Mumbai : ನಿತಿನ್ ದೇಸಾಯಿಯವರು (Nitin Desai) ಬಾಲಿವುಡ್ ನ ಖ್ಯಾತ ಕಲಾ ನಿರ್ದೇಶಕರಾಗಿದ್ದು, ಬುಧವಾರ ಅವರು (ಆಗಸ್ಟ್ ೨) ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ತಮ್ಮ ಸ್ವಂತ ಏನ್.ಡಿ ಸ್ಟುಡಿಯೋದಲ್ಲಿ ಬಿಗ್ ಬಾಸ್ (Bigg Boss) ವೀಕೆಂಡ್ ಸಂಚಿಕಾಯನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಆಗಸ್ಟ್ ೯ ರಂದು ಇವರ ಹುಟ್ಟಿದ ದಿನದ ಸಂಭ್ರಮಾಚರಣೆ ಮಾಡಬೇಕಿತ್ತು. ಆದರೂ ಅದಕ್ಕೂ ಮೊದಲೇ ಇವರು ತಮ್ಮ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದು, ಸದ್ಯಕ್ಕೆ ಪೋಲೀಸರು ಆಗಮಿಸಿದ್ದು, ತನಿಖೆ ನಡೆಯುತ್ತಿದೆ.

ಇವರ ಸಾವಿಗೆ ಹಲವಾರು ಸಂತಾಪ ಸೂಚಿಸಿದ್ದಾರೆ. ನಿತಿನ್ ದೇಸಾಯಿಯವರ ಸಾವು ಕೆಲವರಿಗೆ ಆಘಾತ ಮೂಡಿಸಿದ್ದು, ಯಾವ ವಿಚಾರಕ್ಕೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ನಷ್ಟು ತಿಳಿದು ಬರಬೇಕಾಗಿದ್ದು, ಇವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇವರು ಬಾಲಿವುಡ್ ನಲ್ಲಿ (Bollywood) ಖ್ಯಾತ ಕಲಾ ನಿರ್ದೇಶಕರಾಗಿದ್ದು, ಇವರಿಗೆ ನಾಲ್ಕು ರಾಷ್ಟಪ್ರಶಸ್ತಿಗಳು ಕೂಡ ಲಭಿಸಿವೆ. ಇನ್ನು ಇವರು ನಿರ್ಮಾಣ ಮಾಡುತ್ತಿದ್ದ ಅದ್ದೂರಿ ಸೆಟ್ಗಳನ್ನು ವೀಕ್ಷಿಸಿ ಪ್ರೇಕ್ಷಕರು ಮೂಕವಿಸ್ಮಿತರಾಗುತ್ತಿದ್ದರು. ಇನ್ನು ಇವರ ಸಿನಿಮಾಗಳ ಯಶಸ್ಸಿಗೆ ಇವರು ಹಾಕುತ್ತಿದ್ದ ಸೆಟ್ಗಳು ಕೂಡ ಒಂದು ಕಾರಣವಾಗುತ್ತಿತ್ತು.
ನಿತಿನ್ ಅವರು ದೇವದಾಸ್, ಹಮ್ ದಿಲ್ ದೇ ಚುಕೆ ಸನಮ್ (Hum Dil De Chuke Sanam), ಜೋಧಾ ಅಕ್ಬರ್ ಹಾಗೂ ಲಗಾನ್ ಮುಂತಾದ ಸಿನಿಮಾಗಳಿಗೆ ಸೆಟ್ ನಿರ್ಮಾಣ ಮಾಡಿದ್ದರು. ವಿಧು ವಿನೋದ್ ಚೋಪ್ರಾ ನಿರ್ದೇಶನದ ೧೯೪೨ ಎ ಲವ್ ಸ್ಟೋರಿ ಸಿನಿಮಾದ ಸೆಟ್ ಬಹಳಷ್ಟು ಗಮನ ಸೆಳೆದಿತ್ತು. ಇವರು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali), ವಿಧು ವಿನೋದ್ ಚೋಪ್ರಾ, ರಾಜಕುಮಾರ್ ಹಿರಾನಿ ಮುಂತಾದ ಖ್ಯಾತ ನಾಯಕರ ಜೊತೆ ಕೆಲಸ ಮಾಡಿದ್ದರು.
ಆದರೆ ಇದು ನಿಜಕ್ಕೂ ಬಾಲಿವುಡ್ ಗೆ ಆಘಾತ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದು, ಕೆಲವು ಸೆಲೆಬ್ರೆಟಿಗಳು (Celebrity) ಇವರ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಭವ್ಯಶ್ರೀ ಆರ್.ಜೆ