ಮಿಂತ್ರಾ ಆಪ್‌ನಲ್ಲಿ ಫುಟ್‌ಬಾಲ್ ಸಾಕ್ಸ್‌ ಆರ್ಡರ್‌ ಮಾಡಿದವನಿಗೆ ಸಿಕ್ಕ ವಸ್ತು ಕಂಡು ಬೆಚ್ಚಿಬಿದ್ದ ನೆಟ್ಟಿಗರು!

New delhi : ಆನ್‌ಲೈನ್‌ ಶಾಪಿಂಗ್‌ ಆಪ್‌ ಆದ ಮಿಂತ್ರಾದಲ್ಲಿ (ordered socks in Myntra) ಫುಟ್‌ಬಾಲ್ ಸಾಕ್ಸ್‌ಗಳನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಡೆಲಿವರಿ ಆದ ವಸ್ತು ಕಂಡು ನೆಟ್ಟಿಗರು ಒಂದು ನಿಮಿಷ ಬೆರಗಾಗಿದ್ದಾರೆ!

ಈ ಒಂದು ಟ್ವೀಟ್‌(Tweet) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ (Online Shopping) ಎಲ್ಲರ ದಿನನಿತ್ಯದ ಒಂದು ಭಾಗವಾಗಿದೆ ಎಂದರೇ ತಪ್ಪಾಗಲಾರದು. ಅದರಲ್ಲೂ ಸ್ಮಾರ್ಟ್‌ಫೋನ್‌ (Smart Phone) ಯುಗ ಬಂದ ಮೇಲಂತೂ ಇದರ ಬಳಕೆ ಅಧಿಕವಾಗಿದೆ.

ಪ್ರತಿಯೊಬ್ಬರು ಕೂಡ ಇಂದು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಆನ್‌ಲೈನ್ ಶಾಪಿಂಗ್‌ ಮೂಲಕ ಹೆಚ್ಚು ಶ್ರಮ ವಹಿಸದೆ, ತಾವು ಕುಳಿತ ಜಾಗಕ್ಕೆ ತರಿಸಿಕೊಳ್ಳುತ್ತಾರೆ.

ಅಷ್ಟು ವೇಗವಾಗಿ ಸಾಗುತ್ತಿದೆ ಇಂದಿನ ಡಿಜಿಟಲ್‌ ಯುಗ! ಅತೀ ಮುಖ್ಯವಾಗಿ ಇದು ನಮ್ಮ (ordered socks in Myntra) ಜೀವನವನ್ನು ಸುಲಭಗೊಳಿಸಿದೆ.

ಆನ್‌ಲೈನ್ ಶಾಪಿಂಗ್‌ನಿಂದ ಹಲವಾರು ಪ್ರಯೋಜನಗಳಿದ್ದರೂ ಕೂಡ ಅಲ್ಲೊಂದು ಸಮಸ್ಯೆ ಖಂಡಿತ ಇದ್ದೇ ಇರುತ್ತದೆ. ಆನ್‌ಲೈನ್ನಲ್ಲಿ ಶಾಪಿಂಗ್‌ ಮಾಡಿದ ಗ್ರಾಹಕರಿಗೆ ತಾವು ಆರ್ಡರ್‌ ಮಾಡಿದ ಅಸಲಿ ವಸ್ತುಗಳಿಗಿಂತ ತಪ್ಪಾದ

ವಸ್ತುಗಳು ಅಥವಾ ಖಾಲಿ ಬಾಕ್ಸ್‌ಗಳು ಬಂದಿರುವುದಕ್ಕೆ ಅನೇಕ ನಿದರ್ಶನಗಳು ಇವೆ! ಆ ರೀತಿ ಪಡೆದುಕೊಂಡು ಮೂರ್ಖರಾಗಿರುವ ಹಲವಾರು ಗ್ರಾಹಕರು ತಮ್ಮ ಪ್ರಕರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಸ್ಟ್‌ ಮಾಡಿ,

ಅಳಲನ್ನು ವ್ಯಕ್ತಪಡಿಸಿರುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ! ನೀವು ಒಮ್ಮೆ ಆರ್ಡರ್ ಮಾಡಿದ ವಸ್ತು ನಿಮ್ಮ ಕೈ ಸೇರುವವರೆಗೂ ಅದು ಏನಾಗಿರಲಿದೆ ಎಂಬ ಸಣ್ಣ ಸುಳಿವು ಕೂಡ ನಿಮಗೆ ಇರುವುದಿಲ್ಲ.

ಸದ್ಯ ಇಲ್ಲೊಂದು ಅದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಅಂತಹ ಒಂದು ಪ್ರಕರಣದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಕಶ್ಯಪ್‌ (Kashyap) ಎಂಬ ಹೆಸರಿನ ಗ್ರಾಹಕರೊಬ್ಬರು ಆನ್‌ಲೈನ್‌ ಶಾಪಿಂಗ್‌ ಆದ ಮಿಂತ್ರಾ ಆಪ್‌ನಲ್ಲಿ ತಮಗೆ ಬೇಕಾದ ಫುಟ್‌ಬಾಲ್(Football) ಸ್ಟಾಕಿಂಗ್ಸ್ನ ಸಾಕ್ಸ್‌ ಆರ್ಡರ್‌ ಮಾಡಿದ್ದಾರೆ.

ತಮಗೆ ಬೇಕಾದ ವಸ್ತು ಬದಲಿಗೆ ಮಹಿಳೆಯರ ಒಳ ಉಡುಪು ಬ್ರಾ ಅನ್ನು ಸ್ವೀಕರಿಸಿದ್ದಾರೆ!

ಕಶ್ಯಪ್ ಎಂಬ ಹೆಸರಿನ ಟ್ವಿಟರ್(Twitter) ಬಳಕೆದಾರರು ತಮ್ಮ ಆನ್‌ಲೈನ್ ಶಾಪಿಂಗ್‌ನ ವಿಚಿತ್ರ ಅನುಭವವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.

ಕಶ್ಯಪ್ ಅವರು ಆರ್ಡರ್ ಮಾಡಿದ ಫುಟ್ಬಾಲ್ ಸ್ಟಾಕಿಂಗ್ಸ್ ಬದಲಿಗೆ ಕಪ್ಪು ಟ್ರಯಂಫ್ ಬ್ರಾ ಪಡೆದಿದ್ದಾರೆ. ಆದಾಗ್ಯೂ, ಗ್ರಾಹಕ ಕಶ್ಯಪ್ ಅವರು ಈ ವಸ್ತು ನನಗೆ ಸೇರಿದ್ದಲ್ಲ, ತಪ್ಪಾಗಿ ನನಗೆ ಬಂದಿದೆ

ಮೈಸೂರು – ಬನ್ನೇರುಘಟ್ಟ ರಿಂಗ್‌ ರಸ್ತೆಗೆ ಪುನೀತ್ ರಾಜ್‌ಕುಮಾರ್ ನಾಮಕರಣ

ಎಂದು ಆ ವಸ್ತುವನ್ನು ಹಿಂದಿರುಗಿಸಲು ಪ್ರಯತ್ನಿಸಿದಾಗ, ಮಿಂತ್ರಾ ಸಂಸ್ಥೆಯು ಆ ವಸ್ತುವನ್ನು ಹಿಂಪಡೆದು, ಬದಲಿಸಿ ಕೊಡಲು ನಿರಾಕರಿಸಿದೆ.

ಈ ಕುರಿತು ಮಿಂತ್ರಾ ಕಶ್ಯಪ್‌ ಅವರಿಗೆ ಸಂದೇಶ ರವಾನಿಸದ್ದು, ಇದನ್ನು ನೀವು ಆರ್ಡರ್‌(Order) ಮಾಡಿದ್ದೀರಿ, ನಿಮ್ಮ ಒಪ್ಪಿಗೆಯ ಮೇಲೆ ಇದನ್ನು ಕಳಿಸಲಾಗಿದೆ. ಇದನ್ನು ಬದಲಿಸಲು ಅವಕಾಶವಿಲ್ಲ ಎಂದು ಹೇಳಿದೆ.

ಮಿಂತ್ರಾ ಸಂಸ್ಥೆಯ ಈ ಉತ್ತರವನ್ನು ಸ್ವೀಕರಿಸಿದ ನಂತರ ತೀವ್ರ ಅಸಹಾಯಕತೆಯನ್ನು ಅನುಭವಿಸಿದ ಕಶ್ಯಪ್‌ ಅವರು, ಈ ಬಗ್ಗೆ ಟ್ವಿಟರ್‌ನಲ್ಲಿ ತಮಗೆ ಬಂದ ವಸ್ತುವಿನ ಫೋಟೊವನ್ನು ಹಾಕುವುದರ ಜೊತೆಗೆ

ಈ ರೀತಿ ಶೀರ್ಷಿಕೆ ನೀಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫುಟ್ಬಾಲ್ ಸ್ಟಾಕಿಂಗ್ಸ್ ಅನ್ನು ಆರ್ಡರ್ ಮಾಡಿದೆ. ಆದ್ರೆ, ಅದರ ಬದಲಾಗಿ ಬ್ರಾ ಪಡೆದೆ. ಇದಕ್ಕೆ ಮಿಂತ್ರಾ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ? ಕ್ಷಮಿಸಿ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು.

ಹಾಗಾಗಿ ನಾನು ಫುಟ್ಬಾಲ್ ಆಟಗಳಿಗೆ 34 ಸಿಸಿ ಬ್ರಾ ಧರಿಸಲಿದ್ದೇನೆ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಕ್ಷಣಗಳಲ್ಲಿ ಭಾರಿ ವೈರಲ್ ಆಗಿದ್ದು,

ಈ ಘಟನೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

Exit mobile version