ಬಿಸಿಲ ತಾಪಕ್ಕೆ ಒಣಗುತ್ತಿರುವ ಬೆಳೆಗಳು: ಟ್ಯಾಂಕರ್ ನೀರಿಗೆ ಮೊರೆ ಹೋಗುತ್ತಿರುವ ರೈತರು.

Karnataka: ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚುತ್ತಲೇ ಇದೆ ಮಳೆ ಇಲ್ಲದೆ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತಿವೆ. ಅಲ್ಲಿಷ್ಟು,ಇಲ್ಲಿಷ್ಟು,ಬೆಳೆಗಳು ಮಳೆ ಬರುತ್ತದೆ ಎಂದು ಜೀವಹಿಡಿದುಕೊಂಡು ನಿಂತಿವೆ.ರಾಗಿ ಫಸಲು ಬಿಸಿಲಿನ ತಾಪಕ್ಕೆ ಬತ್ತಿ ಹೋಗುತ್ತಿವೆ, ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ (Tractor) ಗಳ ಮೂಲಕ ನೀರು ಖರೀದಿಸಿ ಬೆಳೆ ರಕ್ಷಣೆ ಮಾಡಿಕೊಳ್ಳುವ ಸಂಕಷ್ಟದಲ್ಲಿ ಇದ್ದಾರೆ.

ಅಷ್ಟೊ, ಇಷ್ಟೊ, ಮಳೆ ಬಿದ್ದಿದ್ದರೆ ಬೆಳೆದಿದ್ದ ರಾಗಿ ಬೆಳೆ ರೈತರ ಹಸಿವು ನೀಗಿಸುತ್ತಿತ್ತು. ಆದರೆ ಮಳೆರಾಯ ಕೈ ಕೊಟ್ಟ ಕಾರಣದಿಂದ ರಾಜ್ಯದಲ್ಲೀಗ ಬರಗಾಲ ಬಂದೊದಗಿದೆ. ರೈತರು ಬೆಳೆ ಉಳಿಸಿಕೊಳ್ಳಲು ಅವರು ಕೇಳಿದಷ್ಟು ದುಡ್ಡು ಕೊಟ್ಟು ಟ್ಯಾಂಕರ್ (Tractor) ಗಳ ಮೂಲಕ ‌ನೀರು ತರಿಸಿ ಜಮೀನುಗಳಿಗೆ ಬಿಡಿಸುತ್ತಿದ್ದಾರೆ.

ನಾವು ಬೆಳೆದ ಬೆಳೆ ನಮ್ಮ ಕೈಗೆ ಸಿಗದೆ ಇದ್ರೂ ಪರವಾಗಿಲ್ಲ ಹಸಿವಿನಿಂದ ನರಳುತ್ತಿರುವ ನಮ್ಮ ಗೋವುಗಳಿಗೆ ಮೇವು ಆದರೂ ಸಿಗಲಿ, ನಾವು ಮನುಷ್ಯರು ಎಲ್ಲಾದರೂ ದುಡಿದು ತಿನ್ನಬಹುದು ಆದರೆ ಪ್ರಾಣಿಗಳು ಹಸಿವಿನಿಂದ ಸಾಯಬಾರದು ಅನ್ನುವ ಉದ್ದೇಶದಿಂದ ರೈತರು ದೂರದ ಊರುಗಳಿಗೆ ಹೋಗಿ ಬೋರ್ ವೇಲ್ (Bore Well) ನಲ್ಲಿ ನೀರು ಖರೀದಿಸಿ ಅವರು ಕೇಳಿದಷ್ಟು ದುಡ್ಡು ಕೊಟ್ಟು ‌ಟ್ಯಾಂಕರ್ ಗಳ ಮೂಲಕ ಒಣಗುತ್ತಿರುವ ಬೆಳೆಗಳಿಗೆ ನೀರು ಬಿಡುತ್ತಿದ್ದಾರೆ.

ಜನರು ಹೊರಗಡೆ ಹೋಗಿ ಕೂಲಿ, ನಾಲಿ, ಮಾಡಿ ದುಡಿದು ತಿನ್ನಬಹುದು. ಹಸುಗಳ ಮೇವಿಗಾಗಿ ಏನು ಮಾಡೋದು ಅನ್ನುವ ಚಿಂತೆ ನಮ್ಮ ರೈತರಿಗೆ ಕಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯಸರ್ಕಾರ ಕೆಲವು ಜಿಲ್ಲೆಗಳನ್ನು ಬರಪಿಡಿತ ಜಿಲ್ಲೆಗಳೆಂದು ಘೋಷಣೆ ಮಾಡಿತು. ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಸಂಪೂರ್ಣ ಬರಪಿಡಿತ ಜಿಲ್ಲೆಯೆಂದು ಘೋಷಣೆ ಮಾಡಿತು ಆದ್ರೂ ನಮ್ಮ ಸರ್ಕಾರ ಸೂಕ್ತವಾದ ಪರಿಹಾರ ಕ್ರಮಕೈಗೊಂಡಿಲ್ಲ,ಗೋ ಶಾಲೆಗಳ ಪ್ರಾರಂಭ ಬಗ್ಗೆ ಚೂರು ಮಾಹಿತಿ ಇಲ್ಲ,ಇದರಿಂದ ಒಂದು ಕಡೆ ರೈತರು, ಮತ್ತೊಂದು ಕಡೆ ಜಾನುವಾರುಗಳು, ಪರದಾಡುವ ಸ್ಥಿತಿ ಬಂದಿದೆ.

ನಾಗರಾಜ್ (ಕೆ.ಕಲ್ಲಹಳ್ಳಿ).

Exit mobile version