿ ಮೌಲ್ಯದ ಏರಿಕೆ ಅಥವಾ ಇಳಿಕೆಯನ್ನು ನಿರ್ಧರಿಸಲು ಸಾಧ್ಯವಿಲ್ಲ.

ಅದು ಕೇವಲ ಅಸ್ಥಿರತೆಯನ್ನು ತಪ್ಪಿಸಲು ಹಾಗೂ ಅದರ ಹಾದಿಯನ್ನು ಕಂಡುಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದರು. ಭಾರತೀಯ ರೂಪಾಯಿ ಇತರ ದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಾಸ್ತವವಾಗಿ ಭಾರತೀಯ ರೂಪಾಯಿಯನ್ನು ಇತರ ಕರೆನ್ಸಿಗಳಿಗೆ ಹೋಲಿಸಿದರೆ, ಅದರ ಮೌಲ್ಯ ಹೆಚ್ಚಾಗಿರುವುದು ಕಂಡುಬರುತ್ತದೆ ಎಂದರು. ಭಾರತವು ತನ್ನ ಕರೆನ್ಸಿಯ ಮೌಲ್ಯವನ್ನು ಇತರ ದೇಶಗಳೊಂದಿಗೆ ತನಗೆ ಬೇಕಾದ್ದಂತೆ ಏರಿಕೆ ಅಥವಾ ಇಳಿಕೆ ಮಾಡಲು ಸಾಧ್ಯವಿಲ್ಲ.

ಆದ್ದರಿಂದ ನಾವು ರೂಪಾಯಿ ಮೌಲ್ಯವನ್ನು ಬಲಪಡಿಸಲು ಸಾಧ್ಯವಿರುವ ಮಾರ್ಗಗಳನ್ನು ಕಂಡುಕೊಂಡು ಆರ್‌ಬಿಐ ಹಾಗೂ ಸಚಿವಾಲಯಗಳೊಂದಿಗೆ ತಕ್ಕಮಟ್ಟಿನ ಅಗತ್ಯ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು.

Exit mobile version