ಕಳೆದ 24 ಗಂಟೆಯಲ್ಲಿ 1.27ಲಕ್ಷ ಸೋಂಕಿತರು, 2,795 ಸಾವು

ನವದೆಹಲಿ, ಜೂ. 01: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 1,27,510 ಹೊಸ ಪ್ರಕರಣಗಳು ದೃಢಪಟ್ಟಿದ್ದು, 2,795 ಸಾವು ಸಂಭವಿಸಿದೆ. ಇದು ಒಂದು ತಿಂಗಳ ಅವಧಿಯಲ್ಲಿ ದಿನವೊಂದರಲ್ಲಿ ದಾಖಲಾದ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಈ ಮೂಲಕ ಕೋವಿಡ್–19 ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಮತ್ತು ಹೊಸದಾಗಿ ಸೋಂಕಿತರಾಗುತ್ತಿರುವವರ ಸಂಖ್ಯೆಯಲ್ಲಿ ಮಂಗಳವಾರ ಇಳಿಕೆ ಕಂಡುಬಂದಿದೆ.

ಕಳೆದ ೨೪ ಗಂಟೆಯಲ್ಲಿ 2,55,287 ಮಂದಿ ಚೇತರಿಸಿಕೊಂಡಿದ್ದು, ಸದ್ಯ ದೇಶದಲ್ಲಿ 18,95,520 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಸೋಂಕಿನಿಂದಾಗಿ ಒಟ್ಟು 3,31,895 ಜನ ಮೃತಪಟ್ಟಿದ್ದು, ಸಾವಿನ ಪ್ರಮಾಣ ಶೇ 1.18ರಷ್ಟಿದೆ.

ಈವರೆಗೆ 21,60,46,638 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಮೇ 31ರ ವರೆಗೆ 34,67,92,257 ಮಾದರಿಗಳ ಪರೀಕ್ಷೆಗೆ ನಡೆಸಲಾಗಿದೆ. ಸೋಮವಾರ ಒಂದೇ ದಿನ 19,25,374 ಮಾದರಿಗಳ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

Exit mobile version