OLA-UBER ಕಂಪನಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ ಸಾರಿಗೆ ಇಲಾಖೆ

ola

Bengaluru : ಆ್ಯಪ್ ಆಧಾರಿತ ಸಾರಿಗೆ ಸೇವೆ ನೀಡುತ್ತಿರುವ ಓಲಾ(Ola) ಮತ್ತು ಉಬರ್‌(Uber) ಕಂಪನಿಗಳು ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಉಲ್ಲಂಘನೆ (Voilate) ಮಾಡಿ,

ಗ್ರಾಹಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಆ್ಯಪ್ ಆಧಾರಿತ ಸಾರಿಗೆ ಕಂಪನಿಗಳಿಗೆ ಶೋಕಾಸ್‌ ನೋಟಿಸ್‌(Notice to ola-uber taxi) ನೀಡಿದೆ.

ಓಲಾ ಮತ್ತು ಉಬರ್‌ ಮೇಲೆ ಕೇಳಿಬಂದಿರುವ ಪ್ರಮುಖ ಆರೋಪಗಳೆಂದರೆ, ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳ ಕನಿಷ್ಟ ದರ 30 ರೂಪಾಯಿ ಇರಬೇಕು. ಆದರೆ ಓಲಾ ಮತ್ತು ಉಬರ್‌ ಕನಿಷ್ಟ ದರಕ್ಕಿಂತ ಹೆಚ್ಚಿನ ಹಣವನ್ನು ಪಡೆಯುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/yogi-gives-deadline-to-officers/

ಅದೇ ರೀತಿ ಸಾರಿಗೆ ಇಲಾಖೆಯ ನಿಯಮದ ಪ್ರಕಾರ, ವೇಟಿಂಗ್ ಚಾರ್ಜ್ ಅನ್ನು ಪ್ರತಿ 5 ನಿಮಿಷಕ್ಕೆ 5 ರೂ.ಗಳಂತೆ ನಿಗದಿ ಪಡಿಸಲಾಗಿತ್ತು. ಆದರೆ, ಆ್ಯಪ್ ಆಧಾರಿತ ಕಂಪನಿಗಳು 100 ರೂಪಾಯಿಗಳನ್ನು ಪಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಈ ಎಲ್ಲ ಆರೋಪದ ಕುರಿತು ವಿವರಣೆ ನೀಡುವಂತೆ ಕಂಪನಿಗಳಿಗೆ ಸಾರಿಗೆ ಇಲಾಖೆ 3 ದಿನಗಳ (Notice to ola-uber taxi) ಗಡುವು ನೀಡಿದೆ.

Taxi Ride

ಸದ್ಯ ಆ್ಯಪ್ ಆಧಾರಿತ ಓಲಾ-ಊಬರ್ ನಲ್ಲಿ ಆಟೋ ಸೇವೆ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಲಾಗಿದೆ. ಅದೇ ರೀತಿ ಆ್ಯಪ್ ಆಧಾರಿತ ಸಂಸ್ಥೆಗಳಲ್ಲಿ ಆಟೋ ಸೇವೆ ಸ್ಥಗಿತ ಮಾಡುವಂತೆ ಸಾರಿಗೆ ಇಲಾಖೆ ನೋಟಿಸ್(notice-to-ola-uber-taxi) ನೀಡಿದೆ.

ನಿಬಂಧನೆಗಳ ಪ್ರಕಾರ ಟ್ಯಾಕ್ಸಿ ಸೇವೆಗೆ ಮಾತ್ರ ಓಲಾ-ಉಬರ್ ಲೈಸೆನ್ಸ್ ನಲ್ಲಿ ಅವಕಾಶವಿದೆ.

https://youtu.be/idkH42k2EQ4 GATE CRASH | ಆರ್‌ಟಿಓ ಬ್ರೋಕರ್‌ ದರ್ಬಾರ್‌ !

ಸಾರಿಗೆ ಇಲಾಖೆಯ ನಿಯಮ ಉಲ್ಲಂಘಿಸಿ ಆಟೋ ಸೇವೆ ಒದಗಿಸಲಾಗುತ್ತಿದೆ. ಅಗ್ರಿಗೇಟರ್ ಸೇವೆಯಡಿಯಲ್ಲಿ ಆಟೋ ಸೇವೆ ಒದಗಿಸೋದನ್ನು ಕೂಡಾ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಲಾಗಿದೆ.

ಹಾಗೇ, ಮೂರು ದಿನದೊಳಗೆ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
Exit mobile version