ಭಾರತದ ವಿರುದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತ ಸಂಚು!

ಪ್ರವಾದಿ(Prophet) ಪೈಗಂಬರ್ ಅವರ ವಿರುದ್ದ ನೂಪುರ್ ಶರ್ಮಾ(Nupur Sharma) ನೀಡಿರುವ ಹೇಳಿಕೆಯನ್ನಿಟ್ಟುಕೊಂಡು ಭಾರತದ ವಿರುದ್ದ ವ್ಯವಸ್ಥಿತವಾಗಿ ಅಂತರಾಷ್ಟ್ರೀಯ(International) ಮಟ್ಟದಲ್ಲಿ ಸಂಚು ನಡೆಯುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿವೆ.


ಶುಕ್ರವಾರ ಪ್ರಾರ್ಥನೆಯ ನಂತರ ದೇಶದ ಬಹುತೇಕ ಭಾಗಗಳಲ್ಲಿ ಕಲ್ಲು ತೂರಾಟ ನಡೆದಿದೆ. ಜಮ್ಮು ಕಾಶ್ಮೀರದಿಂದ(Jammu Kashmir) ಹಿಡಿದು ದೆಹಲಿ ಮತ್ತು ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಗಲಭೆ ನಡೆದಿದ್ದು, ಶಾಂತಿ ಕದಡುವ ಪ್ರಯತ್ನ ನಡೆದಿದೆ. ಈ ಕುರಿತು ಗುಪ್ತಚರ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಭಾರತದಲ್ಲಿ ಕೋಮುಗಲಭೆ ನಡೆಸಲು ಮತ್ತು ಶಾಂತಿ ಸುವ್ಯವಸ್ಥೆ ಹದಗೆಡಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಈ ಕೃತ್ಯಕ್ಕೆ ಪಾಕಿಸ್ತಾನ ಸೇರಿದಂತೆ ಅನೇಕ ಇಸ್ಲಾಮಿಕ ರಾಷ್ಟ್ರಗಳು ಹಣಕಾಸಿನ ನೆರವು ನೀಡುತ್ತಿದ್ದು, ದೇಶದಲ್ಲಿರುವ ಕೆಲ ಮೂಲಭೂತ ಸಂಘಟನೆಗಳು ಇದಕ್ಕೆ ನೆರವನ್ನು ನೀಡುತ್ತಿವೆ.

ಹೀಗಾಗಿ ದೊಡ್ಡ ಮಟ್ಟದಲ್ಲಿ ಗಲಭೆ ನಡೆಸಲು ಯೋಜಿಸಲಾಗಿದೆ. ದೇಶಾದ್ಯಂತ ಗಲಭೆ ನಡೆಸಲು ಸಂಚು ನಡೆದಿದೆ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ(Central Government) ವರದಿ ನೀಡಿವೆ. ಕೇಂದ್ರ ಸರ್ಕಾರ ಇದೀಗ ಎಲ್ಲ ರಾಜ್ಯಗಳಿಗೂ ತುರ್ತು ಸಂದೇಶ ರವಾನಿಸಿದ್ದು, ಪ್ರಾರ್ಥನೆ ಮತ್ತು ಇಸ್ಲಾಮಿಕ ಕಾರ್ಯಕ್ರಮಗಳ ಮೇಲೆ ನಿಗಾವಹಿಸುವಂತೆ ಸೂಚಿಸಿದೆ. ಅದೇ ರೀತಿ ಪ್ರಚೋದನಾಕಾರಿ ಭಾಷಣ ಮತ್ತು ಕೋಮು ಪ್ರಚೋದನೆ ಮಾಡುವ ಗುಂಪುಗಳ ಮೇಲೆಯೂ ಕಣ್ಣಿಡುವಂತೆ ಸೂಚಿಸಿದೆ. ಮುಸ್ಲಿಂಮರು ಹೆಚ್ಚಿರುವ ಪ್ರದೇಶಗಳಲ್ಲಿ ಅಗತ್ಯ ಭದ್ರತೆ ಕೈಗೊಳ್ಳಿ, ಅಗತ್ಯಬಿದ್ದರೆ ಅರೆಸೇನಾ ಪಡೆಯನ್ನು ಬಳಸಿಕೊಳ್ಳಿ ಎಂದು ಕೇಂದ್ರ ತಿಳಿಸಿದೆ.

ಈ ನಡುವೆ ಉತ್ತರಪ್ರದೇಶ(Uttarpradesh) 109ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಿದ್ದು, ಅನೇಕರಿಗಾಗಿ ಉತ್ತರಪ್ರದೇಶ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಗಲಭೆಕೋರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

Exit mobile version