ಜ್ವರದಿಂದ ಬಳಲುತ್ತಿರುವ ಒಲಿಂಪಿಕ್ ಚಿನ್ನದ ಪದಕ ವಿಜೇತ

ಹರಿಯಾಣ ಆ 18 : ಟೋಕಿಯೋದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಒಲಿಂಪಿಕ್ ಚಿನ್ನದ ಪದಕ ವಿಜೇತ  ಜಾವಲಿನ್ ಪಟು  ನೀರಜ್ ಚೋಪ್ರಾ ಇದೀಗ ಜ್ವರ ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದಾರೆ.

ಟೋಕಿಯೋದಿಂದ ಬಂದ ಬಳಿಕ ನೀರಜ್ ಗೆ ಜ್ವರ, ಗಂಟಲು ನೋವು, ಕೆಮ್ಮು ಸೇರಿದಂತೆ ಕೊರೋನಾದ ಬಹುತೇಕ ಲಕ್ಷಣಗಳು ಕಾಣಿಸಿಕೊಂಡ ಕಾರಣ ನೀರಜ್ ಜೋಪ್ರಾ ಕೊರೋನಾ ಪರೀಕ್ಷೆ ಮಾಡಲಾಗಿದೆ. ಆದರೆ ನೀರಜ್‌ಗೆ ಕೊರೋನಾ ನೆಗೆಟಿವ್ ಬಂದಿದ್ದು, ಇದು ವೈರಲ್ ಫೀವರ್ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಜ್ವರದ ಪರಿಣಾಮವಾಗಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ನೀರಜ್ ಪಲ್ಗೊಂಡಿರಲಿಲ್ಲ.  ಟೋಕಿಯೋ ಪ್ರವಾಸ  ಬಳಿಕ ಭಾರತಕ್ಕೆ ಆಗಮನವಾಗಿದ್ದು ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಚೋಪ್ರಾ ಬಳಲಿದ್ದಾರೆ. ಜೊತೆಗೆ ವಾತಾವರಣ ಕೂಡ ನೀರಜ್ ಜೋಪ್ರಾ ಜ್ವರಕ್ಕೆ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ .ತೀವ್ರ ಜ್ವರದ ಕಾರಣ ಬಳಲಿರುವ ನೀರಜ್‌ಗೆ ಹೆಚ್ಚಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.  

Exit mobile version