ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ: ವೈರಲ್ ಆದ ಡೈವೋರ್ಸ್ ಮಹಿಳೆಯ ಫೋಟೋಶೂಟ್

Bengaluru : ಇತ್ತೀಚೆಗೆ ಮದುವೆಗೂ ಮುಂಚಿನ ಅಂದರೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ (Pre wedding photo shoot) ಬಹಳಷ್ಟು ಬಂದಿವೆ. ಅದರಲ್ಲೂ ಈಗಿನ ಯುವ ಜನಾಂಗದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ (Social media) ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಕೆಲವರು ಚಿತ್ರ-ವಿಚಿತ್ರ ರೀತಿಯಲ್ಲಿ ಫೋಟೋಶೂಟ್ (Photoshoot of divorced woman) ಮಾಡಿಸಿಕೊಂಡಿರುತ್ತಾರೆ, ಅಂಥ ಕೆಲವೊಂದು ಫೋಟೋಗಳು ಸಖತ್ ವೈರಲ್ ಆಗುತ್ತವೆ.

ಆದರೆ ಇಲ್ಲೊಂದು ಫೋಟೋಶೂಟ್ ಈಗ ಹಲವರ ಗಮನ ಸೆಳೆದಿದೆ. ಏಕೆಂದರೆ ಡೈವೋರ್ಸ್ (divorce) ಆಗಿದ್ದನ್ನೂ ಸಂಭ್ರಮಿಸುವ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಫ್ಯಾಷನ್ ಡಿಸೈನರ್ ಹಾಗೂ ನಟಿಯೂ ಆಗಿರುವ ಶಾಲಿನಿ ಎಂಬಾಕೆ ‘ಡೈವೋರ್ಸ್’ ಎಂಬ ಫಲಕ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

ನಂತರ ಪತಿಯೊಂದಿಗೆ ಇದ್ದ ಫೋಟೋದಿಂದ ತನ್ನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸಿರುವ ಫೋಟೋಗಳು

ಅಷ್ಟೇ ಅಲ್ಲದೆ ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಅವರ ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದ ಫೋಟೋಗಳು ಈ ಫೋಟೋಶೂಟ್‌ನ ಪ್ರಮುಖ ಆಕರ್ಷಣೆ ಆಗಿವೆ.

ಇದನ್ನೂ ಓದಿ : https://vijayatimes.com/karnataka-gst-collection/

ಅಷ್ಟೇ ಅಲ್ಲದೆ, ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!’ ಎಂಬ ಫಲಕವನ್ನು ಹಿಡಿದು ತುಂಬಾ ಸಂತಸದಿಂದ ಬೀಗುವಂಥ ಫೋಟೋ

ಮೂಲಕ ‘ಪತಿ ಎಂಬ ಒಂದು ಸಮಸ್ಯೆಯನ್ನು ನಾನು ನಿವಾರಿಸಿಕೊಂಡಿದ್ದೇನೆ’ ಎಂಬ ಸಂದೇಶವನ್ನೂ ಕೂಡ ಈಕೆ ಸಾರಿದ್ದಾರೆ.

ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಶಾಲಿನಿ ಅದರಲ್ಲಿ ವಿಚ್ಛೇದಿತ ಮಹಿಳೆಯರಿಗೆ ಸಂದೇಶವನ್ನೂ ತಿಳಿಸಿದ್ದಾರೆ

ಧೈರ್ಯಶಾಲಿ ಮಹಿಳೆಯರಿಗೆ ವಿಚ್ಛೇದಿತ ಮಹಿಳೆಯ ಸಂದೇಶ :

ವಿಚ್ಛೇದನವು ವೈಫಲ್ಯವಲ್ಲ!!! ಕೆಟ್ಟ ವಿವಾಹವನ್ನು ಬಿಡುವುದು ಉತ್ತಮ. ವಿಚ್ಛೇದನವು ನಿಮಗೆ ಒಂದು ತಿರುವು ಮತ್ತು ನಿಮ್ಮ ಜೀವನದಲ್ಲಿ (Photoshoot of divorced woman) ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಇದು ಕಾರಣವಾಗುತ್ತದೆ.

ಏಕೆಂದರೆ ನಿಮ್ಮ ಜೀವನದ ಮೇಲೆ ನೀವೇ ನಿಯಂತ್ರಣ ಸಾಧಿಸಿ,ನೀವು ಸಂತೋಷವಾಗಿರಲು ಅರ್ಹರು.

ಇದನ್ನೂ ಓದಿ : https://vijayatimes.com/virat-kohli-vs-gautam-gambhir/

ಹಾಗೂ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರಚಿಸಲು ಅಗತ್ಯವಾದ ಬದಲಾವಣೆಗಳನ್ನು ನೀವೇ ಮಾಡಿಕೊಳ್ಳಿ. ಮದುವೆಯನ್ನು ತೊರೆದು ಏಕಾಂಗಿಯಾಗಿ ನಿಲ್ಲಲು ಸಾಕಷ್ಟು ಧೈರ್ಯ ಇರಬೇಕು,

ಆದ್ದರಿಂದ ನನ್ನ ಎಲ್ಲ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಪ್ರೀತಿಯಿಂದ ಅರ್ಪಿಸುತ್ತೇನೆ..” ಎಂದು ಬರೆದುಕೊಂಡಿದ್ದಾರೆ.

Exit mobile version