ರಾಪಿಡೋ ವಿರುದ್ಧ ಆಕ್ರೋಶ: ಹೆಲ್ಮೆಟ್‌ ನಿಂದ ಒಡೆದ ಆಟೋ ಚಾಲಕನನ್ನು ಬಂಧಿಸಿದ ಬೆಂಗಳೂರು ಪೊಲೀಸರು!

Bengaluru : ಒಂದು ವಾರದ ಹಿಂದೆ ಬೆಂಗಳೂರಿನ ಇಂದಿರಾನಗರ ಮೆಟ್ರೋ ನಿಲ್ದಾಣದ (Metro station) ಬಳಿ ರಾಪಿಡೋ ಚಾಲಕನ (Rapido driver) ಹೆಲ್ಮೆಟ್‌ ಕಸಿದು ಅದರಲ್ಲಿ ಒಡೆದು ತನ್ನ ಆಕ್ರೋಶ ಹೊರಹಾಕಿದ್ದ (Outrage against Rapido) ಆಟೋ ಚಾಲಕನನ್ನು ಬೆಂಗಳೂರು ಪೊಲೀಸರು ಇವತ್ತು ಬಂಧಿಸಿದ್ದಾರೆ.

ಇಂದಿರಾನಗರ ಮೆಟ್ರೋ (Indiranagar Metro) ನಿಲ್ದಾಣದ ಬಳಿ ರಾಪಿಡೋ ಸೇವೆಯಲ್ಲಿ ತೊಡಗಿದ್ದ ಯುವಕನೊಬ್ಬನನ್ನು ಕಂಡು ಅಡಗಟ್ಟಿ, ಆತನ ಬಳಿ ಇದ್ದ ಹಿಂಬದಿ ಸವಾರರ ಹೆಲ್ಮೆಟ್‌ ಕಸಿದು,

ರಸ್ತೆಗೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದ ಆಟೋ ಚಾಲಕನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿತ್ತು ಮತ್ತು ಆಟೋ ಚಾಲಕನ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದ ಈ ವೀಡಿಯೋ ನೋಡಿದ್ದ ಅನೇಕ ನೆಟ್ಟಿಗರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ಸದ್ಯ ಈ ವೀಡಿಯೋ ಆಧಾರಿಸಿ ಕಿರುಕುಳ ಆರೋಪದ ಮೇಲೆ ಬೆಂಗಳೂರು ಪೊಲೀಸರು ಆಟೋ ರಿಕ್ಷಾ ಚಾಲಕನನ್ನು ಇದೀಗ ಬಂಧಿಸಿದ್ದಾರೆ.

ಇದನ್ನೂ ಓದಿ : https://vijayatimes.com/bangalore-mysore-highway/

ಆಟೋ ಚಾಲಕನನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸರು, ಶನಿವಾರ ಬಂಧಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಾಪಿಡೋ ಚಾಲಕನ ಹೆಲ್ಮೆಟ್ ಹೊಡೆದು ಆತನಿಗೆ ಎಚ್ಚರಿಕೆ ನೀಡುತ್ತಿರುವ ದೃಶ್ಯ ಕಂಡು ಬಂದಿತ್ತು.

ಈ ವಿಡಿಯೋವನ್ನು ಪೋಸ್ಟ್ ಮಾಡಿದಾಗ ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವು ಮತ್ತು ಇಂದಿರಾನಗರ ಪೊಲೀಸರಿಗೆ ತಿಳಿಸಲಾಗಿತ್ತು.

ಅವರ ಉತ್ತಮ ಪ್ರಯತ್ನದ ನಂತರ ಈ ಅಪರಾಧಕ್ಕಾಗಿ ಆಟೋ ಚಾಲಕನನ್ನು ಗುರುತಿಸಿ ಬಂಧಿಸಲಾಗಿದೆ (Outrage against Rapido) ಎಂದು ಬೆಂಗಳೂರು (ಪೂರ್ವ) ಉಪ ಪೊಲೀಸ್ ಆಯುಕ್ತ ಭೀಮಾ ಶಂಕರ್ ಎಸ್. ಹೇಳಿದ್ದಾರೆ.

ಅಷ್ಟಕ್ಕೂ ಈ ರೀತಿ ಘಟನೆಗಳು ಭುಗಿಲೇಳಲು ಕಾರಣ ರಾಪಿಡೋ ಎಂಬ ವೈಟ್‌ ಬೋರ್ಡ್‌ ಟ್ಯಾಕ್ಸಿ ಸೇವೆ!

ಆಟೋ ಚಾಲಕರು ಮತ್ತು ರಾಪಿಡೋ ಚಾಲನೆ ಮಾಡುವವರ ವಿರುದ್ಧ ಇದೊಂದೇ ವಿಷಯಕ್ಕೆ ಪ್ರತಿಬಾರಿ ಜಗಳವಾಗುತ್ತಿದೆ.

ವೈಟ್‌ ಬೋರ್ಡ್‌ ಹೊಂದಿರುವವರು ಹೇಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಬಹುದು? ಇವರಿಗೆ ಅನುಮತಿ ಕೊಟ್ಟವರ್ಯಾರು?

ಇದನ್ನೂ ಓದಿ :https://vijayatimes.com/centre-opposes-samesexmarriage/

ಆರ್.ಟಿಓ ಮತ್ತು ಸರ್ಕಾರ ಇದಕ್ಕೆ ತಕ್ಕ ಉತ್ತರ ನೀಡಿ ಎಂದು ಆಟೋ ಚಾಲಕರ ಸಂಘ ಪ್ರತಿಭಟನೆ ಮೂಲಕ ಈ ಪ್ರಶ್ನೆಯನ್ನು ಅನೇಕ ಬಾರಿ ಮುಂದಿಟ್ಟಿದೆ.

ಆದ್ರೆ, ಇದಕ್ಕೆ ಯಾವ ರೀತಿಯಲ್ಲೂ ಉತ್ತರ ದೊರಕಿಲ್ಲ. ಹೀಗಾಗಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಸಹಜವಾಗಿ ಬೆಂಗಳೂರಿನಲ್ಲಿ ಕಂಡುಬರುತ್ತಿದೆ.

ಆದ್ರೆ, ಈ ಬಾರಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸರು (Bangalore Police).

ಆಟೋ ಚಾಲಕನ ನಡೆಯನ್ನು ಗಮನಿಸಿ, ಆತನನ್ನು ಬಂಧಿಸಿದ್ದಾರೆ ಮತ್ತು ಅನ್ಯರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ನಗರದಲ್ಲಿ ವಾಸಿಸುತ್ತಿರುವ ಅನ್ಯ ರಾಜ್ಯದ ಜನರ ವಿರುದ್ಧ ತಾರತಮ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಟ್ವೀಟ್ (Tweet) ಮಾಡಿ ತಿಳಿಸಿದ್ದಾರೆ.

Exit mobile version