Islamabad:ಮೊದಲ ಬಾರಿಗೆ ಗಡಿ ಭಾಗಗಳಲ್ಲಿ ಪಾಕಿಸ್ತಾನವು ಡ್ರೋನ್ ಮೂಲಕ ಭಾರತಕ್ಕೆ (Pak smuggling drugs in drone) ಮಾದಕ ವಸ್ತುಗಳನ್ನು ಕಳುಹಿಸುತ್ತಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.
ಪಾಕ್ ಪ್ರಧಾನಿಯಾದ ಶೆಹಬಾಜ್ ಷರೀಫ್ (Shehbaz Sharif) ಅವರ ಆಪ್ತರಾದ ಮಲಿಕ್ ಮೊಹಮ್ಮದ್ ಖಾನ್ (Malik Mohammad Khan) ಅವರು ಸಂದರ್ಶನವೊಂದರಲ್ಲಿ ನೀಡಿರುವ
ಹೇಳಿಕೆ ಸಂಚಲನ ಮೂಡಿಸಿದೆ.
ಪ್ರಧಾನಿ ಕಾರ್ಯಾಲಯದ ಅಧಿಕಾರಿಯೊಬ್ಬರು ಮಾದಕ ದ್ರವ್ಯ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಡ್ರೋನ್ (Drone) ಮೂಲಕ ಭಾರತದೊಳಗೆ ಸಾಗಿಸಲು ಪಾಕಿಸ್ತಾನ ಸಹಕರಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಮೊದಲ ಬಾರಿಗೆ ಭಾರತದ ಆರೋಪವನ್ನು ಪಾಕ್ ಒಪ್ಪಿಕೊಂಡಿದ್ದು, ಪಾಕಿಸ್ತಾನಿ ಪೆಡ್ಲರ್‌ಗಳು ಭಾರತಕ್ಕೆ ಕಳ್ಳಮಾರ್ಗಗಳಲ್ಲಿ ಡ್ರಗ್ಸ್ (Drugs) ರವಾನಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.
ಪಾಕಿಸ್ತಾನದ (Paksitan) ಹಿರಿಯ ಪತ್ರಕರ್ತ ಹಮೀದ್ ಮಿರ್ (Hamid Mir) ಅವರಿಗೆ ನೀಡಿದ ಟಿವಿ ಸಂದರ್ಶನವೊಂದರಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರ ರಕ್ಷಣಾ ವಿಭಾಗದ ವಿಶೇಷ ಸಹಾಯಕ ಅಧಿಕಾರಿ
ಇದನ್ನು ಓದಿ: ಇನ್ಮುಂದೆ ಭಾರತದಲ್ಲಿ ಸಿಗಲಿದೆ 15 ರೂಪಾಯಿಗೆ ಪೆಟ್ರೋಲ್ ! ಅದು ಹೇಗೆ ಸಾಧ್ಯ? ಓದಿ ಈ ವರದಿ
ಮಲಿಕ್ ಮುಹಮ್ಮದ್ ಅಹ್ಮದ್ ಖಾನ್ ಅವರು ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಬೃಹತ್ ಪ್ರಮಾಣದ ಹೆರಾಯಿನ್ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳನ್ನು ಕಳೆದ ವರ್ಷ ಭೀಕರ ಪ್ರವಾಹ ಕಾಣಿಸಿಕೊಂಡಿದ್ದ
ವೇಳೆ ಕಳ್ಳಸಾಗಣೆದಾರರು ಡ್ರೋನ್ ಮೂಲಕ ಅಕ್ರಮವಾಗಿ ಭಾರತಕ್ಕೆ ತಲುಪಿಸಿದ್ದರು. ಎಂದು (Pak smuggling drugs in drone) ಮಲಿಕ್ ಬಹಿರಂಗಪಡಿಸಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ ಭಾರತ-ಪಾಕಿಸ್ತಾನ ಗಡಿಯ ಕಸೂರ್ ನಗರ (Kasur Nagar) ಪ್ರದೇಶದ ಜನರು ಕಳ್ಳಸಾಗಣೆದಾರರ ಜತೆ ಕೈಜೋಡಿಸಿದ್ದಾರೆ. ಸರ್ಕಾರ ಜನರ ಪುನರ್ವಸತಿಗೆ ವಿಶೇಷ ಪ್ಯಾಕೇಜ್
(Package) ನೀಡಬೇಕಾದ ತುರ್ತು ಅನಿವಾರ್ಯತೆ ಎದುರಾಗಿದೆ ಎಂದು ಮಲಿಕ್ ಮುಹಮ್ಮದ್ ಅವರು ತಿಳಿಸಿದ್ದಾರೆ. ಇನ್ನು ಅಲ್ಲಿಯ ಪ್ರಧಾನಿಯವರ ವಿಶೇಷ ಸಹಾಯಕ ನೀಡಿದ ಸಂದರ್ಶನದ ವಿಡಿಯೋ
ಎಲ್ಲೆಡೆ ವೈರಲ್ ಆಗಿದೆ. ಕಸೂರ್ ನಗರವು ಭಾರತದ ಪಂಜಾಬ್ ಗಡಿಗೆ ಸಮೀಪದಲ್ಲಿದ್ದು, ಖಾನ್ ಅವರು ಕಸೂರ್‌ನ ಪ್ರಾಂತೀಯ ಅಸೆಂಬ್ಲಿ ಸದಸ್ಯರಾಗಿದ್ದಾರೆ.
10 ಕೆಜಿಯಷ್ಟು ತೂಕದ ಹೆರಾಯಿನ್ (Heroin) ಅನ್ನು ಇತ್ತೀಚೆಗೆ ಭಾರತಕ್ಕೆ ಅಕ್ರಮವಾಗಿ ರವಾನಿಸಲಾಗಿದೆ ಎಂದು ಖಾನ್ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಪ್ರವಾಹ ಪೀಡಿತ ಕಸೂರ್‌ನ ಜನರಿಗೆ ಗಡಿ
ಭಾಗದಲ್ಲಿ ಡ್ರೋನ್ ಚಟುವಟಿಕೆಗಳ ಕಾರಣದಿಂದ ಮೊಬೈಲ್ ಫೋನ್ಗೆ ಸಿಗ್ನಲ್ (Signal) ಸಿಗುತ್ತಿರಲಿಲ್ಲ. ಭದ್ರತಾ ಸಂಸ್ಥೆಗಳು ಡ್ರೋನ್‌ಗಳ ಹಾರಾಟಕ್ಕೆ ಅನುಕೂಲವಾಗುವಂತೆ ಮೊಬೈಲ್ ಸಿಗ್ನಲ್‌ಗಳಿಗೆ ಜಾಮರ್
ಅಳವಡಿಸುತ್ತಿವೆ ಎನ್ನುವ ಮೂಲಕ ಅವರು ಈ ಕೃತ್ಯಕ್ಕೆ ಪಾಕಿಸ್ತಾನ ಸೇನೆಯ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಇದೊಂದು ದುರಾದೃಷ್ಟಕರ ಸಂಗತಿ ಎಂದು ಖಾನ್ ಹೇಳಿದ್ದಾರೆ. ಮಾದಕ ದ್ರವ್ಯ ಸಾಗಣೆ ಗಡಿ ಭಾಗದಲ್ಲಿ ಹೆಚ್ಚಿರುವ ಬಗ್ಗೆ ಪತ್ರಕರ್ತ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮುಹಮ್ಮದ್ ಮೊಹಮ್ಮದ್ ಖಾನ್ (Muhammad
Mohammad Khan), ಕಳೆದೊಂದು ವರ್ಷಗಳಿಂದ ಗಡಿಯಾಚೆಗೆ ಕಳ್ಳಸಾಗಣೆ ಹೆಚ್ಚಾಗಿದ್ದು, ಡ್ರೋನ್ ಮೂಲಕ ಭಾರತಕ್ಕೆ ಕಳ್ಳ ಮಾರ್ಗದಲ್ಲಿ ಮಾದಕ ದ್ರವ್ಯ ಸಾಗಿಸಲಾಗುತ್ತಿದೆ. ಇದೊಂದು ದುರದೃಷ್ಟಕರ ಸಂಗತಿ,”
ಎಂದು ಹೇಳಿದ್ದಾರೆ.
ಕಳೆದ ಕೆಲವು ತಿಂಗಳಿಂದ ಭಾರತೀಯ ಸೇನೆ ಅಪಾರ ಪ್ರಮಾಣದ ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳನ್ನು ಗಡಿಭಾಗದಲ್ಲಿ ಅನೇಕ ಡ್ರೋನ್ (Drone) ಹೊಡೆದುರುಳಿಸಿ ವಶಪಡಿಸಿಕೊಂಡಿದೆ. ಸುಮಾರು 5 ಸಾವಿರ
ಕೆ.ಜಿ ಹೆರಾಯಿನ್ ಅನ್ನು ಜೂನ್ 29ರವರೆಗೂ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ (BSF) ಮೂಲಗಳು ತಿಳಿಸಿವೆ.
ಭವ್ಯಶ್ರೀ ಆರ್.ಜೆ