ಈ ಊರಿನಲ್ಲಿ ಬ್ಯಾಂಕ್ಗೂ ಬೀಗ ಹಾಕುವುದಿಲ್ಲ ; ಯಾಕೆ ಎಂಬ ಕಾರಣ ಕೇಳಿದ್ರೆ ಅಚ್ಚರಿಗೊಳ್ತೀರಾ!

No lock

Ahmedabad : ಅಹಮದ್‌ನಗರದಿಂದ 35 ಕಿ.ಮೀ ದೂರದಲ್ಲಿರುವ ಶನಿ ಶಿಂಗಾಪುರ (Shani Shingapur) ಎಂಬ ಸಣ್ಣ ಹಳ್ಳಿಯು ಶನಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಭಾರತದಲ್ಲಿ (India) ಭೇಟಿ ನೀಡಲು ಇದು ಕೂಡ ಅತ್ಯಂತ ನಿಗೂಢ ಸ್ಥಳಗಳಲ್ಲಿ ಒಂದಾಗಿದೆ.

ಈ ಗ್ರಾಮದಲ್ಲಿ ಯಾವುದೇ ಮನೆಗಳು, ಶಾಲೆಗಳು ಮತ್ತು ವಾಣಿಜ್ಯ ಕಟ್ಟಡಗಳು ಸಹ ಬಾಗಿಲು (No Door No Lock for this town) ಅಥವಾ ಬಾಗಿಲಿನ ಚೌಕಟ್ಟನ್ನು ಹೊಂದಿಲ್ಲ. ಇನ್ನೂ, ವಿಶೇಷ ಎಂದರೆ, ಇಲ್ಲಿ ಒಂದು ಅಪರಾಧವೂ ವರದಿಯಾಗಿಲ್ಲ ಎನ್ನುವುದು!

ಈ ಊರಲ್ಲಿ ಹಲವಾರು ವಿಶೇಷತೆಗಳಿವೆ. ಈ ದೇವರನ್ನ ನಂಬಿರೋ ಜನರು, ಇಲ್ಲಿ ನಡೆಯುವುದೆಲ್ಲವೂ ದೇವರಿಂದ ಎಂದು ನಂಬಿದ್ದಾರೆ. ಹಾಗಾಗಿ ಇಲ್ಲಿ ಯಾವ ಮನೆಗೂ ಬೀಗ ಹಾಕುವುದಿಲ್ಲ. ಹೌದು,

ತಮಗೆ ಸಂಬಂಧ ಪಟ್ಟ ವಸ್ತುಗಳನ್ನ ಜೋಪಾನವಾಗಿ ನೋಡಿಕೊಳ್ಳಲು ಹೆಣಗಾಡುವ ಈ ಕಾಲದಲ್ಲಿ, ಇಲ್ಲಿ ಮನೆಗಳಿಗಾಗಲಿ (No Door No Lock for this town) ಅಥವಾ ಯಾವುದೇ ಅಂಗಡಿಗಳಿಗಾಗಲಿ ಬೀಗ ಹಾಕುವುದಿಲ್ಲ.

ಇದನ್ನೂ ಓದಿ : https://vijayatimes.com/bjp-reminds-rajeev-gandhi-statement/

ಎಲ್ಲಕ್ಕಿಂತ ಹೆಚ್ಚಾಗಿ ಬ್ಯಾಂಕುಗಳಿಗೂ ಇಲ್ಲಿ ಬೀಗ ಹಾಕದೆ ಇರೋದು ನಿಜಕ್ಕೂ ನೋಡುಗರಿಗೆ ಆಶ್ಚರ್ಯವಾಗುತ್ತೆ. ಆದರೆ ಇದು ಸತ್ಯ. ಏಕೆಂದರೆ, ಇಲ್ಲಿ ಕಳ್ಳರ ಕಾಟ ಇಲ್ಲ.

ಇಲ್ಲಿ ಕಳ್ಳರೇ ಇಲ್ಲ ಅಂತಲ್ಲ, ಒಂದು ಕಾಲದಲ್ಲಿ ಇಲ್ಲಿಯೂ ಬೇರೆ ಕಡೆಯಂತೆ ಕಳ್ಳ ಕಾಕರ ಕಾಟವಿತ್ತು.

ಆದರೆ, ಅವರು ಕಳ್ಳತನ ಮಾಡಿದಾಗ, ಈ ದೇವರು ಅವರಿಗೆ ನೀಡಿದ ಶಾಪದಿಂದ ಯಾವ ಕಳ್ಳನು ಸಹ ಇಲ್ಲಿ ಕಳ್ಳತನ ಮಾಡುವುದಿಲ್ಲ. ಹಾಗಾಗಿ ಇಲ್ಲಿನ ಪ್ರತೀ ಮನೆಯ ಬಾಗಿಲು ತೆರೆದೇ ಇರುತ್ತದೆ.

ಈ ಶನಿ ದೇವರ ಪುರಾಣದ ಹಿನ್ನೆಲೆ ಇನ್ನೂ ಸ್ವಾರಸ್ಯಕರವಾಗಿದೆ. ಒಬ್ಬ ಕುರುಬ, ನದಿಯಲ್ಲಿ ತೇಲಿ ಬಂದ ಕಲ್ಲಿನ ಮೂರ್ತಿಯನ್ನ ತಂದು ಒಂದೆಡೆ ಇಟ್ಟು ಪೂಜೆ ಮಾಡಲು ಆರಂಭಿಸುತ್ತಾನೆ.

ಹಾಗೆ ಈ ದೇವರ ಮೂರ್ತಿಗೆ ಒಂದು ದೇವಾಲಯ ಕಟ್ಟೋಣ ಅಂತ ಊರಿನ ಜನರೆಲ್ಲಾ ನಿರ್ಧಾರ ಮಾಡುತ್ತಾರೆ. ಆದರೆ ಅದು ಯಾವ ದೇವರು, ಏನು ಎಂಬುದು ಮಾತ್ರ ಅವರಿಗೆ ಗೊತ್ತಿರಲಿಲ್ಲ.

ಹೀಗಿರುವಾಗ ಮಾರನೇ ದಿನ ಆ ಕಲ್ಲಿನಲ್ಲಿ ರಕ್ತಸ್ರಾವವಾಗೋದು ಕಾಣಿಸುತ್ತದೆ. ಕಲ್ಲಿನಲ್ಲಿ ರಕ್ತ ಬರೋದು ಎಂದರೇನು ಅಂತ ಊರಿನ ಜನರಿಗೆ ಭಯವಾಗುತ್ತದೆ.

ಹೀಗಿರುವಾಗ ಆ ದಿನ ರಾತ್ರಿ ಆ ಕುರುಬನ ಕನಸಿನಲ್ಲಿ ಸ್ವಾಮಿ ಬಂದು, ನಾನು ಶನಿ ದೇವರು, ನಾನು ಈ ಊರಲ್ಲಿ ನೆಲೆಸಲು ಬಂದಿದ್ದೇನೆ. ನನಗೊಂದು ದೇವಾಲಯ ನಿರ್ಮಿಸು ಎಂದು ಹೇಳುತ್ತದೆ.

ಆದರೆ ಆ ದೇವಾಲಯ ಯಾವುದೇ ಕಾರಣಕ್ಕೂ ಮೇಲ್ಚಾವಣಿಯನ್ನು ಹೊಂದಿರಬಾರದು.

ಇದನ್ನೂ ಓದಿ : https://vijayatimes.com/some-one-earning-42-crore-per-hour/

ನಾನು ತೆರೆದ ಆಕಾಶದಲ್ಲಿ ಇರಬೇಕು ಎಂದು ಹೇಳುತ್ತದೆ. ಅದರಂತೆ ಆ ಕುರುಬ ಊರಿನ ಜನರೊಂದಿಗೆ ಮಾತಾಡುತ್ತಾನೆ, ಕನಸಿನಲ್ಲಿ ಸ್ವಾಮಿ ಬಂದ ವಿಷಯವನ್ನ ತಿಳಿಸಿ,

ದೇವಾಲಯ ನಿರ್ಮಾಣ ಮಾಡುವುದಾಗಿ ಹೇಳುತ್ತಾನೆ, ಅದರಂತೆ ಜನರು ದೇವರಿಗೆ ಮೇಲ್ಚಾವಣಿ ಇಲ್ಲದಂತೆ ದೇವಾಲಯ ಕಟ್ಟುತ್ತಾರೆ.

https://youtu.be/Bjjlr5M29hU


ಇಲ್ಲಿ, ಶನಿ ದೇವರಿಗೆ ತೈಲದಿಂದ ಮಾಡುವ ಅಭಿಷೇಕ ಎಂದರೆ ಬಹಳ ಇಷ್ಟ. ಇಲ್ಲಿ ಈ ಕುರುಬನಿಗೆ ಹೇಳಿದ ರೀತಿ ದೇವಾಲಯ ನಿರ್ಮಾಣವಾಯಿತು.

ಪ್ರತಿ ಶನಿವಾರ ಜನರು ಇಲ್ಲಿ ಬಂದು ಆ ಕಲ್ಲಿನ ಮೂರ್ತಿಗೆ ತೈಲಾಭಿಷೇಕ ಮಾಡಲು ಪ್ರಾರಂಭಿಸಿದರು.

ಆ ದೇವರು ಕನಸಿನಲ್ಲಿ ಹೇಳಿದಂತೆ, ಮೇಲ್ಚಾವಣಿ ಈ ದೇವಾಲಯಕ್ಕೆ ಇಲ್ಲ. ಹಾಗಾಗಿ ಭಕ್ತಾಧಿಗಳು ಯಾವ ಸಮಯದಲ್ಲಾದರೂ ಬಂದು, ಅಭಿಷೇಕ ಮಾಡಬಹುದು.


ಸಾಮಾನ್ಯವಾಗಿ, ಶನಿ ದೇವರು ಎಂದರೆ ಎಂಥವರೂ ಭಯ ಪಡುತ್ತಾರೆ. ಗ್ರಹಚಾರ ಕೆಟ್ಟರೆ, ಬೇರೆ ದೇವರನ್ನು ಸಹ ಶನಿ ಮಹಾತ್ಮ ಬಿಡುವುದಿಲ್ಲ ಎನ್ನುವುದನ್ನೂ ನಾವು ಪುರಾಣಗಳಿಂದ ತಿಳಿದಿದ್ದೇವೆ.

ಅದರಲ್ಲೂ, ಹಳ್ಳಿಗರು ಈ ಶನಿದೇವನ ಮಹಾತ್ಮೆಯ ಬಗ್ಗೆ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ. ಗ್ರಾಮದಲ್ಲಿ ಅಪರಾಧ ಪ್ರಕರಣಗಳು ಇಲ್ಲದಿರುವುದು ಶನಿ ದೇವನ ದಯೆಯಿಂದ ಎಂದು ನಂಬುತ್ತಾರೆ.
Exit mobile version