ಮಹಿಳೆಯರನ್ನು ಕಾಡೋ ಪಿಸಿಓಡಿ ಸಮಸ್ಯೆಗೆ ಇಲ್ಲಿದೆ ಕೆಲವು ಸರಳ ಮನೆಮದ್ದುಗಳು

Health : ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (Polycystic ovary syndrome) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಧುನಿಕ ಜೀವನ ಶೈಲಿ ಮತ್ತು ಅತಿಯಾದ ಒತ್ತಡದ ಕಾರಣದಿಂದಾಗಿ ಈ ಪಿಸಿಓಡಿ (PCOD) ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಶೇಕಡಾ 25 ರಿಂದ 30ರಷ್ಟು ಮಹಿಳೆಯರು (PCOD problems) ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಇನ್ನು ಭಾರತದಲ್ಲಿ ಸಾಮಾನ್ಯವಾಗಿ ಕೂದಲು ಉದುರುವಿಕೆ, ಮೊಡವೆ, ಅಧಿಕ ತೂಕ, ರೋಮಗಳ ಬೆಳವಣಿಗೆ ಮೊದಲಾದ ಸಮಸ್ಯೆಗಳನ್ನು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOD problems) ಸಮಸ್ಯೆಗೊಳಗಾದವರಲ್ಲಿ ಕಾಣಬಹುದು.

ಈ ಸಮಸ್ಯೆಯೂ ಬಂಜೆತನಕ್ಕೂ ಕಾರಣವಾಗಬಲ್ಲ. ಹೀಗಾಗಿ ಸಾಧ್ಯವಾದಷ್ಟು ಬೇಗ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.

ಇನ್ನು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮಾಡಬೇಕಾದ ಮತ್ತು ಸೇವಿಸಬೇಕಾದ ಕೆಲ ಆಹಾರಗಳ ವಿವರ ಇಲ್ಲಿದೆ ನೋಡಿ.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.

ಪ್ರತಿದಿನ ವ್ಯಾಯಾಮ ಮತ್ತು ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು.

ಮಹಿಳೆಯರು ಪ್ರೋಟೀನ್ (protein) ಹಾಗೂ ಫೈಬರ್ಯುಕ್ತ ಪೌಷ್ಠಿಕ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.

ಇದನ್ನೂ ಓದಿ : https://vijayatimes.com/kumaraswamy-tweet-for-bjp/

ಪುದಿನಾ ಟೀ : ಪಿಸಿಓಡಿ ಸಮಸ್ಯೆ ಹೊಂದಿರುವ ಮಹಿಳೆಯರು ಹೆಚ್ಚು ಟೆಸ್ಟೋಸ್ಟೆರಾನ್ (Testosterone) ಮಟ್ಟವನ್ನು ಹೊಂದಿರುತ್ತಾರೆ. ಪುದಿನಾ ಟೀ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಪುದಿನಾ ಟೀ ಪಿಸಿಓಡಿ ಕಡಿಮೆ ಮಾಡುವ ಜೊತೆಗೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

ಅಲೋವರಾ : ಪಿಸಿಓಡಿಯಿಂದ ಬಳಲುತ್ತಿರುವ ಮಹಿಳೆಯರು ಅಲೋವರವನ್ನು ಜೇನುತುಪ್ಪ ಹಾಗೂ ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬೇಕು. ಇದರಿಂದ ಉದರ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

ಆಪಲ್ ಸೈಡರ್ ವಿನೆಗರ್: ಇದು ದೇಹದ ಸಮತಲೋನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಪಿಸಿಓಡಿ ಸಮಸ್ಯೆಯನ್ನು ನಿವಾರಿಸುತ್ತದೆ.

ಮೆಂತ್ಯ, ದಾಲ್ಚಿನ್ನಿ ಮತ್ತು ಕಪ್ಪು ಒಣದ್ರಾಕ್ಷಿ ಜ್ಯೂಸ್: ಮೆಂತ್ಯ ಋತುಚಕ್ರದ ಸಮಯದಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡುತ್ತದೆ. ಕಪ್ಪು ಒಣ ದ್ರಾಕ್ಷಿಯು ಪಿಸಿಓಡಿ ಚಿಕಿತ್ಸೆಯಲ್ಲಿ ಸಹಾಯ ಮಾಡುವ ಹಾಗೂ ರಕ್ತ ಶುದ್ಧೀಕರಣ ಗುಣಲಕ್ಷಣಗಳನ್ನು ಹೊಂದಿರುತ್ತದೆ. ದಾಲ್ಚಿನಿ ಇನ್ಸುಲಿನ್ (Cinnamon insulin) ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಒಣದ್ರಾಕ್ಷಿ, ದಾಲ್ಚಿನ್ನಿ ಹಾಗೂ ಮೆಂತ್ಯ ಮಿಶ್ರಣದ ಜ್ಯೂಸ್ಅನ್ನು 4 ದಿನಗಳ ಕಾಲ ಸೇವಿಸಬೇಕು.

ಇದನ್ನೂ ಓದಿ : https://vijayatimes.com/devegowda-warns-jds-leaders/

ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್ : ಬೀಟ್ರೂಟ್ ಹಾಗೂ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ರಕ್ತಹೀನತೆಯಿಂದ ಚೇತರಿಸಿಕೊಳ್ಳಬಹುದು. ಇದು ಋತುಚಕ್ರವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುವ ಮೂಲಕ ರಕ್ತವನ್ನು ಶುದ್ಧಿಗೊಳಿಸುತ್ತದೆ.

Exit mobile version