PCOS ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗುತ್ತಿದಲ್ಲಿ ಈ ಕ್ರಮಗಳನ್ನು ಅನುಸರಿಸಿ

pcos

ಹದಿಹರೆಯದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಸಮಸ್ಯೆಗಳು ಪಾಲಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (Polycystic ovarian syndrome) ಸಮಾನ್ಯವಾಗಿ PCOS ಎಂದು ಕರೆಯುತ್ತಾರೆ.

ಈ ಪಿಸಿಓಎಸ್ ಸಮಸ್ಯೆಯಿಂದ ಮಹಿಳೆಯರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ . ಮುಖ್ಯವಾಗಿ ದೇಹದ ತೂಕ ಹೆಚ್ಚಾಗುತ್ತದೆ . ಅಷ್ಟೆ ಅಲ್ಲ ಮುಖದ ಮೇಲೆ ಮೊಡವೆ ಕೂದಲು ಮತ್ತು ಮಾನಸಿಕ ಖಿನ್ನತೆಗೂ ಇದು ಕಾರಣವಾಗುತ್ತದೆ . ಹಾಗಾಗಿ ಇತ್ತೀಚೆಗೆ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಆದರೂ ಸ್ವಲ್ಪ ಅಪಾಯಕಾರಿಯಾಗಿರುತ್ತದೆ .

ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರು ಜೀವನಶೈಲಿಯನ್ನು ಉತ್ತಮವಾಗಿಸಿಕೊಳ್ಳುವುದು ಅತಿ ಅಗತ್ಯವಾಗಿರುತ್ತದೆ . ಮುಖ್ಯವಾಗಿ ತೂಕ ಕಡಿಮೆ ಇರುವ ಮಹಿಳೆಯರಲ್ಲಿ ಪಿಸಿಒಎಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ . ಇದ್ರಿಂದ ದೇಹದ ತೂಕ ಹೆಚ್ಚಾಗುತ್ತದೆ ಮುಖ್ಯವಾಗಿ ಹೊಟ್ಟೆಯ ಕೆಳಭಾಗದಲ್ಲಿ ಅನಗತ್ಯ ಬೊಜ್ಜು ಬೆಳೆಯುತ್ತದೆ ಅಷ್ಟೆ ಅಲ್ಲ ಹೊಟ್ಟೆ ಸುತ್ತಲು ಕೊಬ್ಬು ತುಂಬಿಕೊಳ್ಳುತ್ತದೆ . ಹಾಗಾಗಿ ಈ ವಿಚಾರ ಕುರಿತು  ವೈದ್ಯರು ನೀಡಿದ ಸಲಹೆ ಇಲ್ಲಿದೆ ನೋಡಿ .

ಮೊದಲಿಗೆ ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರು ಪ್ರೋಬಯೋಟಿಕ್ಸ್ ಹೆಚ್ಚಿರುವ ಆಹಾರ ಸೇವಿಸಬೇಕು . ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯವನ್ನು ಬೆಳೆಸಲು ಬಹಳ ಸಹಾಯ ಮಾಡುತ್ತದೆ . ಅಷ್ಟೇ ಅಲ್ಲ ದೇಹದ ತೂಕ ಸಹ ಕಡಿಮೆ ಮಾಡುತ್ತದೆ . ನಾವು ದಿನನಿತ್ಯ ಸೇವಿಸುವ ಇಡ್ಲಿ , ದೋಸೆ , ಮೊಸರು ಅಂತಹ ಪದಾರ್ಥಗಳಲ್ಲಿ ಪ್ರೊಬಯೋಟಿಕ್ಸ್ ಹೆಚ್ಚುತ್ತಿರುತ್ತದೆ.

ನಮಗೆ ಬಹಳ ಇಷ್ಟವಾದ ಜಂಕ್ ಫುಡ್ ಅಂದ್ರೆ ಚಿಪ್, ಚಾಕ್ಲೆಟ್ ಇತ್ಯಾದಿಗಳನ್ನು ಕಡಿಮೆ ಮಾಡಬೇಕು. ಅದರ ಬದಲು ಹಸಿರು ತರಕಾರಿ ಸೇವಿಸುವುದು ಹೆಚ್ಚು ಗೊಳಿಸಬೇಕು.

ಮುಖ್ಯವಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು.  ಸರಿಯಾದ ಸಮಯಕ್ಕೆ ಊಟ, ತಿಂಡಿ ,ನಿದ್ದೆ ಮಾಡಬೇಕು . ಆಹಾರ ಸರಿಯಾದ ಸಮಯಕ್ಕೆ ಸೇವಿಸದಿದ್ದರೆ ಜೀರ್ಣಕ್ರಿಯೆಯಲ್ಲಿ ತೊಂದರೆ ಯಾಗುತ್ತದೆ. ಆದ್ದರಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ದೊರೆಯುವುದಿಲ್ಲ . ಪಿಸಿಒಎಸ್ ಸಮಸ್ಯೆ ಕಾಣಿಸಿಕೊಳ್ಳಲು ಇದು ಕೂಡ ಒಂದು ಕಾರಣ.

ಪ್ರತಿದಿನ ಬೆಳಿಗ್ಗೆ ಸಂಜೆ ವ್ಯಾಯಾಮ ಮಾಡುವುದು ಬಹಳ ಮುಖ್ಯ . ಕನಿಷ್ಠ ಅಂದ್ರೂ ಅರ್ಧಗಂಟೆಯಾದರೂ ವ್ಯಾಯಾಮ  ಮಾಡಬೇಕು . ಇದು ದೇಹದ ಕೊಬ್ಬನ್ನು ಕರಗಿಸಲು ಮತ್ತು ದೇಹಕ್ಕೆ ಹೊಸ ಹುರುಪು ನೀಡುತ್ತದೆ ಸಹಯ್ಯ ಮಾಡುತ್ತದೆ.

ಕೊನೆಯದಾಗಿ ನಿದ್ದೆ . ನಿದ್ದೆಯ ಕೊರತೆಯಿಂದ ಸಹ ಪಿಸಿಒಎಸ್ ಸಮಸ್ಯೆ ಕಾಣಿಸಿಕೊಳ್ಳಬಹುದು ಮತ್ತು ದೇಹದ ತೂಕ ಹೆಚ್ಚಾಗಬಹುದು . ಆದ್ದರಿಂದ ಕನಿಷ್ಠ 6ಗಂಟೆಗಳಿಗಿಂತ ಹೆಚ್ಚು ಸಮಯ  ನಿದ್ರೆ ಮಾಡಬೇಕು.

ಪಿಸಿಒಎಸ್ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಯಾದರೂ ಇದು ಬಹಳ ಅಪಾಯಕಾರಿ ಆಗಿರುತ್ತದೆ ಆದ್ದರಿಂದ ಇದರ ಮೇಲೆ ಹೆಚ್ಚು ಗಮನ ಹರಿಸಬೇಕಾದುದು ಬಹಳ ಮುಖ್ಯ . ಮುಖ್ಯವಾಗಿ  ಜೀವನ ಶೈಲಿಯನ್ನು   ಬದಲಾಯಿಸಿಕೊಳ್ಳಬೇಕು ಮತ್ತು ಒಳ್ಳೆಯ ಆಹಾರ ಆಹಾರ ಪದ್ಧತಿ ಇರುವುದು ಬಹಳ ಮುಖ್ಯ . ಈ ಮೇಲಿನ ಅಂಶಗಳು ಪಿಸಿಒಎಸ್ ನಿಂದ ದೇಹದ ತೂಕ ಹೆಚ್ಚಾಗುವ ಕಾರಣಗಳು ಮತ್ತು ಮತ್ತು ದೇಹದ ತೂಕವನ್ನು ಇಳಿಸಲು ಅನುಸರಿಸಬೇಕಾದ ಕ್ರಮಗಳು.

Exit mobile version