ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ನವದೆಹಲಿ ಅ 6 : ಕಳೆದ ಕೆಲವು ದಿನಗಳಿಂದ ಯತಾಸ್ಥಿತಿಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆ ಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ ಗೆ 30 ಪೈಸೆ ಡೀಸೆಲ್ ಬೆಲೆ ಲೀಟರ್ ಗೆ 35 ಪೈಸೆ ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ದರ ಲೀಟರ್ ಗೆ  29 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 37 ಪೈಸೆ ಹೆಚ್ಚಳವಾಗಿದೆಅ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 31ಪೈಸ ಹೆಚ್ಚಳವಾಗಿದ್ದು ಹಾಗೆ ಡೀಸೆಲ್ ದರ ಲೀಟರ್‌ ಗೆ 37ಪೈಸೆ ಹೆಚ್ಚಳವಾಗಿದೆ.  

ಬೆಂಗಳೂರಿನ ದರದ ವಿವಿರ ಇಂತಿದೆ

ಪೆಟ್ರೋಲ್

 ಅ. 06: 106.52

ಅ. 05: 106.21

ಅ. 04: 105.95

ಡೀಸೆಲ್  

ಅ. 06: 97.03

ಅ. 05: 96.66

ಅ. 04: 96.34


ಗ್ಯಾಸ್‌ ದರವೂ ಏರಿಕೆ

 ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಜೊತೆ ಗ್ಯಾಸ್‌ ದರವೂ ಕೂಡ ಏರಿಕೆ ಯಾಗಿದ್ದು ಪ್ರತಿ ಸಿಲಿಂಡರ್ ಮೇಲೆ 15 ರೂ ಗಳಷ್ಟು ಏರಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ 14.2 ಕೆಜಿಗೆ 899 ರೂಪಾಯಿ 50 ಪೈಸೆಯಾಗಿದೆ. 5 ಕೆಜಿ ಸಿಲಿಂಡರ್ ಬೆಲೆ 502 ರೂಪಾಯಿಯಾಗಿದೆ.

Exit mobile version