ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆ

ನವದೆಹಲಿ, ನ. 20: ಈಗಾಗಲೇ ಕೋವಿಡ್-19ಗೆ  ತತ್ತರಿಸಿ ನೆಲಕಚ್ಚಿರುವ  ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ನೀಡಿವೆ ತೈಲ ಮಾರುಕಟ್ಟೆ ಕಂಪೆನಿಗಳು.. ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ದರವನ್ನ ಏರಿಕೆ ಮಾಡಿದ್ದು, ಪೆಟ್ರೋಲ್ ಮೇಲೆ 17 ಪೈಸೆ ಹಾಗೂ ಡೀಸೆಲ್ ದರ 22 ಪೈಸೆ ಹೆಚ್ಚಾಗಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗುತ್ತಿದ್ರು ಕಳೆದೆರೆಡು ತಿಂಗಳಿಂದ ಬೆಲೆ ಏರಿಕೆ ಕಂಡಿರಲಿಲ್ಲ. ಆದರೆ ಇದೀಗ ಬೆಲೆ ಏರಿಕೆ ಕಂಡಿದೆ.  ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 17 ಪೈಸೆ ಹೆಚ್ಚಾಗಿದ್ದು, ಈ ಮೂಲಕ ಪೆಟ್ರೋಲ್ ದರ 81.23 ರೂಪಾಯಿ ಆಗಿದೆ. ಇನ್ನು ಡೀಸೆಲ್ ದರದಲ್ಲಿಯೂ 22 ಪೈಸೆ ಹೆಚ್ಚಾಗಿದ್ದು, ಈ ಮೂಲಕ ಲೀಟರ್‌ಗೆ 70. 68 ಪೈಸೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ 23 ಪೈಸೆ ಹೆಚ್ಚಾಗಿದ್ದು, ಈ ಮೂಲಕ ಸದ್ಯ ಪೆಟ್ರೋಲ್ ದರ 83.92 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆ 28 ಪೈಸೆ ಹೆಚ್ಚಾಗಿದ್ದು, ಡೀಸೆಲ್ ಬೆಲೆ 74.91 ರೂಪಾಯಿ ಆಗಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ44 ಅಮೆರಿಕನ್ ಡಾಲರ್ ಆಗಿದೆ.

Exit mobile version