ಸಿನಿಮಾದಲ್ಲಿ ಧಮ್‌ ಇದ್ರೆ ಖಂಡಿತ ಸಿನೆಮಾ ಓಡುತ್ತೆ; ಸದ್ದಿಲ್ಲದೆ 50 ದಿನಗಳನ್ನು ಪೂರೈಸಿದ ‘ಪಂಖುರಿ’

Bengaluru : ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡದೇ 50 ದಿನಗಳನ್ನು ಪೂರೈಸಿರುವ ‘ಪಂಖುರಿ’(Pankhuri) ಚಿತ್ರ ಇದೀಗ ಸಿನಿ ಪ್ರೇಕ್ಷಕರ ಮೆಚ್ಚುಗೆ ಪಡೆದು ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ತಂಡ (Pankhuri completes 50 days) ರೂಪಿಸಿರುವ ಪಂಖುರಿ ಚಿತ್ರ ಇದೀಗ ರಾಜ್ಯಾದ್ಯಂತ 50 ದಿನಗಳನ್ನು ಪೂರೈಸಿ, ಮುನ್ನುಗ್ಗುತ್ತಿದೆ.

ಚಿತ್ರದ ಯಶಸ್ಸಿನ ಬಗ್ಗೆ ತಮ್ಮ ಸಂತಸ ಹಂಚಿಕೊಂಡ ಚಿತ್ರತಂಡ, ಒಂದಿಷ್ಟು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದೆ.

ಚಿತ್ರದ ನಿರ್ದೇಶಕ ದೋಸ್ತಿ ಆನಂದ್‌(Dosthi Anand) ಮಾತನಾಡಿ, ಇದು ನನ್ನ 3ನೇ ಸಿನಿಮಾ. ಪಂಖುರಿ ಒಂದೊಳ್ಳೆ ಕಥಾಹಂದರವಿರುವ ಚಿತ್ರ. ಪ್ರಕೃತಿ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ವಿ.

ನಾವು ಈ ಚಿತ್ರವನ್ನು ಕಳೆದ ವರ್ಷ ಡಿಸೆಂಬರ್‌ ತಿಂಗಳ ೧೩ನೇ ತಾರೀಖು ಬಿಡುಗಡೆ ಮಾಡಿದ್ವಿ, ಆದ್ರೆ ನಾವು ಸಿನಿಮಾ ಬಿಡುಗಡೆ ಮಾಡುವಾಗ ನಮ್ಮ ಜೊತೆ ೧೩ ಸಿನಿಮಾಗಳು ಪೈಪೋಟಿಗೆ ಇಳಿದಿತ್ತು ಅವತ್ತು!

ಅವರ ಜೊತೆಗೆ ನಾವು ನಮ್ಮ ಸಿನಿಮಾ ಕೂಡ ಬಿಡುಗಡೆ ಮಾಡುದ್ವಿ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಚಿತ್ರ ೫೦ ದಿನಗಳನ್ನು ಪೂರೈಸಿದೆ ಅಂದ್ರೆ ನೀವೆ ಯೋಚಿಸಿ ಎಷ್ಟು ಖುಷಿ ನಮ್ಮಲ್ಲಿ ಇರುತ್ತೆ ಅಂತ.

ಖುಷಿ ತುಂಬಾನೇ ಇದೆ, ಅದನ್ನು ಹೇಳತೀರದು. ಬೇಜಾರಿನ ಸಂಗತಿ ಏನಂದ್ರೆ, ಥಿಯೇಟರ್‌ಗಳ ತೊಂದರೆ ಸಿಕ್ಕಾಪಟ್ಟೆ ಕೊಡ್ತಾರೆ! ನಾವು ಯಾರನ್ನು(Pankhuri completes 50 days) ಬೆಟ್ಟು ಮಾಡಿ ತೋರಿಸಲು ಆಗದು ಸರ್!

ಇವರಿಂದ ನಮಗೆ ತೊಂದರೆಯಾಯ್ತು, ಅವರಿಂದ ತೊಂದರೆಯಾಯ್ತು ಅಂತ ಹೇಳಲು ಕಷ್ಟಸಾಧ್ಯ! ಇರೋದ್ರಲ್ಲಿ ಹೆಂಗೋ ನಮಗೂ ಕೆಲ ಥಿಯೇಟರ್‌ ಮಾಲೀಕರು ಬೆಂಬಲ ಕೊಟ್ಟು,

ಸಹಕರಿಸಿದ್ರು. ನಮ್ಮ ಪಿಚ್ಚರ್‌ ಅಲ್ಲಿ ಧಮ್‌ ಇರೋದ್ರಿಂದ ಅದು ನಿಂತುಕೊಂಡಿದ್ದೆ! ಪಿಚ್ಚರ್‌ ಅಲ್ಲಿ ಧಮ್‌ ಇದ್ರೆ ಖಂಡಿತ ಯಾರ್‌ ಸಿನಿಮಾ ಆದ್ರೂ, ಯಾವದಾದ್ರೂ ನಿಂತುಕೊಳ್ಳುತ್ತೆ,

ಒಟ್ಟಿನಲ್ಲಿ ಕಂಟೆಂಟ್‌(Content) ಸ್ಟ್ರಾಂಗ್‌ ಇರಬೇಕು ಅಷ್ಟೇ! ನಮ್ಮ ಚಿತ್ರ ಕೂಡ ಕಂಟೆಂಟ್‌ ಅಲ್ಲಿ ಚೆನ್ನಾಗಿದೆ, ಹಾಗಾಗಿಯೇ ಇಂದಿಗೂ ಉಳಿದುಕೊಂಡಿದೆ.

ನಮ್ಮ ಚಿತ್ರಕ್ಕೆ ಜನರ ಪ್ರತಿಕ್ರಿಯೆ ಚೆನ್ನಾಗಿದೆ. ನನ್ನ ಮೂರನೇ ಚಿತ್ರ ಇದಾಗಿರೋ ಜೊತೆಗೆ ಜನರಿಗೆ ತಲುಪಿ, ಸಕ್ಸಸ್‌ ಆಗಿರುವುದು ನಿಜಕ್ಕೂ ನನಗೆ ಖುಷಿಯ ಸಂಗತಿ.

ನಾನು ನಿರ್ದೇಶನದ ಜೊತೆಯಲ್ಲಿ ನಟನಾಗಿ ಕೂಡ ಅಭಿನಯಿಸಿದೆ. ಇದು ನನಗೆ ಜವಾಬ್ದಾರಿಯಾಗಿತ್ತು,

ಆದರೂ ನಿಭಾಯಿಸುವಲ್ಲಿ ಯಶಸ್ವಿಯಾದೆ ಎಂದು ದೋಸ್ತಿ ಆನಂದ್‌ ತಮ್ಮ ಚಿತ್ರ ೫೦ ದಿನಗಳನ್ನು ಪೂರೈಸಿರುವ ಬಗ್ಗೆ ತಮ್ಮ ಅನುಭವವನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.

Exit mobile version