ಬಿತ್ತಿದಂತೆ ಬೆಳೆ ; ಪೋಷಕರು ಬಯಸಿದಂತೆ ಮಕ್ಕಳು ಬೆಳೆಯಬೇಕಾದರೆ ಏನು ಮಾಡಬೇಕು? ಇಲ್ಲಿದೆ ಒಂದಿಷ್ಟು ಮಾಹಿತಿ!

kids growth

ಮಕ್ಕಳ ಮಾನಸಿಕ ಆರೋಗ್ಯ (Parents impact on thier kids) ಹಾಗೂ ಪರಿಪೂರ್ಣ ಬೆಳವಣಿಗೆಯಲ್ಲಿ ಪೋಷಕರ ಪಾತ್ರ.

ಆಹಾ! ಕೇಳಲು ಎಷ್ಟು ಸೊಗಸಾಗಿದೆ, ಅರ್ಥಪೂರ್ಣವಾಗಿದೆ ಅಲ್ಲವೇ? ರೈತರು (Parents impact on thier kids) ಏನು ಬೆಳೆಯ ಬಯಸುತ್ತಾರೋ ಅದೇ ಬೀಜವನ್ನು ಹೊಲದಲ್ಲಿ ಬಿತ್ತಬೇಕಾಗುತ್ತದೆ, 

ಅಂತೆಯೇ ನಮ್ಮ ಮಕ್ಕಳು ಹೇಗಿರಬೇಕೆಂದು ನಾವು ಬಯಸುತ್ತೇವೋ ಆ ವಿಷಯಗಳೆ0ಬ ಬೀಜವನ್ನು ಬಾಲ್ಯದಿಂದಲೇ ಮಗುವಿನ ಮನವೆಂಬ ಹೊಲದಲ್ಲಿ ಬಿತ್ತಬೇಕಾಗುತ್ತದೆ.

Family

ಬಿತ್ತಿದರೆ ಸಾಕೇ? ಇಲ್ಲ, ಬಿತ್ತಿದ ವಿಚಾರಗಳನ್ನು ನೀರೆರೆದು ಪೋಶಿಸಬೇಕು. ಇದು ತಂದೆ ತಾಯಿಯರ ಆದ್ಯ ಕರ್ತವ್ಯ. ಮಗುವಿಗೆ ಮೊದಲ ಗುರು ತಾಯಿ, ಮಗುವು ತಾಯಿಯ ನಡವಳಿಕೆ, ವರ್ತನೆಯನ್ನು ಗಮನಿಸುತ್ತಲೇ ಇರುತ್ತದೆ.

ನನ್ನ ಅಮ್ಮ ಮಾಡುವುದೆಲ್ಲವೂ ಸರಿ ಎಂದು ಭಾವಿಸಿ ಅವಳನ್ನೇ ಅನುಸರಿಸುತ್ತದೆ.

https://vijayatimes.com/operation-nia-new-delhi/

ಹಾಗಾಗಿ ಮಗುವಿನ ಮನಸಲ್ಲಿ ಸದ್ಗುಣವೆಂಬ ಬೀಜವನ್ನು ಮೊದಲು ಬಿತ್ತಬೇಕಾದವಳು ತಾಯಿ. ಮಗುವು ಬೆಳೆಯುತ್ತಿದ್ದಂತೆ ಅದರ ಮನಸ್ಸು ಹೊರಗಿನ ಪರಿಸರಕ್ಕೆ ತೆರೆಯಲ್ಪಡುತ್ತದೆ.

ಮಕ್ಕಳು ಸೂಕ್ಷ್ಮಗ್ರಾಹಿಗಳು! ಮನೆಯಲ್ಲಿ ತಂದೆ ತಾಯಿಯರ ವರ್ತನೆ, ವಾತಾವರಣ, ಉಪಯೋಗಿಸುವ ಪದಗಳು, ಹೊರಗಿನ ಪರಿಸರದಲ್ಲಿನ ಜನರ ನಡವಳಿಕೆ, ಮಾತಿನ ರೀತಿ, ಹೀಗೆ ಪ್ರತಿಯೊಂದೂ ಅವರ ಮನಸಲ್ಲಿ ಬಿತ್ತಲ್ಪಡುತ್ತದೆ.

ಹಾಗಾಗಿ ನಾವೆಲ್ಲಾ ಬಹಳ ಎಚ್ಚರದಿಂದ ವರ್ತಿಸಬೇಕಾಗುತ್ತದೆ.

ಹೊರಗಿನ ವಾತಾವರಣದಿಂದ ಅವರು ಕಲಿತ ವಿಷಯಗಳಲ್ಲಿ ಒಳೆಯದ್ಯಾವುದು, ಕೆಟ್ಟದ್ಯಾವುದು ಎಂದು ವರ್ಗಿಕರಿಸಿ ಮಕ್ಕಳಿಗೆ ಅರಿವು ಮೂಡಿಸುವುದು ತಾಯಿಯ ಕರ್ತವ್ಯ.

Family

ಪುರಾಣಗಳ ಪ್ರಕಾರ ತಾಯಿಯ ಗರ್ಭದಲ್ಲೇ ಮಗು ವಿಚಾರ ಗ್ರಹಿಕೆಯ ಸಾಮರ್ಥ್ಯ ಹೊಂದಿರುತ್ತದೆ, ಉದಾಹರಣೆಗೆ, ಕಯಾದುವಿನ ಗರ್ಭದಲ್ಲಿದಾಗಲೇ ಪ್ರಹ್ಲಾದನು ನಾರದರು ಬೋಧಿಸಿದ ಶ್ರೀಮನ್ನಾರಾಯಣನ ಅಷ್ಟಾಕ್ಷರಿ ಮಂತ್ರದಿಂದ ಪ್ರಭಾವಿತನಾಗಿ ನಾರಾಯಣನ ಆರಾಧಕನಾಗಿದ್ದು.

ಅದೇ ರೀತಿ, ಸುಭದ್ರೆಯ ಗರ್ಭದಲ್ಲಿದ್ದ ಅಭಿಮನ್ಯು ಶ್ರೀ ಕೃಷ್ಣ ಪರಮಾತ್ಮನು ಬೋಧಿಸಿದ ಚಕ್ರವ್ಯೂಹ ಭೇದಿಸುವ ವಿದ್ಯೆಯನ್ನು ಅರ್ಧಂಬರ್ಧ ಕಲಿತಿದ್ದು.

ಹೀಗೆ ತಾಯಿಯು ಮಗುವನ್ನು ಒಡಲಲ್ಲಿ ಹೊತ್ತ ಸಂದರ್ಭದಲ್ಲಿ,ಆಕೆಯ ಮನಸ್ಥಿತಿ ಹಾಗೂ ಅವಳು ಕೇಳುವ ಕಲಿಯುವ ವಿಷಯಗಳು ಮಗುವಿನ ಮೇಲೆ ಪ್ರಭಾವ ಬೀರುತ್ತದೆ.

ಹಾಗಾಗಿ ಹೆಣ್ಣು ಗರ್ಭವತಿಯಾಗಿದ್ದಾಗ ಆಕೆ ಒಳ್ಳೆಯ ವಿಷಯಗಳನ್ನು ಕೇಳಬೇಕು, ಒಳ್ಳೆ ಪುಸ್ತಕ ಓದಬೇಕು, ಮನಸ್ಸು ಶಾಂತವಾಗಿಟ್ಟುಕೊಳ್ಳಬೇಕು ಎಂದೆಲ್ಲ ಹಿರಿಯರು ಹೇಳುವುದು.

ಅದು ನಿಜವೂ ಕೂಡ ಹೀಗೆ  ಮಗುವಿನ ಕಲಿಕೆ ತಾಯಿಯ ಗರ್ಭದಲ್ಲೇ ಪ್ರಾರಂಭವಾಗುತ್ತದೆ ಎಂಬುದಕ್ಕೆ ಪುರಾಣದ ಕಥೆಗಳು ಪುಷ್ಟಿ ನೀಡುತ್ತವೆ.

ನಾವು ಹೇಳಿದ್ದನ್ನು ಮಕ್ಕಳು ಪಾಲಿಸುವುದಿಲ್ಲ, ಬದಲಾಗಿ ನಮ್ಮ ವರ್ತನೆಯನ್ನು ಅವರು ಅನುಸರಿಸುತ್ತಾರೆ ಎಂಬ ಸತ್ಯದ ಅರಿವು ನಮಗಾಗಬೇಕು.

ಅವರ ಜೊತೆ ನಾವು ಕೂಡ ಒಳ್ಳೆಯ ವಿಷಯಗಳನ್ನು ಪಾಲಿಸಿ ಮಕ್ಕಳಿಗೆ ಮಾದರಿಯಾಗಬೇಕು. ಏಕೆಂದರೆ ತಾಯಿಯೇ ಮೊದಲ ಗುರು ಅಲ್ಲವೇ?

Kids


ಮಗುವಿನ ಪ್ರತಿಯೊಂದು ಚಟುವಟಿಕೆಯನ್ನೂ ತಾಯಿ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಕೆಲವೊಮ್ಮೆ ಮಗುವು ಹೊರಗಿನ ವಾತಾವರಣದಿಂದ ಕೆಟ್ಟ ವಿಷಯಗಳನ್ನು ಕಲಿಯುವ ಸಾಧ್ಯತೆ ಇಲ್ಲದಿಲ್ಲ!

ಅಂತಹ ಸಂದರ್ಭದಲ್ಲಿ ತಾಯಿ ಮಗುವಿಗೆ ತಾಳ್ಮೆಯಿಂದ ಮನಸ್ಸಿಗೆ ನಾಟುವಂತೆ ಬುದ್ದಿ ಹೇಳಬೇಕು, ಕೆಟ್ಟದ್ದನ್ನು ಅಲ್ಲಿಯೇ ಚಿವುಟಿ ಹಾಕಬೇಕು.

ಹಾಗಂತ ಅತಿಯಾದ ಶಿಸ್ತು ಸಲ್ಲ. ಮಗುವು ಹುಟ್ಟಿದಾಗಿನಿಂದ, ನಿರಂತರ ಕಲಿಕೆ ಹಾಗು ಬೆಳವಣಿಗೆ ನಡೆಯುತ್ತಲೇ ಇರುತ್ತದೆ, ಶರೀರದ ಒಳಗಿನ ಹಾಗು ಹೊರಗಿನ ಬದಲಾವಣೆಗೆ ಹೊಂದಿಕೊಳ್ಳಲು ಹೋರಾಟ ನಡೆಸುತ್ತಿರುತ್ತದೆ.

ಇಂತಹ ಸನ್ನಿವೇಶದಲ್ಲಿ ಮಗುವು ಶಾರೀರಿಕವಾಗಿ ಹಾಗು ಮಾನಸಿಕವಾಗಿ ಬೆಚ್ಚನೆ ವಾತಾವರಣ, ಸಾಂತ್ವನ, ಪ್ರೀತಿ, ಕಾಳಜಿಯನ್ನು ಬಯಸುತ್ತದೆ. ಅದನ್ನು ಒದಗಿಸುವುದು ಅತ್ಯಗತ್ಯ.

https://www.youtube.com/watch?v=eFR5dmKxeuE

ಒಂದು ವೇಳೆ ತಾಯಿಯು ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದರೆ, ಮಕ್ಕಳಲ್ಲಿಯೂ ಅದೇ ನಡವಳಿಕೆ ಕಾಣಸಿಗುತ್ತದೆ.

ತಂದೆ ತಾಯಿ ಯಾವಾಗಲೂ ಮಕ್ಕಳ ಎದುರಿಗೆ ಜಗಳವಾಡುತ್ತಾ ಒಬ್ಬರನ್ನೊಬ್ಬರು ದೂಶಿಸುತ್ತಿದ್ದರೆ ಮುಂದೆ ಅಂತಹ ಮಕ್ಕಳು ಕೀಳರಿಮೆಯಿಂದ ಬಳಲುವ ಸಾಧ್ಯತೆ ಇದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.

Mother with baby

ತಂದೆ ತಾಯಿ ಮನೆಯಲ್ಲಿ ಕೆಟ್ಟ ಮಾತುಗಳನ್ನು ಉಪಯೋಗಿಸುತ್ತಿದ್ದರೆ  ಮಕ್ಕಳು ಸಹ ಅಂತಹ ಮಾತನ್ನೇ ಕಲಿಯುತ್ತಾರೆ. ಮಗುವಿಗೆ ಹುಟ್ಟಿನಿಂದಲೇ ಒಳ್ಳೆಯತನವೆಂಬ ಬೀಜವನ್ನು ಮನದಲ್ಲಿ ಬಿತ್ತುವ ವಾತಾವರಣ ಮನೆಯಲ್ಲಿರಬೇಕು.

ಬದುಕಿನಲ್ಲಿ ಕೇವಲ 10% ಮಾತ್ರ ಅನಿರೀಕ್ಷಿತ, ಉಳಿದ 90% ರೂಪಿಸಿಕೊಳ್ಳುವುದು ನಮ್ಮ ಕೈಯ್ಯಲ್ಲಿದೆ.

ನಾವು ಮಕ್ಕಳ ಮನದಲ್ಲಿ ಏನನ್ನು ನಿರಂತರವಾಗಿ ಬಿತ್ತುತ್ತೇವೋ, ಅದೇ ಶಾಶ್ವತವಾಗಿ ಬೆಳೆಯುತ್ತದೆ. ಬೇವನ್ನು ಬಿತ್ತಿ, ಬೆಲ್ಲ ಬೇಕೆಂದರೆ ಸಾಧ್ಯವೇ? ಅದಕ್ಕೇ ಅಲ್ಲವೇ ಹೇಳುವುದು ಬಿತ್ತಿದಂತೆ ಬೆಳೆ ಎಂದು!
Exit mobile version