New Delhi : ಎಕಾನಮಿ ಕಾರ್ಗಳಲ್ಲಿ 6 ಏರ್ ಬ್ಯಾಗ್ಗಳು ಇರಬೇಕು, ಇದರಿಂದ ರಸ್ತೆ ಅಪಘಾತಗಳಲ್ಲಿ (Nithin Gadkari about 6 airbags) ಉಂಟಾಗುವ ಸಾವುಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಕೇಂದ್ರ ಸರ್ಕಾರ ಕಾನೂನು ರೂಪಿಸುವ ಆಲೋಚನೆಯಲ್ಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nithin Gadkari about 6 airbags) ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಜನಸಂಖ್ಯೆ ಮತ್ತು ಆಟೋಮೊಬೈಲ್ ಬೆಳವಣಿಗೆಯು “ನಿಯಂತ್ರಣದಿಂದ ಹೊರಗಿರುವ” ಎರಡು ವಿಷಯಗಳಾಗಿವೆ ಎಂದ ರಸ್ತೆ ಸುರಕ್ಷತೆಯ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.
ದೇಶದಲ್ಲಿ ರಸ್ತೆ ಅಪಘಾತಗಳನ್ನು (Road Accidents) ಕಡಿಮೆ ಮಾಡಲು ಆಟೋಮೊಬೈಲ್ ಉದ್ಯಮದಲ್ಲಿ ಬಹಳಷ್ಟು ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ.
ರಸ್ತೆ ಸುರಕ್ಷತೆಯು ನಮ್ಮ ಸರ್ಕಾರದ ದೊಡ್ಡ ಕಾಳಜಿಯಾಗಿದೆ. ಎಕಾನಮಿ ಕಾರ್ಗಳಲ್ಲಿ 6 ಏರ್ಬ್ಯಾಗ್ಗಳು ಇರಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ, ಈ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
https://youtu.be/tQ1qMsn2YoE ಪ್ರಚಾರಕ್ಕೆ ಮಾತ್ರ ಸೀಮಿತವಾದ ಸರ್ಕಾರ ಕೇಂದ್ರ
ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ.
ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಕಾನೂನು ರೂಪಿಸುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಕಾನಮಿ ಕಾರುಗಳ ತಯಾರಕರನ್ನು “ಒಂದು ಕಂಪನಿಯು ಆ ಕಾರುಗಳನ್ನು ರಫ್ತು ಮಾಡುವಾಗ ಆರು ಏರ್ಬ್ಯಾಗ್ಗಳನ್ನು ಹಾಕುತ್ತದೆ.
ಇದನ್ನೂ ಓದಿ : https://vijayatimes.com/husband-goes-to-jail/
ಆದರೆ ಅವುಗಳನ್ನು ಸ್ಥಳೀಯರಿಗೆ ತಯಾರಿಸುವಾಗ ಅವರು ನಾಲ್ಕು ಏರ್ ಬ್ಯಾಗ್ಗಳನ್ನು ಮಾತ್ರ ಹಾಕುತ್ತಾರೆ. ಸ್ಥಳೀಯರದ್ದು ಪ್ರಾಣವಲ್ಲವೇ? ಎಂದು ಪ್ರಶ್ನಿಸಿದ್ದರು.
ವಾಹನಗಳಿಗೆ ಆರು ಏರ್ ಬ್ಯಾಗ್ಗಳನ್ನು ಕಡ್ಡಾಯವಾಗಿ ಅಳವಡಿಸುವ ಪ್ರಕ್ರಿಯೆ ಈಗಾಗಲೇ ಪ್ರಕ್ರಿಯೆಯಲ್ಲಿದೆ ಎಂದು ಕೇಂದ್ರ ಸಚಿವರು ಆಗ ಹೇಳಿದ್ದರು.
ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವಾಗಿದ್ದರೂ ಇನ್ನೂ ಸಾಕಷ್ಟು ಕೆಲಸಗಳನ್ನು ನಾವು ಮಾಡಬೇಕಿದೆ.
ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳಿಂದ 1,50,000 ಸಾವುಗಳು ಸಂಭವಿಸುತ್ತಿವೆ. ಇದರಲ್ಲಿ ಶೇಕಡಾ 65 ರಷ್ಟು ಸಾವುಗಳು 18-34 ವಯೋಮಾನದವರಾಗಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.
- ಮಹೇಶ್.ಪಿ.ಎಚ್