ಉತ್ತರ ಕೊರಿಯಾದಲ್ಲಿ ಕೋವಿಡ್ ಸೊಂಕು ಧೃಡ ; ಮೊದಲ ಬಾರಿಗೆ ಮಾಸ್ಕ್ ಧರಿಸಿದ ಕಿಮ್ ಜೊಂಗ್!

north korea

ಉತ್ತರ ಕೊರಿಯಾದಲ್ಲಿ(North Korea) ಇದೇ ಮೊದಲ ಬಾರಿಗೆ ಹೊಸ ಕೋವಿಡ್(Covid) ಸೊಂಕು ದೃಢವಾಗಿದ್ದೇ ತಡ, ಒಂದು ದಿನದ ನಂತರ ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಉನ್(Kim Jong Un) ಏಕಾಏಕಿ ಸಭೆಯಲ್ಲಿ ಮಾಸ್ಕ್(Mask) ಧರಿಸಿ ಹಾಜರಾಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಆವರಿಸಿಕೊಂಡಾಗ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾರ್ತ್ ಕೊರಿಯಾ ಒಂದೇ ಒಂದು ಕೋವಿಡ್ ಪ್ರಕರಣವನ್ನು ದಾಖಲಿಸಲಿಲ್ಲ ಮತ್ತು ಕೋವಿಡ್ ಸೊಂಕು ಹರಡಲಿಲ್ಲ. ಆದರೆ, ಈಗ ಮೊದಲ ಪ್ರಕರಣಗಳನ್ನು ಪತ್ತೆಹಚ್ಚಿದ ನಂತರ, ಕಿಮ್ ಜೊಂಗ್-ಉನ್ ನಗರಗಳು ಮತ್ತು ಕೌಂಟಿಗಳ ಸಂಪೂರ್ಣ ಲಾಕ್‌ಡೌನ್‌ಗೆ ಕರೆ ನೀಡಿ, ವೈರಸ್ ಹರಡುವುದನ್ನು ತಡೆಯಲು ಕೆಲಸದ ಸ್ಥಳಗಳನ್ನು ಘಟಕಗಳಿಂದ ಪ್ರತ್ಯೇಕಿಸಬೇಕು ಎಂದು ಹೇಳಿದರು.


ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಏಕೆಂದರೆ ದೇಶವು ಕಳಪೆ ಆರೋಗ್ಯ ವ್ಯವಸ್ಥೆಯನ್ನು ಹೊಂದಿದೆ ಮತ್ತು ಅದರ 26 ಮಿಲಿಯನ್ ಜನರು ಇಲ್ಲಿಯವರೆಗೂ ಹೆಚ್ಚಾಗಿ ಲಸಿಕೆ ಹಾಕಿಸಿಲ್ಲ ಎಂದು ಹೇಳಲಾಗಿದೆ. ರಾಜಧಾನಿ ಪ್ಯೊಂಗ್‌ಯಾಂಗ್‌ನಲ್ಲಿ ಜ್ವರದಿಂದ ಬಳಲುತ್ತಿರುವ ಅನಿರ್ದಿಷ್ಟ ಸಂಖ್ಯೆಯ ಜನರಿಂದ ಭಾನುವಾರ ಸಂಗ್ರಹಿಸಲಾದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧಿಕೃತ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ಪ್ರಕಟಿಸಿದೆ.

Exit mobile version