2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತ: ಸತ್ರೂ ಬಿಜೆಪಿ ಜೊತೆ ಮತ್ತೆ ಕೈಜೋಡಿಸಲ್ಲ; ನಿತೀಶ್‌ ಕುಮಾರ್‌

Bihar : 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ(BJP) ಪಕ್ಷಕ್ಕೆ ಸೋಲುಂ ಖಚಿತ ಎಂದು ಭವಿಷ್ಯ ನುಡಿದಿರುವ ಬಿಹಾರ ಸಿಎಂ ನಿತೀಶ್ ಕುಮಾರ್(Bihar CM Nitish Kumar) ನಾನು ಸತ್ರೂ ಮತ್ತೆ ಬಿಜೆಪಿ (Nitish Kumar BJP statement) ಜೊತೆ ಕೈ ಜೋಡಿಸಲ್ಲ ಅಂತ ಕಟುವಾಗಿ ಹೇಳಿದ್ದಾರೆ

ನಿತೀಶ್‌ ಕುಮಾರ್‌ ವಿರುದ್ಧ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಕಷ್ಟು ಆರೋಪಗಳನ್ನು ಮಾಡಲಾಗಿತ್ತು. ಇದನ್ನು ಹಾಸ್ಯ ಮಾಡಿದ ಸಿಎಂ ನಿತೀಶ್‌ ಕುಮಾರ್‌,

ನಾನು ಸಾಯ್ತೀನಿ ಆದ್ರೆ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ರು. ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಮತ್ತೆ ಕೈಜೋಡಿಸುವ ಸಾಧ್ಯತೆ ಇದೆಯಾ?

ಎಂಬ ಪ್ರತ್ರಕರ್ತರ (Reporters)ಪ್ರಶ್ನೆಗೆ ನಿತೀಶ್‌ ಕುಮಾರ್‌, ನಾನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಸಾಯಲು ಇಷ್ಟಪಡುತ್ತೇನೆ ಎಂದು ಹೇಳಿದರು.

ಹಿಂದಿಯಲ್ಲಿ ಅವರು ಈ ರೀತಿ ಹೇಳಿದ್ರು “ಮರ್ ಜಾನಾ ಕಬೂಲ್ ಹೈ ಲೇಕಿನ್ ಉನ್‌ಕೆ ಸಾಥ್ ಜಾನಾ ಹಮ್ಕೋ ಕಭಿ ಕಬೂಲ್ ನಹಿಂ ಹೈ,

ಯಹ್‌ ಯಾದ್ ರಖಿಯೇ(ನಾನು ಅವರೊಂದಿಗೆ ಕೈಜೋಡಿಸುವುದಕ್ಕಿಂತ ಸಾಯುತ್ತೇನೆ, ಇದನ್ನು ನೆನಪಿಟ್ಟುಕೊಳ್ಳಿ) ಎಂದು ಪಾಟ್ನಾದಲ್ಲಿ(Patna) ಹೇಳಿದರು.

ಇದನ್ನೂ ಓದಿ: ಅದಾನಿ ಕಂಪನಿಯಲ್ಲಿರುವ ಎಸ್‌ಬಿಐ, ಎಲ್‌ಐಸಿ ಹೂಡಿಕೆಗಳ ಬಗ್ಗೆ ತನಿಖೆ ಮಾಡುವಂತೆ ಕಾಂಗ್ರೆಸ್ ಆಗ್ರಹ

ಬಿಜೆಪಿಯ ಟೀಕೆಗಳು ಹಾಗೂ ಅವರು ನನ್ನ ಮೇಲೆ ಮಾಡಿದ ಆರೋಪಗಳು(Nitish Kumar BJP statement) ಅವರ ಹತಾಶಾ ಮನೋಭಾವವನ್ನು ಪ್ರತಿಬಿಂಬಿಸುತ್ತವೆ.

ನೀವು ಇಡೀ ಬಿಹಾರದಲ್ಲಿ(Bihar) ಎಲ್ಲಿಗೆ ಬೇಕಾದ್ರೂ ಹೋಗಿ ಜನರಿಂದ ತಿಳಿದುಕೊಳ್ಳಿ. ನಾವು ಈ ರಾಜ್ಯಕ್ಕೆ ಕೊಟ್ಟ ಕಾಣಿಕೆಯ ಬಗ್ಗೆ ಕೇಳಿ.

ಜನರ ಪ್ರಗತಿ ನಾವು ಪಡುತ್ತಿರುವ ಶ್ರಮದ ಬಗ್ಗೆ ವಿಚಾರಿಸಿ. ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಭಾರೀ ಸೋಲು ಅನುಭವಿಸುವ ಆತಂಕದಲ್ಲಿದೆ.

ಬಿಜೆಪಿಯವರು ಬಿಹಾರದಲ್ಲಿ 40 ಲೋಕಸಭಾ ಸ್ಥಾನಗಳಲ್ಲಿ 36 ಅನ್ನು ಗೆಲ್ಲುವ ಮಹತ್ವದ ಕನಸು ಕಾಣುತ್ತಿದ್ದಾರೆ. ಆದ್ರೆ ಆ ಕನಸನ್ನು ಬಿಹಾರದ ಜನತೆ ಭಗ್ನಗೊಳಿಸಲಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ 2022 ರಲ್ಲಿ ಆಗಸ್ಟ್‌ನಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಳೆದುಕೊಂಡು ಆರ್‌ಜೆಡಿ(RJD) ಮತ್ತು ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರವನ್ನು ರಚಿಸಿದ್ದ ಜೆಡಿಯು ಮುಖ್ಯಸ್ಥ,

ಸಿಎಂ ನಿತೀಶ್‌ ಕುಮಾರ್‌, ತಮ್ಮ ನಾಯಕತ್ವದಲ್ಲಿ ಸಾಕಷ್ಟು ಸುರಕ್ಷಿತವೆಂದು ಭಾವಿಸುವ ಮುಸ್ಲಿಮರ ಮತಗಳನ್ನು ಕೇಸರಿ ಪಕ್ಷವು ಪಡೆಯುತ್ತಿತ್ತು ಎಂದು ಆರೋಪಿಸಿದ್ದರು. ನಿತೀಶ್‌ ಕುಮಾರ್‌ ಅವರ ಈ ಹೇಳಿಕೆಗೆ ಬಿಜೆಪಿ ಸದ್ಯ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ!

Exit mobile version