ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯಿಲ್ ಇಂಡಿಯಾ ಲಿಮಿಟೆಡ್ (Oil India limited)ವಿವಿಧ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ಅರ್ಹ ವ್ಯಕ್ತಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಯಿಲ್ ಇಂಡಿಯಾ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ – www.oil-india.com ಗೆ ಭೇಟಿ ನೀಡುವ ಮೂಲಕ ಈ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನ ಮಾರ್ಚ್ 15, 2022.


ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಫೆಬ್ರವರಿ 21, 2022, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 15, 2022
ಹುದ್ದೆಗಳ ವಿವರಗಳು
ಮ್ಯಾನೇಜರ್: 1 ಹುದ್ದೆ
ಸೂಪರಿಂಟೆಂಡಿಂಗ್ ಇಂಜಿನಿಯರ್: 2 ಹುದ್ದೆ
ಸೂಪರಿಂಟೆಂಡಿಂಗ್ ಮೆಡಿಕಲ್ ಆಫೀಸರ್: 2 ಹುದ್ದೆ
ಹಿರಿಯ ವೈದ್ಯಕೀಯ ಅಧಿಕಾರಿ: 1 ಹುದ್ದೆ
ಹಿರಿಯ ಭದ್ರತಾ ಅಧಿಕಾರಿ: 1 ಹುದ್ದೆ
ಹಿರಿಯ ಅಧಿಕಾರಿ: 43 ಹುದ್ದೆ
ಸೀನಿಯರ್ ಅಕೌಂಟ್ಸ್ ಆಫೀಸರ್ / ಸೀನಿಯರ್ ಇಂಟರ್ನಲ್ ಆಡಿಟ್: 5 ಹುದ್ದೆ.


ಶೈಕ್ಷಣಿಕ ಅರ್ಹತೆ :
ಮ್ಯಾನೇಜರ್ (ERP-HR): ಅಭ್ಯರ್ಥಿಯು SAP HCM ಪ್ರಮಾಣ ಪತ್ರದೊಂದಿಗೆ ಕನಿಷ್ಠ 65% ಅಂಕಗಳೊಂದಿಗೆ ಕನಿಷ್ಠ 04 ವರ್ಷಗಳ ಅವಧಿಯ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್ನಲ್ಲಿ ಪದವಿಯನ್ನು ಹೊಂದಿರಬೇಕು ಮತ್ತು 03 ವರ್ಷಗಳ ಅನುಭವವನ್ನು ಹೊಂದಿ ಸೂಪರಿಂಟೆಂಡಿಂಗ್ ಮೆಡಿಕಲ್ ಆಫೀಸರ್ (ಪೀಡಿಯಾಟ್ರಿಕ್ಸ್): MD (ಪೀಡಿಯಾಟ್ರಿಕ್ಸ್) / ಡಿಎನ್ಬಿ (ಪೀಡಿಯಾಟ್ರಿಕ್ಸ್) ವೈದ್ಯಕೀಯ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು/ವಿಶ್ವವಿದ್ಯಾಲಯ/ ರಾಷ್ಟ್ರೀಯ ಪರೀಕ್ಷಾ ಮಂಡಳಿಯಿಂದ ನಡೆಸಲ್ಪಡುವ DNB (ಪೀಡಿಯಾಟ್ರಿಕ್ಸ್) ಪ್ರಮಾಣಪತ್ರ.


ಹಿರಿಯ ವೈದ್ಯಾಧಿಕಾರಿ: ಅಭ್ಯರ್ಥಿಗಳು ವೈದ್ಯಕೀಯ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು / ವಿಶ್ವವಿದ್ಯಾಲಯದಿಂದ MBBS ಪದವಿಯನ್ನು ಹೊಂದಿರಬೇಕು ಮತ್ತು ಕನಿಷ್ಠ 02 ವರ್ಷಗಳ ಅನುಭವವನ್ನು ಹೊಂದಿರಬೇಕು. ಹಿರಿಯ ಅಧಿಕಾರಿ (ಸಿವಿಲ್): ಕನಿಷ್ಠ 65% ಅಂಕಗಳೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಕನಿಷ್ಠ 4 ವರ್ಷಗಳ ಅವಧಿಯ ಬ್ಯಾಚುಲರ್ ಪದವಿ (ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಮತ್ತು ಇನ್ಸ್ಟ್ರುಮೆಂಟೇಶನ್ ಹೊರತುಪಡಿಸಿ).


ಅರ್ಜಿ ಸಲ್ಲಿಸುವುದು ಹೇಗೆ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇಲಿನ ಪೋಸ್ಟ್ಗಳಿಗೆ ಮಾರ್ಚ್ 15, 2022 ರ ಮೊದಲು ಅಧಿಕೃತ ವೆಬ್ಸೈಟ್ —www.oil-india.com ಮೂಲಕ ಅರ್ಜಿ ಸಲ್ಲಿಸಬಹುದು. ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ 2022: ಅರ್ಜಿ ಶುಲ್ಕ ಸಾಮಾನ್ಯ/ OBC (NCL): ರೂ 500 + ಅನ್ವಯವಾಗುವ ತೆರಿಗೆಗಳು SC/ST/PwBD/EWS/Ex-Servicemen: ಶುಲ್ಕವಿಲ್ಲ.

Exit mobile version