ಮಹಿಳಾ ಮತದಾರರ ಒಲೈಕೆಗಿಳಿದ ಕಾಂಗ್ರೆಸ್‌ ಬಿಜೆಪಿ ; ಭರ್ಜರಿ ಆಫರ್‌ಗಳ ಸುರಿಮಳೆ

Bengaluru : ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ  ರಾಜ್ಯದ ಮಹಿಳಾ ಮತದಾರರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್‌(congress) ಮತ್ತು ಬಿಜೆಪಿ(bjp) ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.  ಮಹಿಳಾ ಮತದಾರರ (offers to womens voters) ಮನಗೆಲ್ಲಲು ಎರಡೂ ಪಕ್ಷಗಳು ಭರ್ಜರಿ ಆಫರ್‌ಗಳನ್ನು ನೀಡಿವೆ.

ಈ ಬಾರಿ ಕಾಂಗ್ರೆಸ್‌“ಗ್ಯಾರಂಟಿ” (Guarantee)ಎಂಬ ಹೆಸರಿನಲ್ಲಿ  ಭರವಸೆಗಳನ್ನು ನೀಡುತ್ತಿದೆ. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬವನ್ನು ಮುನ್ನಡೆಸುವ ಪ್ರತಿ ಮಹಿಳೆಗೆ ತಿಂಗಳಿಗೆ 2,000 ರೂ.

ನೀಡುವ ‘ಗೃಹಲಕ್ಷ್ಮಿ’ (Gruha lakshmi)ಎಂಬ ಭತ್ಯೆ ಗ್ಯಾರಂಟಿಯನ್ನು  ಕಾಂಗ್ರೆಸ್‌ನೀಡಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕಡಿಮೆ ಆದಾಯದ ಕುಟುಂಬಗಳ ಗೃಹಿಣಿಯರಿಗೆ ಆರ್ಥಿಕ ನೆರವು ನೀಡಲು ‘ಗೃಹಿಣಿ ಶಕ್ತಿ’ ಎಂಬ ಯೋಜನೆಯ ಜಾಹೀರಾತುಗಳನ್ನು(Advertisement) ದಿನಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಿಸುತ್ತಿದೆ.

ಇನ್ನು ಬೆಂಗಳೂರಿನ ಗಾರ್ಮೆಂಟ್ ಉದ್ಯಮದ ಕಾರ್ಮಿಕರಂತಹ ಮಹಿಳಾ ಗುಂಪುಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಿಯಾಂಕಾ ವಾದ್ರಾ(Priyanka vadra)

ಅವರ ‘ನಾ ನಾಯಕಿ’ ಕಾರ್ಯಕ್ರಮಕ್ಕೆ ಪ್ರತಿಯಾಗಿ ಮಹಿಳಾ ಮತದಾರರನ್ನು ಸೆಳೆಯಲು ಮುಂದಿನ ದಿನಗಳಲ್ಲಿ  ಮಹಿಳೆಯರಿಗಾಗಿಯೇ ಕೆಲ ರ್ಯಾಲಿಗಳನ್ನು ನಡೆಸಲು ಬಿಜೆಪಿ ಕೂಡ ತೆರೆಮರೆಯಲ್ಲಿ ತಯಾರಿ ಆರಂಭಿಸಿದೆ.

ಇದಲ್ಲದೇ ಕಳೆದ ವರ್ಷದ ಬಜೆಟ್‌ನಲ್ಲಿ  ಮಹಿಳೆಯರಿಗೆ(offers to womens voters) ನೀಡಿರುವ ಅನುದಾನದ ಕುರಿತು ಬಿಜೆಪಿ ಸರಣಿ ಜಾಹೀರಾತುಗಳನ್ನು ನೀಡುತ್ತಿದೆ. 

ಕಳೆದ ವರ್ಷ 43,188 ಕೋಟಿ ರೂಪಾಯಿಗಳನ್ನು ಬಿಜೆಪಿ ಸರ್ಕಾರ ಮಹಿಳೆಯರಿಗೆ ನೀಡಿತ್ತು. ಈ ಎಲ್ಲ ಯೋಜನೆಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ‘ಸ್ತ್ರೀ ಸಾಮರ್ಥ್ಯ, ರಾಜ್ಯದ 7,500 ಸ್ವ-ಸಹಾಯ ಗುಂಪುಗಳಿಗೆ 1 ಲಕ್ಷ ರೂ.

ನೆರವು ನೀಡುವ ‘ಅಮೃತ್ ಸ್ವ-ಸಹಾಯ ಮೈಕ್ರೋ ಎಂಟರ್‌ಪ್ರೈಸ್’ ಯೋಜನೆ ಹೀಗೆ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ವಿವಿಧ ಕೌಶಲ್ಯ ತರಬೇತಿ, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕಾರ್ಯಕ್ರಮಗಳನ್ನು ಪಟ್ಟಿಮಾಡಿದೆ.

2022ರ ಬಜೆಟ್‌ನಲ್ಲಿ ಬೊಮ್ಮಾಯಿ(Basavaraj bommai) ಸರ್ಕಾರ ಘೋಷಿಸಿದ ವಿವಿಧ ಕಲ್ಯಾಣ ಯೋಜನೆಗಳನ್ನು ಹೈಲೈಟ್ ಮಾಡಲು ಬಿಜೆಪಿ ನಾಯಕರು  ರಾಜ್ಯ ಪ್ರವಾಸ ಮಾಡಲು ಸಿದ್ದತೆ ನಡೆಸಿದ್ದಾರೆ.

ಇದನ್ನೂ ಓದಿ: https://vijayatimes.com/bk-hariprasad-prostitutes-statement/

ಕಾಂಗ್ರೆಸ್‌ಬಿಜೆಪಿ ಪಕ್ಷಗಳು ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಿದ್ದರು,

ಜೆಡಿಎಸ್‌(JDS) ಮಾತ್ರ ಸದ್ಯಕ್ಕೆ ಈ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮವನ್ನು ಘೋಷಣೆ ಮಾಡಿಲ್ಲ.

ಉತ್ತರಕರ್ನಾಟಕ ಭಾಗದಲ್ಲಿ ʼಪಂಚರತ್ನʼ(Pancharathna) ಯಾತ್ರೆ ನಡೆಸುತ್ತಿರುವ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಯಾತ್ರೆ ಮುಗಿದ ಬಳಿಕ ಮಹಿಳಾ ಮತದಾರರನ್ನು ಸೆಳೆಯಲು ಯಾವೆಲ್ಲಾ ಭರವಸೆಗಳನ್ನು ಜೆಡಿಎಸ್‌ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Exit mobile version