ಅತಿಯಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಖಿನ್ನತೆಗೆ ಒಳಗಾಗುತ್ತಾರೆ! ಎಚ್ಚರ!

Mobile

ಅತಿಯಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಕೇವಲ ಆರು ತಿಂಗಳೊಳಗೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು, ಅದರಲ್ಲೂ 15-30 ವರ್ಷದೊಳಗಿನವರು ಈ ರೀತಿಯ ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚಾಗಿರುತ್ತದೆ ಎಂದು ಸಾರ್ವಜನಿಕ ನೀತಿ ಮತ್ತು ಶಿಕ್ಷಣದ ಸಂಶೋಧಕರ ತಂಡ ವರದಿ(Report) ನೀಡಿದೆ.

ಈ ಕುರಿತು ಸಂಶೋಧನೆ(Research) ನಡೆಸಿರುವ ತಜ್ಞರ ತಂಡ, “ಜರ್ನಲ್ ಆಫ್ ಎಫೆಕ್ಟಿವ್ ಡಿಸಾರ್ಡರ್ಸ್ ರಿಪೋರ್ಟ್ಸ್ನಲ್ಲಿ ‘ಸಾಮಾಜಿಕ ಮಾಧ್ಯಮ ಬಳಕೆ,

ವ್ಯಕ್ತಿತ್ವ ರಚನೆ ಮತ್ತು ಖಿನ್ನತೆಯ ಬೆಳವಣಿಗೆಯ ನಡುವಿನ ಸಂಬಂಧಗಳು’ ಎಂಬ (Over Use Of Social Media leads Depression) ಸಂಶೋಧನಾ ವರದಿ ಪ್ರಕಟಿಸಿದ್ದು, ಯುವ ವಯಸ್ಕರಲ್ಲಿ ಖಿನ್ನತೆಗೆ ಒಳಗಾಗಲು ಸಾಮಾಜಿಕ ಮಾದ್ಯಮಗಳು ಮುಖ್ಯ ಕಾರಣವಾಗುತ್ತಿವೆ.

ಸಂಶೋಧನೆಯ ಪ್ರಕಾರ, ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಸುತ್ತಿರುವವರು ಕಡಿಮೆ (Over Use Of Social Media leads Depression) ಬಳಸುವವರಿಗಿಂತ ಖಿನ್ನತೆಗೆ ಒಳಗಾಗುವ ಸಾಧ್ಯತೆ ಶೇಕಡಾ 49 ರಷ್ಟು ಹೆಚ್ಚಿದೆ.

ಹೆಚ್ಚಿನ ನರರೋಗ ಹೊಂದಿರುವವರು ದಿನಕ್ಕೆ 300 ನಿಮಿಷಗಳಿಗಿಂತ ಹೆಚ್ಚು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದರೆ, ಕಡಿಮೆ ನರರೋಗ ಹೊಂದಿರುವವರಿಗಿಂತ ಖಿನ್ನತೆ ಅಭಿವೃದ್ಧಿಪಡಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : https://vijayatimes.com/transgender-womans-hair-forcibly-cut/

ಈ ಬಗ್ಗೆ ಸಂಶೋಧನೆ ನಡೆಸಲು 18 ರಿಂದ 30 ವರ್ಷದೊಳಗಿನ 2,000ಕ್ಕೂ ಹೆಚ್ಚು ಯುವ ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಆರೋಗ್ಯ ಪ್ರಶ್ನಾವಳಿಯನ್ನು ಬಳಸಿಕೊಂಡು ಖಿನ್ನತೆಯನ್ನು ಅಳೆಯಲಾಗಿದೆ.

ಅದೇ ರೀತಿ ಬಿಗ್ ಫೈವ್ ಇನ್ವೆಂಟರಿ ವಿಧಾನವನ್ನು ಬಳಸಿಕೊಂಡು ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ.

ಇದು, ಬಹಿರ್ಮುಖತೆ, ಒಪ್ಪಿಗೆ, ಮುಕ್ತತೆ, ಆತ್ಮಸಾಕ್ಷಿ ಮತ್ತು ನರರೋಗವನ್ನು ನಿರ್ಣಯಿಸುತ್ತದೆ. ಜಗತ್ತಿನ ಅನೇಕ ದೇಶಗಳು ಈ ವಿಧಾನವನ್ನು ಬಳಸುತ್ತವೆ.

ಸಮಸ್ಯಾತ್ಮಕ ಸಾಮಾಜಿಕ ಹೋಲಿಕೆಯು ವ್ಯಕ್ತಿಯಲ್ಲಿನ ಋಣಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತದೆ. ಋಣಾತ್ಮಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದು ಖಿನ್ನತೆಯ ಭಾವನೆಗಳನ್ನು ಹೆಚ್ಚಿಸುತ್ತದೆ.

https://youtu.be/28Ffk640lTU ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೊಲೀಸರಿಂದ ಭರ್ಜರಿ ಲೂಟಿ.

ಸಮಸ್ಯಾತ್ಮಕ ಸಾಮಾಜಿಕ ಹೋಲಿಕೆಯು ವ್ಯಕ್ತಿಯೂ ಸಾಮಾಜಿಕ ಮಾದ್ಯಮಗಳನ್ನು ಹೆಚ್ಚಾಗಿ ಬಳಸುವುದರಿಂದ ಈ ಹೋಲಿಕೆಯ ಸ್ವರೂಪ ತೀವ್ರವಾಗುತ್ತಾ ಹೋಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
Exit mobile version