ಪಾಕಿಸ್ತಾನ್ ಜಿಂದಾಬಾದ್ ಘೋಷಣೆ: ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದ ಪೊಲೀಸ್

Bengaluru: ಮಂಡ್ಯದ ಸಂಜಯ ಸರ್ಕಲ್​ನಲ್ಲಿ 2022ರ ಡಿಸೆಂಬರ್ (Pakistan Zindabad Declaration Case) 18ರಂದು ನಡೆದಿದ್ದ ಪ್ರತಿಭಟನೆಯಲ್ಲಿ ಬಿಜೆಪಿ

ಕಾರ್ಯಕರ್ತರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತ ಡಣಾಯಕನಪುರದ ರವಿ ಅಲಿಯಾಸ್ ಬುಲೆಟ್ ರವಿ (Ravi Alias

Bullet Ravi) ಎಂಬಾತನನ್ನು ಮಂಡ್ಯ ಪಶ್ಚಿಮ ಠಾಣೆಯ (Pakistan Zindabad Declaration Case) ಪೋಲಿಸರು ಬಂಧಿಸಿದ್ದಾರೆ.

ಬಿಜೆಪಿ (BJP) ಕಾರ್ಯಕರ್ತ ರವಿಯನ್ನು ಸೋಮವಾರ ರಾತ್ರಿ ಬಂಧಿಸಿರುವ ಪೋಲಿಸರು ಮಂಗಳವಾರ ಬೆಳಿಗ್ಗೆ ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ನ್ಯಾಯಾಲಯಕ್ಕೆ

ಹಾಜರು ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯು 2022 ಡಿಸೆಂಬರ್ 18 ರಂದು ಮಂಡ್ಯದ ಸಂಜಯ ವೃತ್ತದಲ್ಲಿ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಪಾಕ್ ವಿದೇಶಾಂಗ ಸಚಿವನ ವಿರುದ್ಧ

ಪ್ರತಿಭಟನೆ ನಡೆಸಿತ್ತು. ಈ ವೇಳೆ ಪಾಕಿಸ್ತಾನ್ ಮುರ್ದಾಬಾದ್ (Pakistan Murdabad), ಹಿಂದೂಸ್ತಾನ್ ಜಿಂದಾಬಾದ್‌ ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರು.

ಘೋಷಣೆ ಕೂಗುವಾಗ ‘ಪಾಕಿಸ್ತಾನ್ ಜಿಂದಾಬಾದ್’ ಎಂದೂ ಘೋಷಣೆ ಕೂಗಿದ್ದರು.

ಒಂದೂವರೆ ವರ್ಷದ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಮುಖಂಡ ಕನ್ನಂಬಾಡಿ ಕುಮಾರ್ ಎಂಬುವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಮಂಡ್ಯದ

ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ದೂರಿನನ್ವಯ ಬಿಜೆಪಿ ಕಾರ್ಯಕರ್ತರಾದ ರವಿ, ಶಿವಕುಮಾ‌ರ್ ಆರಾಧ್ಯ ಎಂಬುವರ ವಿರುದ್ಧ ಎಫ್‌ಐಆ‌ರ್ (FIR) ದಾಖಲಿಸಿದ ಪೊಲೀಸರು, ಸದ್ಯ ಬಿಜೆಪಿ ಕಾರ್ಯಕರ್ತ

ರವಿಯನ್ನು ಬಂಧಿಸಿದ್ದಾರೆ.

ಇದನ್ನು ಓದಿ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ: ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದ ಪೊಲೀಸ್

Exit mobile version