ಪೆಲೋಸಿಯ ತೈವಾನ್ ಭೇಟಿಯ   ಕಾರಣ ಮತ್ತು ಚೀನಾ ಬೆದರಿಕೆಗಳನ್ನು ಹಾಕುತ್ತಿರೋದ್ಯಾಕೆ?

ಚೀನಾದ(China) ಬೆದರಿಕೆಗಳ ನಡುವೆ ಅಮೇರಿಕಾದ(America) ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ರಾತ್ರಿ ತೈವಾನ್(Taiwaan) ತಲುಪಿದರು. ಕಳೆದ ವಾರ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಮೇರಿಕಾದ ಅಧ್ಯಕ್ಷ(America President) ಜೋ ಬಿಡನ್‌ಗೆ(Joe Biden) “ಬೆಂಕಿಯೊಂದಿಗೆ ಆಟವಾಡಬೇಡಿ”  ಎಂದು ನೆರವಾಗಿ ಎಚ್ಚರಿಸಿದ್ದರು. ಚೀನಾದ ತೀವ್ರ ವಿರೋಧದ ನಡುವೆಯೂ ಅಮೇರಿಕಾ ತನ್ನ ಉನ್ನತ ಮಟ್ಟದ ಅಧಿಕಾರಿಯನ್ನು ತೈವಾನ್‌ಗೆ ಕಳುಹಿಸಿದೆ.

ಇನ್ನು ಚೀನಾ ತನ್ನದೇ ಎಂದು ಹೇಳಿಕೊಳ್ಳುವ ತೈವಾನ್ ದ್ವೀಪಕ್ಕೆ ಹಾರುವ ಮೂಲಕ, ಪೆಲೋಸಿ 25 ವರ್ಷಗಳಲ್ಲಿ ಸ್ವಯಂ-ಆಡಳಿತದ ದ್ವೀಪಕ್ಕೆ ಭೇಟಿ ನೀಡಿದ ಉನ್ನತ ಶ್ರೇಣಿಯ ಚುನಾಯಿತ ಅಮೇರಿಕಾದ ಅಧಿಕಾರಿಯಾಗಿದ್ದಾರೆ. ನ್ಯಾನ್ಸಿ ಪೆಲೋಸಿ ಭೇಟಿಗೆ  ಪ್ರತೀಕಾರವಾಗಿ, 21 ಚೀನಾದ ಮಿಲಿಟರಿ ವಿಮಾನಗಳು ತೈವಾನ್‌ನ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ. ತೈವಾನ್‌ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಬೆದರಿಕೆಯನ್ನು ಚೀನಾ ಪ್ರದರ್ಶಿಸಿದೆ.

ಪೆಲೋಸಿ ತೈವಾನ್‌ಗೆ ಬಂದಿಳಿದ ನಂತರ ಟ್ವೀಟ್(Tweet) ಮಾಡಿದ್ದು, “ನಮ್ಮ ಭೇಟಿಯು ಅಮೆರಿಕ, ತೈವಾನ್‌ನೊಂದಿಗೆ ನಿಂತಿದೆ ಎಂಬುದನ್ನು ಪುನರುಚ್ಚರಿಸುತ್ತದೆ.  ತೈವಾನ್‌ ದೃಢವಾದ, ರೋಮಾಂಚಕ ಪ್ರಜಾಪ್ರಭುತ್ವ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ನಮ್ಮ ಪ್ರಮುಖ ಪಾಲುದಾರ”  ಎಂದಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, “ನಮ್ಮ ನಿಯೋಗದ ತೈವಾನ್ ಭೇಟಿಯು ತೈವಾನ್‌ನ ರೋಮಾಂಚಕ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ.

ತೈವಾನ್ ನಾಯಕತ್ವದೊಂದಿಗಿನ ನಮ್ಮ ಚರ್ಚೆಗಳು, ನಮ್ಮ ಪಾಲುದಾರರಿಗೆ ನಮ್ಮ ಬೆಂಬಲವನ್ನು ಪುನರುಚ್ಚರಿಸುತ್ತವೆ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಮುನ್ನಡೆಸುವುದು ಸೇರಿದಂತೆ ನಮ್ಮ ಆಸಕ್ತಿಗಳನ್ನು ಉತ್ತೇಜಿಸುತ್ತವೆ” ಎಂದಿದ್ದಾರೆ.  ಈ ಮೂಲಕ ನಾವು ಎಂದಿಗೂ ನಿರಂಕುಶಾಧಿಕಾರಿಗಳಿಗೆ ಮಣಿಯುವುದಿಲ್ಲ ಎಂದು ಅಮೆರಿಕಾ  ಸ್ಪಷ್ಟಪಡಿಸಿದೆ ಎಂದು ಅಮೇರಿಕಾದ ಪತ್ರಿಕೆಗಳು ವರದಿ ಮಾಡಿವೆ. ಚೀನಾ, ತೈವಾನ್ ಅನ್ನು ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುತ್ತದೆ ಮತ್ತು ಪೆಲೋಸಿ ತೈವಾನ್‌ ಭೇಟಿ,  ತೈವಾನ್‌ನ ಸ್ವಾತಂತ್ರ್ಯಕ್ಕೆ ಒಂದು ರೀತಿಯ ಅಮೆರಿಕದ ಬೆಂಬಲವನ್ನು ಸೂಚಿಸುತ್ತದೆ.

ಇನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೇರಿಕಾದ ಅಧ್ಯಕ್ಷ ಜೋ ಬಿಡನ್‌ಗೆ “ಬೆಂಕಿಯೊಂದಿಗೆ ಆಟವಾಡಬೇಡಿ”  ಎಂದು ನೆರವಾಗಿ ಎಚ್ಚರಿಸಿದ್ದರು. ಇದರ ಹೊರತಾಗಿಯೂ, ಬೆದರಿಕೆಗಳನ್ನು ನಿರ್ಲಕ್ಷಿಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಾರೆ. ಅಮೇರಿಕಾದ ಈ ನಡೆ ಚೀನಾದ ಸಾರ್ವಭೌಮತ್ವವನ್ನು ಅವಮಾನಿಸಿದೆ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ತೈವಾನ್‌ವಿಚಾರವಾಗಿ ಅಮೇರಿಕಾ ತೆಗೆದುಕೊಂಡಿರುವ ನಿಲುವು, ಚೀನಾ-ಅಮೇರಿಕಾ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಈಗಾಗಲೇ ಚೀನಾದ ಆಡಳಿತರೂಢ ಪಕ್ಷ, ಅಮೇರಿಕಾಗೆ ಮಿಲಿಟರಿ ಕಾರ್ಯಾಚರಣೆಯ ಮೂಲಕ ಪ್ರತಿರೋಧ ನೀಡುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ.

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.