ಚೀನಾದಲ್ಲಿ 3 ಮಕ್ಕಳ ನೀತಿಗೆ ಅಧಿಕೃತ ಒಪ್ಪಿಗೆ

ಚೀನಾ ಆ 21 : ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಇದೀಗ ತನ್ನ ಜನಸಂಖ್ಯಾ ನೀತಿಯನ್ನು ಸಡಿಲಗೊಳಿಸಿದೆ. ಈ ಬಗ್ಗೆ ಚೀನಾದ ಚೀನಾ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಅವರ ಅಧಿಕೃತ ಘೋಷಣೆಯೊಂದಿಗೆ ಇನ್ನುಮುಂದೆ ಚೀನಾ ಪ್ರಜೆಗಳು 3 ಮಕ್ಕಳನ್ನು ಹೊಂದುವ ಅವಕಾಶವನ್ನು ಚೀನಾ ಸರ್ಕಾರ ಮಾಡಿಕೊಟ್ಟಿದೆ.  ಚೀನಾ ಜನಸಂಖ್ಯೆಯಲ್ಲಿ ವೃದ್ಯಾಪ್ಯ ಹಂತಕ್ಕೆ ತೆರಳುತ್ತಿರುವ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಜನನ ಪ್ರಮಾಣ ನಿಧಾನಗತಿಯಲ್ಲಿದೆ. ಜನನ ಪ್ರಮಾಣ ಮಂದಗತಿಯಲ್ಲಿ ಏರುವುದಕ್ಕೆ ಎರಡು ಮಕ್ಕಳ ನೀತಿಯೇ ಕಾರಣವಾಗಿತ್ತು. ಭವಿಷ್ಯದ ಚಿಂತನೆಯಲ್ಲಿರುವ ಚೀನಾ ಈ ಮಹತ್ವದ ಹೆಜ್ಜೆಯನ್ನ ಇರಿಸಿದೆ. 30 ವರ್ಷಗಳ ಹಿಂದೆ ಚೀನಾ ಸರ್ಕಾರ ಕೇವಲ ಒಂದು ಮಗುವನ್ನು ಮಾತ್ರ ಹೊಂದಲು ಅವಕಾಶವಿತ್ತು ಆದರೆ  2016ರಲ್ಲಿ ಚೀನಾದಲ್ಲಿ ಎಲ್ಲಾ ದಂಪತಿ ಎರಡು ಮಕ್ಕಳನ್ನು ಹೊಂದಲು ಅನುಮತಿ ನೀಡಲಾಗಿತ್ತು. ನೂತನ ಕಾನೂನಿನ ಅಡಿಯಲ್ಲಿ ಮೂರನೇ ಮಗುವನ್ನು ಹೊಂದುವ ದಂಪತಿಗಳಿಗೆ ಹಣಕಾಸು ನೆರವು, ತೆರಿಗೆ ರಿಯಾಯಿತಿ, ವಿಮಾ ಸೌಲಭ್ಯ, ವಸತಿ, ಉದ್ಯೋಗ, ಮಗುವಿನ ಪೋಷಣೆ ಹಾಗೂ ಶಿಕ್ಷಣಕ್ಕೂ ಸರಕಾರದಿಂದಲೇ ನೆರವು ಸಿಗಲಿದೆ. ಮೂರನೇ ಮಗು ಹೊಂದುವ ಮುನ್ನ ದಂಪತಿಗಳು ಆರ್ಥಿಕ ಸ್ಥಿತಿಗತಿ ಕುರಿತು ಯೋಚಿಸಬಾರದು ಎಂಬ ದಿಸೆಯಲ್ಲಿ ಸರಕಾರವೇ ನೆರವು ನೀಡುವುದಾಗಿ ಘೋಷಿಸಿದೆ.
1979ರಲ್ಲಿ ಚೀನಾದಲ್ಲಿ  ಕುಟುಂಬಕ್ಕೆ ಒಂದೇ ಮಗು ನೀತಿ, ಇತ್ತು ಬಳಿಕ  2015ರಲ್ಲಿ ಕುಟುಂಬಕ್ಕೆ 2 ಮಕ್ಕಳ ನೀತಿ ಜಾರಿಗೆ ತರಲಾಗಿತ್ತು ಅದರೆ ಇದೀಗ ಯುವ ಜನನ ಪ್ರಮಾಣದಲ್ಲಿ ಖುಸಿತವಾಗಿರುವುದರಿಂದ ಇದೀಗ ಚೀನಾ ತನ್ನ ಕಾನೂನಿನಲ್ಲಿ ಮಹತ್ವದ ಬದಲಾವಣೆ ಮಾಡಿದ್ದು 3 ಮಕ್ಕಳನ್ನು ಹೊಂದಲು ಅವಕಾಶ ನೀಡಿದೆ.

Exit mobile version