‘PF ಖಾತೆದಾರʼರಿಗೆ ಗುಡ್ ನ್ಯೂಸ್

ಬೆಂಗಳೂರು, ಡಿ. 16: ಹೊಸ ವರ್ಷಕ್ಕೆ EPFO ಖಾತೆದಾರರಿಗೆ ಶುಭ ಸುದ್ದಿಯೊಂದನ್ನು  ನಿವೃತ್ತಿ ನಿಧಿ ಸಂಸ್ಥೆ ನೀಡಿದೆ. ನೌಕರರಿಗೆ ಅನುಮೋದನೆ ನೀಡುವ 2019-20ರ ನೌಕರರ ಭವಿಷ್ಯ ನಿಧಿ ಸಂಸ್ಥೆಯಿಂದ (ಇಪಿಎಫ್‌ಒ) ಬಡ್ಡಿದರ ತುಂಬಾ ಹೆಚ್ಚಾಗುವ ಸಾಧ್ಯತೆ ಇದೆ. ಇಪಿಎಫ್ ಖಾತೆದಾರರು 8.5% ಬಡ್ಡಿದರವಾಗಿ ಪಡೆಯುವ ನಿರೀಕ್ಷೆಯಿದ್ದು ಈ ಮೂಲಕ ಖಾತಾದಾರರಿಗೆ ಗುಡ್‌ ನ್ಯೂಸ್‌ ನೀಡಲು ಮುಂದಾಗಿರುವ ಸಂಸ್ಥೆ, ಒಂದೇ ಸಮಯದಲ್ಲಿ ಸುಮಾರು 6 ಕೋಟಿ ಗ್ರಾಹಕರ ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಲ್ಲಿ ಹಣ ಜಮಾ ಮಾಡಲಾಗುತ್ತೆ. ಅದು ಕೂಡ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ನೀಡಲಾಗುತ್ತಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಇಪಿಎಫ್ ಖಾತೆಗಳಲ್ಲಿ ಜಮಾ ಮಾಡುವ ಸಾಧ್ಯತೆಯಿದ್ದು. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಇಪಿಎಫ್ ಖಾತೆದಾರರ ಬಡ್ಡಿದರವನ್ನ ಸೆಪ್ಟೆಂಬರ್‌ನಲ್ಲಿ 8.15 ಮತ್ತು ಶೇ 0.35 ರ ಎರಡು ಕಂತುಗಳಾಗಿ ವಿಂಗಡಿಸಲು ಇಪಿಎಫ್‌ಒ ನಿರ್ಧರಿಸಿದೆ.

 ಇಪಿಎಫ್‌ಒ ಟ್ರಸ್ಟಿಗಳು ಮತ್ತು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನಡೆಸಿದ ಸಭೆಯ ನಂತ್ರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿಟಿಐ ಮೂಲವೊಂದರ ಪ್ರಕಾರ, ಕಾರ್ಮಿಕ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಇಪಿಎಫ್ ಮೇಲಿನ ಬಡ್ಡಿದರವನ್ನ 2019-20ರಲ್ಲಿ 8.5 ಪ್ರತಿಶತಕ್ಕೆ ಹೆಚ್ಚಿಸಲು ಒಪ್ಪಿಗೆ ಸೂಚಿಸಿದೆ. ‘ಹಣಕಾಸು ಸಚಿವಾಲಯದ ಅನುಮೋದನೆಯನ್ನ ಕೆಲವೇ ದಿನಗಳಲ್ಲಿ ನಿರೀಕ್ಷಿಸಲಾಗಿದ್ದು, ಈ ತಿಂಗಳೊಳಗೆ ಬಡ್ಡಿ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.  

Exit mobile version