ಮಗ ಮತ್ತು ಸೊಸೆಯ ಹಿಂಸೆಗೆ ಮನನೊಂದು ತನ್ನ 1.5 ಕೋಟಿ ರೂ. ಆಸ್ತಿಯನ್ನು ಸರ್ಕಾರಕ್ಕೆ ಕೊಟ್ಟ ೮೫ ವರ್ಷದ ವೃದ್ಧ!

Uttar Pradesh : ತಮ್ಮ ಮಗ ಮತ್ತು ಸೊಸೆ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದ 85 ವರ್ಷದ ವೃದ್ಧರೊಬ್ಬರು ಮನನೊಂದು ತಮ್ಮ1.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶದ ಸರ್ಕಾರಕ್ಕೆ (old man donates property) ಬರೆದುಕೊಟ್ಟಿದ್ದಾರೆ.


ಉತ್ತರ ಪ್ರದೇಶ ರಾಜ್ಯದ ಮುಜಾಫರ್‌ನಗರದ 85 ವರ್ಷದ ವೃದ್ಧರು ತನ್ನ ಮಗ ಮತ್ತು ಸೊಸೆಯಿಂದ ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ಕಟುವಾಗಿ ನಿರ್ಧರಿಸಿ,

ತಮ್ಮ ಸಮಸ್ತ ಆಸ್ತಿಯನ್ನು ಯುಪಿ ಸರ್ಕಾರಕ್ಕೆ ದಾನ ಮಾಡಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ (Muzaffarnagar) ವಾಸಿಸುತ್ತಿದ್ದ ವಯೋವೃದ್ಧರು ತಮ್ಮ ಮಗ ಮತ್ತು ಸೊಸೆಯಿಂದ ಪ್ರತಿದಿನ (old man donates property) ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯಬೇಕಾಯಿತು.

ಮನೆಯಲ್ಲಿ ಇರುವುದು ಬೇಡ, ವೃದ್ಧಾಶ್ರಮಕ್ಕೆ ಹೋಗಿ ಎಂದು ಒತ್ತಾಯ ಮಾಡಿದರು ಎಂದು ಹೇಳಿಕೊಂಡಿದ್ದಾರೆ.

ನಾಥು ಸಿಂಗ್ ಎಂಬ 85 ವರ್ಷದ ವೃದ್ಧನಿಗೆ ಒಬ್ಬ ಮಗನಿದ್ದಾನೆ, ಅವನು ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಾನೆ.

ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ, ಎಲ್ಲರಿಗೂ ಮದುವೆಯಾಗಿದೆ. ಪತ್ನಿಯ ಮರಣದ ನಂತರ, ಖತೌಲಿಯಲ್ಲಿರುವ ವೃದ್ಧಾಶ್ರಮದಲ್ಲಿ ವೃದ್ಧ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ.

https://youtu.be/nK5XX3GFOIk

ವೃದ್ದಾಶ್ರಮಕ್ಕೆ ಹೋದ ನಂತರ ಕುಟುಂಬದ ಸದಸ್ಯರು ಯಾರೂ ಅವರನ್ನು ನೋಡಲು ಬಂದಿಲ್ಲ ಎಂದು ಅವರು ಹೇಳಿಕೊಂಡಿದ್ದರು.

ಈ ಘಟನೆ ನಂತರ ಅವರು ತಮ್ಮ ಆಸ್ತಿಯನ್ನು ಯುಪಿ ಸರ್ಕಾರಕ್ಕೆ ಹಸ್ತಾಂತರಿಸಲು ಅಫಿಡವಿಟ್ ಸಲ್ಲಿಸಿದರು.

ತಾವು ಮರಣ ಹೊಂದಿದ ನಂತರ ಸರ್ಕಾರವು ತಮ್ಮ ಜಾಗದಲ್ಲಿ ಶಾಲೆ ಅಥವಾ ಆಸ್ಪತ್ರೆಯನ್ನು ತೆರೆಯಲು ಭೂಮಿಯನ್ನು ಬಳಸಿಕೊಳ್ಳಬಹುದು ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.

ಈ ವಯಸ್ಸಿನಲ್ಲಿ, ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸಬೇಕಾಗಿತ್ತು! ಆದರೆ, ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ.

ಆದ್ದರಿಂದ ನಾನು ನನ್ನ ಸಂಪೂರ್ಣ ಆಸ್ತಿಯನ್ನು ವರ್ಗಾಯಿಸಲು ಕಟು ಮನಸ್ಸು ಮಾಡಿದೆ ಎಂದು ಸಿಂಗ್ ಹೇಳಿದ್ದಾರೆ. ನನಗೆ ಬೇರೆ ದಾರಿಯಿಲ್ಲ,

ನನಗೆ ನಾಲ್ಕು ಮಕ್ಕಳಿದ್ದಾರೆ. ಆದರೆ ನಾನು ವೃದ್ಧಾಶ್ರಮದಲ್ಲಿ ವಾಸಿಸಲು ಒತ್ತಾಯಿಸಲ್ಪಟ್ಟಿದ್ದೇನೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಈ ನಡುವೆ ಎಸ್‌ಡಿಎಂ ಬುಧಾನ ಅರುಣ್ ಕುಮಾರ್, ವಯೋಮಾನದವರ ಮನವಿಯನ್ನು ದಾಖಲಿಸಲಾಗಿದೆ. ಅವರು ತಮ್ಮ ವಾಸದ ಮನೆ,

ಅವರ ಕೃಷಿ ಭೂಮಿ ಮತ್ತು ಸ್ಥಿರಾಸ್ತಿಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದು ಅವರ ನಿಧನದ ನಂತರ ಜಾರಿಗೆ ಬರಲಿದೆ,

ಅಲ್ಲಿಯವರೆಗೂ ಅವರ ಆಸ್ತಿಯಾಗಿಯೇ ಉಳಿದುಕೊಳ್ಳಲಿದೆ ಎಂದು ಹೇಳಿದರು.

೮೫ ವರ್ಷದ ವೃದ್ಧರು ತಾವು ನಿಧನ ಹೊಂದಿದ ಬಳಿಕ ತಮ್ಮ ಅಂತ್ಯಕ್ರಿಯೆಯಲ್ಲಿ ಅವರ ಕುಟುಂಬದವರು ಭಾಗಿಯಾಗುವುದನ್ನು ಬಯಸುವುದಿಲ್ಲ ಎಂದು ಹೇಳಿರುವ ಬಗ್ಗೆ ವೃದ್ಧಾಶ್ರಮದ ಉಸ್ತುವಾರಿ ರೇಖಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.

Exit mobile version