ಯುಪಿ : ಮದರಸಾಗಳಲ್ಲಿ 1-8ನೇ ತರಗತಿಯ ವಿದ್ಯಾರ್ಥಿಗಳಿಗಿಲ್ಲ ಯಾವುದೇ ವಿದ್ಯಾರ್ಥಿವೇತನ!

Uttar Pradesh : ಉತ್ತರ ಪ್ರದೇಶದ ಮದರಸಾಗಳಲ್ಲಿ ಓದುತ್ತಿರುವ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ (No scholarship for students) ಅರ್ಜಿ ಸಲ್ಲಿಸುವುದನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ಇಲ್ಲಿಯವರೆಗೆ 1 ರಿಂದ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 1000 ರೂ., 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್‌ಗಳ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿತ್ತು.

ಆದ್ರೆ, ಕಳೆದ ವರ್ಷ ಸುಮಾರು 5 ಲಕ್ಷ ಮಕ್ಕಳು ವಿದ್ಯಾರ್ಥಿವೇತನ ಪಡೆದುಕೊಂಡಿದ್ದು, ಇದರಲ್ಲಿ (No scholarship for students) 16,558 ಮದರಸಾಗಳು ಭಾಗಿಯಾಗಿದ್ದವು ಎನ್ನಲಾಗಿದೆ.

ಕೇಂದ್ರ ಸರ್ಕಾರದ (Central Government) ಅನುಸಾರ, ಶಿಕ್ಷಣ ಹಕ್ಕು ಕಾಯ್ದೆಯಡಿ 1 ರಿಂದ 8 ನೇ ತರಗತಿವರೆಗೆ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ.

ಇದನ್ನೂ ಓದಿ : https://vijayatimes.com/rahul-gandhi-cycle-yatra/

ಈ ಮದರಸಾಗಳಲ್ಲಿ ಮಧ್ಯಾಹ್ನದ ಊಟ ಮತ್ತು ಪುಸ್ತಕಗಳೂ ಉಚಿತವಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಓದುವ ಸಲುವಾಗಿ ಇತರ ಅಗತ್ಯ ವಸ್ತುಗಳನ್ನು ಸಹ ನೀಡಲಾಗುತ್ತದೆ.

ಹೀಗಾಗಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಸದ್ಯ ನಿರ್ಬಂಧಿಸಲಾಗಿದೆ.

ಈ ಕಾರಣ, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಮತ್ತು ಅವರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದೆ.

ಇನ್ನು ಮೊನ್ನೆಯಷ್ಟೇ ಉತ್ತರಾಖಂಡದ (Uttarkhand) ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಮದರಸಾಗಳಲ್ಲಿ(Madarasa) ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ.

ಮದರಸಾಗಳಲ್ಲಿ ಸಮವಸ್ತ್ರ ಸೇರಿದಂತೆ ಪಠ್ಯಕ್ರಮದ ಪರಿಷ್ಕರಣೆ ಮಾಡಲು ಉತ್ತರಾಖಂಡ ಸರ್ಕಾರ ಮುಂದಾಗಿದೆ.

ಎನ್‌ಸಿಇಆರ್‌ಟಿ ಪಠ್ಯಕ್ರಮ (NCERT Syllabus) ಮತ್ತು ಡ್ರೆಸ್ ಕೋಡ್ ಅನ್ನು ಮುಂದಿನ ಶಿಕ್ಷಣ ಅಧಿವೇಶನದಿಂದ ರಾಜ್ಯದ ವಕ್ಫ್ ಮಂಡಳಿಯ ಮದರಸಾಗಳಲ್ಲಿ ಜಾರಿಗೆ ತರಲಾಗುವುದು.

ಮದರಸಾಗಳಿಗೆ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ.

https://fb.watch/h1MNPzgKYw/ S T ಸೋಮಶೇಖರ್ ಕ್ಷೇತ್ರ : 4 ವರ್ಷಗಳಾದ್ರೂ ಇಲ್ಲಿನ ಮನೆಗಳಿಗೆ ಸಿಕ್ಕಿಲ್ಲ ಮುಕ್ತಿ!

ಅದರ ಭಾಗವಾಗಿ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಉತ್ತರಾಖಂಡದ ವಕ್ಫ್ ಮಂಡಳಿಯ ವ್ಯಾಪ್ತಿಯಲ್ಲಿರುವ ಎಲ್ಲಾ 103 ಮದರಸಾಗಳಲ್ಲಿ ಮುಂದಿನ ಅಧಿವೇಶನದಿಂದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲಾಗುವುದು ಮತ್ತು ಎಲ್ಲಾ ಮದರಸಾಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಬೋಧಿಸಲಾಗುವುದು.

ಆಧುನಿಕ ಶಾಲೆಗಳ ಮಾದರಿಯಲ್ಲಿ ಮದರಸಾಗಳನ್ನು ಕೂಡ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ಡೆಹ್ರಾಡೂನ್, ಉಧಮ್ ಸಿಂಗ್ ನಗರ, ಹರಿದ್ವಾರ,

ಮತ್ತು ನೈನಿತಾಲ್ ನಲ್ಲಿರುವ 7 ಮದರಸಾಗಳನ್ನು ಮೊದಲ ಹಂತದಲ್ಲಿ ಆಧುನೀಕರಿಸಲಾಗುವುದು ಎಂದು ಉತ್ತರಾಖಂಡದ ವಕ್ಫ್ ಮಂಡಳಿಯ ಅಧ್ಯಕ್ಷ ಶಾದಾಬ್ ಶಾಮ್ಸ್ ತಿಳಿಸಿದ್ದಾರೆ.

ಅದೇ ಸಮಯದಲ್ಲಿ, ಮದರಸಾಗಳ ಸಮಯ ಮತ್ತು ಡ್ರೆಸ್ ಕೋಡ್‌ನಲ್ಲಿಯೂ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಸಾಮಾನ್ಯ ಶಾಲೆಗಳಂತೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮದರಸಾಗಳನ್ನು ನಡೆಸಲು ನಾವು ಯೋಜನೆ ಸಿದ್ಧಪಡಿಸಿದ್ದೇವೆ.

ಉತ್ತರಾಖಂಡ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾದ 103 ಮದರಸಾಗಳಲ್ಲಿ ಈ ಬದಲಾವಣೆಯನ್ನು ನಾವು ಜಾರಿಗೆ ತರುತ್ತೇವೆ.

ಇದನ್ನೂ ಓದಿ : https://vijayatimes.com/bjp-always-against-social-justice/

ಈ ಮೂಲಕ  ಮುಸ್ಲಿಂ ಮಕ್ಕಳಿಗೂ ಕೂಡಾ ಆಧುನಿಕ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನಾವು ಒದಗಿಸುತ್ತೇವೆ.  ಈ ರೀತಿಯ ಕ್ರಮಗಳ ಮೂಲಕ ಮದರಸಾ  ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತವೆ ಎಂದು ಶಾದಾಬ್ ಶಾಮ್ಸ್ ಅಭಿಪ್ರಾಯಪಟ್ಟಿದ್ದಾರೆ.
Exit mobile version