ಟ್ಟಿಟರ್ CEO ಆಗಿ ಭಾರತೀಯ ಮೂಲದ ಪರಾಗ್ ಅಗರವಾಲ್ ನೇಮಕ

ನವದೆಹಲಿ ಡಿ 1 : ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಭಾರತೀಯರೇ ಮುಖ್ಯಸ್ಥರಾಗಿದ್ದು, ಇದೀಗ ಟ್ವಿಟರ್‌ ಸಂಸ್ಥೆಗೂ ಕೂಡ ಭಾರತೀಯ ಮೂಲದವರು ಸಿಇಒ ಆಗುವ ಮುಖೇನ ಸಾಮಾಜಿಕ ಜಾಲತಾಣದಲ್ಲೂ ಭಾರತೀಯರ ಪ್ರಾಬಲ್ಯ ಮುಂದುವರೆದಿದೆ.

ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ನವೆಂಬರ್ 29 ಸೋಮವಾರದಂದು ರಾಜೀನಾಮೆ ಘೋಷಿಸಿದ ನಂತರ ಭಾರತೀಯ ಮೂಲದ ಪರಾಗ್ ಅಗರವಾಲ್ ಅವರು Twitter Inc ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಅಧಿಕಾರ ವಹಿಸಿಕೊಂಡರು.

ಭಾರತೀಯ ಮೂಲದ ಅಗರವಾಲ್, ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. 2011ರಲ್ಲಿ ಟ್ವಿಟ್ಟರ್ ‌ಗೆ ಸೇರಿದ್ದ ಅವರು 2017ರಿಂದ ಟ್ವಿಟ್ಟರ್‌ನ CTO ಆಗಿದ್ದರು. ಡಾರ್ಸೆ ಅವರ ನಿರ್ಗಮನದ ನಂತರ ಮಂಡಳಿಯ ಸದಸ್ಯರೂ ಆಗಲಿದ್ದಾರೆ.

ಈಗ ಜಗತ್ತಿನ ಬಹುತೇಕ ಸಂಸ್ಥೆಗಳ ಮುಖ್ಯಸ್ಥರು ಭಾರತೀಯರೇ ಆಗಿದ್ದು  ಟೆಕ್ ಜಗತ್ತನ್ನು ಆಳುತ್ತಿರುವ ಇತರ ಭಾರತೀಯ ಮೂಲದ CEOಗಳ ಪಟ್ಟಿ ಇಲ್ಲಿದೆ:

ಗೂಗಲ್ ಸಿಇಒ ಸುಂದರ್ ಪಿಚೈ.

2015 ರಲ್ಲಿ ಗೂಗಲ್ ಸಿಇಒ ಆದ ಪಿಚೈ, ಗೂಗಲ್ ಸಹಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ಡಿಸೆಂಬರ್ 2019 ರಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದಾಗ, ಗೂಗಲ್‌ನ ಮೂಲ ಕಂಪನಿಯಾದ ಆಲ್ಫಾಬೆಟ್‌ನ ಸಿಇಒ ಕೂಡ ಆದರು.

ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಲ್ಲಾ

1992 ರಿಂದ ಮೈಕ್ರೋಸಾಫ್ಟ್‌ನಲ್ಲಿರುವ ಸತ್ಯ ನಾಡೆಲ್ಲಾ 2014ರ ಫೆಬ್ರುವರಿಯಲ್ಲಿ ಸ್ಟೀವ್ ಬಾಲ್ಮರ್ ಅಧಿಕಾರ ತ್ಯಜಿಸಿದ ನಂತರ ಮೈಕ್ರೋಸಾಫ್ಟ್‌ನ ಕಾರ್ಯಕಾರಿ ಅಧ್ಯಕ್ಷ ಮತ್ತು CEO ಆದರು.

ಅಡೋಬ್ ಸಿಇಒ ಶಂತನು ನಾರಾಯಣ್
ಶಂತನು ನಾರಾಯಣ್ 1998 ರಲ್ಲಿ ಅಡೋಬ್ ಇಂಕ್‌ನ ಎಂಜಿನಿಯರಿಂಗ್ ತಂತ್ರಜ್ಞಾನ ಗುಂಪಿನ  ಜನರಲ್ ಮ್ಯಾನೇಜರ್  ಆಗಿ ಹಾಗೂ ಉಪಾಧ್ಯಕ್ಷರಾಗಿ ಸೇರಿದರು.  ನಂತರ 2005 ರಲ್ಲಿ ಅಧ್ಯಕ್ಷ ಮತ್ತು COO ಆದರು.  2007 ರಲ್ಲಿ  CEO ಆದರು ಮತ್ತು ನಂತರ 2017 ರಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದರು.

ನೋಕಿಯಾದ ಸಿಇಒ ರಾಜೀವ್ ಸೂರಿ

ಸೂರಿ ಫೆಬ್ರವರಿ 2021 ರಿಂದ ಇಮ್ಮಾರ್‌ಸಾಟ್‌ನ CEO ಆಗಿದ್ದಾರೆ. ಅದಕ್ಕೂ ಮೊದಲು, ಅವರು ಮೇ 2014 ರಿಂದ ಜುಲೈ 2020 ರವರೆಗೆ ಆರು ವರ್ಷಗಳ ಕಾಲ Nokia ನ CEO ಆಗಿದ್ದರು.

ಐಬಿಎಮ್ ಅರವಿಂದ ಕೃಷ್ಣ

ಐಐಟಿ ಕಾನ್ಪುರದಿಂದ ಪದವಿ ಪಡೆದ ಅರವಿಂದ ಕೃಷ್ಣ ಅವರು 1990 ರಲ್ಲಿ ಐಬಿಎಂಗೆ ಸೇರಿದರು. ಏಪ್ರಿಲ್ 2020 ರಿಂದ ಕಂಪನಿಯ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಜನವರಿಯಲ್ಲಿ ಅಧ್ಯಕ್ಷರಾದರು.

ಪಾಲೋ ಆಲ್ಟೋ ನೆಟ್ವರ್ಕ್ ‌ ನಿಕೇಶ್ ಅರೋರಾ

ಅರೋರಾ ಅವರು ಜೂನ್ 2018 ರಲ್ಲಿ ಪಾಲೊ ಆಲ್ಟೊ ನೆಟ್‌ವರ್ಕ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಿ ಸೇರಿಕೊಂಡರು. ಇದಕ್ಕೂ ಮೊದಲು, ಅರೋರಾ ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್‌ನ ಅಧ್ಯಕ್ಷ ಮತ್ತು ಸಿಒಒ ಆಗಿದ್ದರು ಮತ್ತು ಅದಕ್ಕೂ ಮೊದಲು ಗೂಗಲ್‌ನಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿದ್ದರು.

ಮಾಸ್ಟರ್‌ ‌ಕಾರ್ಡ್ ಸಿಇಒ ಅಜಯ್ಪಾಲ್ ಸಿಂಗ್ ಬಂಗಾ

ಬಂಗಾ ಅವರು ಪ್ರಸ್ತುತ ಮಾಸ್ಟರ್‌ಕಾರ್ಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ನಿವೃತ್ತರಾಗಲಿದ್ದಾರೆ. ಜುಲೈ 2010 ರಿಂದ 31 ಡಿಸೆಂಬರ್ 2020 ರವರೆಗೆ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಸೇವೆ ಸಲ್ಲಿಸಿದ್ದರು

Exit mobile version