ಜನರ ಬೇಜಾವಾಬ್ಬಾರಿಯಿಂದ 4.54ಕೋಟಿ ದಂಡ ಕಟ್ಟಿದ ಬೆಂಗಳೂರು ಜನರು

ಬೆಂಗಳೂರು,ಜೂ.16: ಕೊರೊನಾ 2ನೇ ಅಲೆ ತಡೆಯಲು ರಾಜ್ಯ ಸಕಾ೯ರ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಜೂನ್ 14ರ ತನಕ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆ ತನಕ ಮಾತ್ರ ಅವಕಾಶ ನೀಡಲಾಗಿತ್ತು ಬಳಿಕ ಅನಗತ್ಯವಾಗಿ ತಿರುಗಾಡಿ ನಿಯಮಗಳನ್ನು ಉಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿತ್ತು. 

ಬೆಂಗಳೂರು ನಗರ ಪೊಲೀಸರು ಪ್ರತಿಯೊಂದು ವಿಭಾಗದಲ್ಲಿಯೂ ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಇರುವ ಜನರಿಂದ ದಂಡವನ್ನು ಸಂಗ್ರಹ ಮಾಡಿದ್ದಾರೆ. ಮಾಸ್ಕ್ ಧರಿಸದ 1.52 ಲಕ್ಷ ಜನರಿಗೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ 34 ಸಾವಿರ ಜನರಿಗೆ ದಂಡವನ್ನು ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅನಗತ್ಯವಾಗಿ ಸಂಚಾರ ನಡೆಸಿದ ಜನರಿಂದ 43,615 ದ್ವಿಚಕ್ರ ವಾಹನ, 2,326 ಮೂರು ಚಕ್ರದ ವಾಹನಗಳು ಮತ್ತು 3,083 ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಕ್‌ಡೌನ್ ಸಂಪೂರ್ಣವಾಗಿ ಮುಕ್ತಾಯವಾದ ಬಳಿಕ ಜನರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ತೆರಳಿ ವಾಹನಗಳನ್ನು ದಂಡಕಟ್ಟಿ ಬಿಡಿಸಿಕೊಳ್ಳುತ್ತಿದ್ದು. ಒಟ್ಟಾರೆಯಾಗಿ ಸಕಾ೯ರ 4.54 ಕೋಟಿ ದಂಡ ವಸೂಲಿ ಮಾಡಿದೆ.

Exit mobile version