ನಕಲಿ ಸಂಪುಟ ಸಭೆಯ ವಿಡಿಯೋ ಹರಿಬಿಟ್ಟ ಪಾಕಿಸ್ತಾನ

ಇಸ್ಲಾಮಾಬಾದ್ ಜ 10 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯೆಂದು ತೋರಿಸುವ ನಕಲಿ ವೀಡಿಯೊವನ್ನು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ 46 ಟ್ವಿಟರ್ ಹ್ಯಾಂಡಲ್‌ಗಳು ಪ್ರಚಾರ ಮಾಡಿರುವುದನ್ನು ಸ್ಟ್ರಾಟೆಜಿಕ್ ಆಪರೇಷನ್ ಯುನಿಟ್ ಬಹಿರಂಗಪಡಿಸಿದೆ.

ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಖ್ ಸೈನಿಕರನ್ನು ತೆಗೆದುಹಾಕಲು ಭಾರತ ಸರ್ಕಾರವು ಯೋಜಿಸಲಾಗುತ್ತಿದೆ ಎಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಈ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಪಾಕಿಸ್ತಾನ ಭಾರತ ವಿರೋಧಿ ಶಕ್ತಿಗಳು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡಲು ಇನ್ನಿಲ್ಲದಂತೆ ಹವಣಿಸುತ್ತಿವೆ. ಸಿಖ್ಖರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಇಲ್ಲಸಲ್ಲದ ಕುತಂತ್ರಗಳನ್ನು ಅವುಗಳು ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಸಂಪುಟ ಸಭೆಯ ತಿರುಚಿತ ವಿಡಿಯೋವನ್ನು ಹರಿಬಿಡುವ ಮೂಲಕ ಅರಾಜಕತೆ ಸೃಷ್ಟಿಸಲು ಪ್ರಯತ್ನ ನಡೆಸಲಾಗಿದೆ.

 ದೆಹಲಿ ಪೊಲೀಸರ ತನಿಖೆಯಿಂದ ಈ ಎಲ್ಲಾ 46 ಹ್ಯಾಂಡಲ್‌ಗಳನ್ನು ಮಲ್ಟಿಲಾಗಿನ್ ಹೆಸರಿನ ಅಪ್ಲಿಕೇಶನ್‌ನ ಸಹಾಯದಿಂದ ನಡೆಯುತ್ತಿದೆ ಎಂದು ತಿಳಿದು ಬಂದಿದೆ.  ಮಲ್ಟಿಲಾಗಿನ್ ಬಳಕೆದಾರರಿಗೆ ಒಂದೇ ಸಮಯದಲ್ಲಿ ಅನೇಕ ಖಾತೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಬಳಸಿಕೊಂಡು ಭಾರತದ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

Exit mobile version