ದೇಶದಲ್ಲಿ ಮಂಗಳವಾರವಷ್ಟೇ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಬೆಲೆಯಲ್ಲಿ(Rate) 80 ಪೈಸೆ ಎಚ್ಚಳ ಮಾಡಲಾಗಿದೆ. ಇಂಧನ(Oil) ಬೆಲೆ ಜೊತೆ ಜೊತೆಯಲ್ಲೇ ಗೃಹಬಳಕೆ(Domestic) ಗ್ಯಾಸ್ ಸಿಲಿಂಡರ್(Gas Cylinder) ಬೆಲೆಯಲ್ಲಿ 50 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ಜನಸಾಮಾನ್ಯರ ಬದುಕನ್ನು ಮತ್ತಷ್ಟು ಕಠಿಣ ಪರಿಸ್ಥಿತಿಗೆ ದೂಡಿದೆ ಎಂದೇ ಹೇಳಬಹುದು. ಜನರು ಒಂದು ಗಾಯದಿಂದಲೇ ಇನ್ನು ಚೇತರಿಸಿಕೊಳ್ಳದ ಸಮಯ ನೋಡಿಕೊಂಡು, ಅದೇ ಗಾಯದ ಮೇಲೆ ಮತ್ತೆ ಬರೆ ಎಳೆದಂತೆ ಗ್ಯಾಸ್ ದರದಲ್ಲಿ ಏರಿಕೆ ಮಾಡಿದರು.

ಈ ತಲೆನೋವು ಯಾರಿಗೂ ಬೇಡ ಎಂದು ಸರ್ಕಾರಕ್ಕೆ ಹಿಡಿ ಶಾಪ ಹಾಕಿ ಮುಂದಿನ ದಿನಕ್ಕೆ ಕಾಲಿಟ್ಟ ಜನಸಾಮಾನ್ಯರಿಗೆ ಮತ್ತೆ ಶಾಕ್! ಹೌದು, ಇಂದು ಬುಧವಾರ ಕೂಡ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ 80 ರೂಪಾಯಿ ಹೆಚ್ಚಳ ಮಾಡಲಾಗಿದೆ. ರಾಜ್ಯ ಇಂಧನ ಚಿಲ್ಲರೆ ವಹಿವಾಟು ನಡೆಸುವವರ ಬೆಲೆ ಅಧಿಸೂಚನೆಯ ಅನುಸಾರ ನವದೆಹಲಿಯಲ್ಲಿ ಪೆಟ್ರೋಲ್ ದರವು 96.21 ರಿಂದ ಇಂದು 97.01ಕ್ಕೆ ಹೆಚ್ಚಳವಾಗಿದೆ.

ಬುಧವಾರ ಕೂಡ ಇಂಧನ ಬೆಲೆಯಲ್ಲಿ 80 ಪೈಸೆ ಏರಿಕೆ ಮಾಡಿ ಗ್ರಾಹಕರಿಗೆ ಅಚ್ಚರಿ ತಂದಿದೆ ಸರ್ಕಾರ. ರಷ್ಯಾ-ಉಕ್ರೇನ್ ನಡುವಿನ ಭೀಕರ ಯುದ್ಧದಿಂದ ಕಚ್ಚಾ ತೈಲಗಳ ಬೆಲೆ ಏರಿಕೆ ಕಂಡ ಪರಿಣಾಮ ಈ ದೊಡ್ಡ ಹೊಡೆತ ನಮಗೆ ಎದುರಾಗಿದೆ ಎಂದು ಜನಸಾಮಾನ್ಯರು ಊಹಿಸಿದ್ದಾರೆ. ಒಟ್ಟಾರೆ ಜನಸಾಮಾನ್ಯರಿಗೆ ಒಂದರ ಮೇಲೆ ಒಂದು ಹೊಡೆತ ಬೀಳುತ್ತಲೇ ಇದೆ. ಮುಂದೆ ಯಾವುದರ ಬೆಲೆ ಏರಿಕೆ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.