ಲಾಕ್‌ಡೌನ್‌, ಸೆಮಿ ಲಾಕ್‌ಡೌನ್ ಇಲ್ಲ… ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ: ಡಾ. ಕೆ. ಸುಧಾಕರ್

ಬೆಂಗಳೂರು, ಮಾ. 22: ರಾಜ್ಯದಲ್ಲಿ ಲಾಕ್‌ಡೌನ್‌, ಸೆಮಿ ಲಾಕ್‌ಡೌನ್‌ ಪರಿಸ್ಥಿತಿ ಇಲ್ಲ. ಆದರೆ ಕೋವಿಡ್‌ ನಿಯಮ ಮೀರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್‌ ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಲಾಕ್‌ಡೌನ್‌ ಪರಿಸ್ಥಿತಿ ಇರುವುದಿಲ್ಲ. ಕೋವಿಡ್ ಹರಡುವಿಕೆ ತಡೆಗೆ ತಜ್ಞರ ವರದಿ ಆಧರಿಸಿ ಕಠಿಣ ನಿಯಮಗಳ ಜಾರಿಗೆ ಸರ್ಕಾರ ಮುಂದಾಗಲಿದೆ. ಜನರು ಮಾಸ್ಕ್‌ ಧರಿಸುವುದನ್ನು ಮರೆತಿದ್ದು, ಅಂತಹವರಿಗೆ 250 ರೂ.ವರೆಗೆ ದಂಡ ವಿಧಿಸಲು ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಮದುವೆ ಹಾಗೂ ಇನ್ನಿತರೆ ಗುಂಪು ಸೇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ ನಿಗದಿಗೊಳಿಸಲಾಗುವುದು. ನಿಯಮ ಉಲ್ಲಂಘಿಸುವ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಜರುಗಿಸಲು ಚರ್ಚಿಸಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.

ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲು ತಜ್ಞರು ಸೂಚಿಸಿದ್ದಾರೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವಾಗ ಕೋವಿಡ್ ಟೆಸ್ಟ್ ವರದಿ ಕಡ್ಡಾಯವಾಗಿ ತರಬೇಕು ಅಥವಾ ಗಡಿಗಳಲ್ಲಿ ಸ್ಥಳದಲ್ಲಿಯೇ ಕೋವಿಡ್ ಟೆಸ್ಟ್ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಎಂದಿದ್ದಾರೆ.

Exit mobile version