`ಓಕ್ಲೀಫ್ ಚಿಟ್ಟೆ’ ಕಣ್ಣಿಗೆ ಕಾಣಿಸುವುದೇ ಅಪರೂಪ ; ಈ ಚಿಟ್ಟೆ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ ಓದಿ!

ಬಣ್ಣ ಬಣ್ಣದ ಚಿಟ್ಟೆಗಳು(Butterfly) ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ ನೀಡುತ್ತವೆ. ಚಿಟ್ಟೆಗಳು ಕೀಟಗಳಲ್ಲಿಯೇ ಅತ್ಯಂತ ಸುಂದರವಾದ ಜೀವಿಯಾಗಿದೆ.

ನೀವು ಎಷ್ಟೋ ಅಂದವಾದ ವಿಚಿತ್ರ ಬಣ್ಣದ ಚಿಟ್ಟೆಗಳನ್ನು ನೋಡಿರುತ್ತೀರಾ. ಅಂತಹ ವಿಚಿತ್ರ ಚಿಟ್ಟೆಗಳಲ್ಲಿ ಒಂದು ಈ ಓಕ್ಲೀಫ್ ಚಿಟ್ಟೆ(Oklif Butterfly). ಇದರ ದೇಹರಚನೆ ನೋಡಿದ್ರೆ ನೀವು ಖಂಡಿತವಾಗಿಯೂ ಅಚ್ಚರಿಗೊಳ್ಳುತ್ತೀರಾ. ಏಕೆಂದರೆ ಈ ಚಿಟ್ಟೆಯನ್ನು ನೋಡಿದಾಗ ಇದು ನಿಜವಾದ ಚಿಟ್ಟೆಯಾ? ಅಥವಾ ಒಣಗಿದ ಎಲೆಯಾ? ಎಂದು ಅನುಮಾನ ಮೂಡುತ್ತದೆ. ಮೊದಲನೇ ಸಲ ನೀವು ಈ ಚಿಟ್ಟೆಯನ್ನು ನೋಡಿದರೆ ಖಂಡಿತ ಅದು ಒಣಗಿದ ಮರದ ಎಲೆ ಎಂದು ನೀವು ಅಂದುಕೊಳ್ಳುವುದು ಖಂಡಿತ. ಅಷ್ಟೇ ಅಲ್ಲ ಈ ಚಿಟ್ಟೆ ಪ್ರಪಂಚದಲ್ಲಿ ಬಹಳ ಅಪರೂಪದ ಜಾತಿಯ ಚಿಟ್ಟೆಯಾಗಿದೆ.

ಈ ಚಿಟ್ಟೆಗಳನ್ನು ಹುಡುಕುವುದೂ ಒಂದೇ, ಸಮುದ್ರದ ನೀರನ್ನು ಅಳತೆ ಮಾಡುವುದೂ ಒಂದೇ. ಏಕೆಂದರೆ ಕಾಡಿನಲ್ಲಿ ಇರುವ ಎಲ್ಲಾ ಒಣಗಿದ ಎಲೆಗಳನ್ನು ಹಿಡಿದುಕೊಂಡು ನೋಡಬೇಕಾಗುತ್ತದೇ, ಇಲ್ಲವಾದರೇ ಅದು ಹಾರುತ್ತಿರುವಾಗ ಕಂಡುಹಿಡಿಯಬಹುದು. ಸಾಮಾನ್ಯವಾಗಿ ಇದು ನೆಲದ ಮೇಲಿದ್ದಾಗ ಕಂಡು ಹಿಡಿಯಲು ಸಾಧ್ಯವೇ ಇಲ್ಲ.
ಈ ಚಿಟ್ಟೆಗಳು ಹೊರಗಿನಿಂದ ಒಣಗಿದ ಎಲೆ ರೀತಿ ಕಂಡರೂ ಒಳಗೆ ಸುಂದರವಾದ ಬಣ್ಣ ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತವೆ. ಇಂತಹ ಒಣಗಿದ ಎಲೆಯ ಬಣ್ಣದಿಂದ ಇದು ಮರದ ಮೇಲಿದ್ರೂ ಗಮನಿಸೋಕೆ ಬಹಳ ಕಷ್ಟ.

ಆದ್ದರಿಂದಲೇ ಕೆಲವೇ ಕೆಲವು ಅದೃಷ್ಟವಂತರು ಮಾತ್ರ ಈ ಚಿಟ್ಟೆಗಳನ್ನು ನೋಡಬಹುದು. ಇದು ಉಷ್ಣವಲಯದ ಕಾಡುಗಳಲ್ಲಿ, ಭಾರತದಿಂದ ಜಪಾನ್‌ವರೆಗೂ ಕಂಡುಬರುತ್ತದೆ. ಆದರೆ ಇತ್ತೀಚಿಗೆ ಈ ಚಿಟ್ಟೆಗಳ ಸಂಖ್ಯೆ ಕುಠಿಂತಗೊಳ್ಳುತ್ತಿದೆ ಎಂಬುದೇ ಬೇಸರದ ಸಂಗತಿ.

Exit mobile version