ಈ ನಡೆದಾಡುವ ಮೀನಿನ ಬಗ್ಗೆ ನಿಮಗೆ ತಿಳಿದಿಲ್ವಾ? ಹಾಗಾದ್ರೆ ಈ ಸುದ್ದಿ ಓದಿ!

rare fish

ನಡೆದಾಡುವ ಅತಿ ಅಪರೂಪದ ಪಿಂಕ್ ಹ್ಯಾಂಡ್ ಫಿಶ್(Pink Hand Fish) 22 ವರ್ಷದ ಬಳಿಕ ಪತ್ತೆಯಾಗಿದೆ. ಟಾಸ್ಮೇನಿಯನ್ ಕರಾವಳಿಯ ಬಳಿ ಆಸ್ಟ್ರೇಲಿಯಾದ(Australia) ಕಾಮನ್‍ವೆಲ್ತ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್‍ನ ಸಂಶೋಧಕರ(Research) ತಂಡ ಈ ಮೀನು(Fish) ಇರುವ ಬಗ್ಗೆ ಪತ್ತೆ ಹಚ್ಚಿದೆ. ಸಂಶೋಧಕರ ತಂಡ ಟಾಸ್ಮೈನ್ ಸಮುದ್ರದ ಒಳಗೆ ಕ್ಯಾಮೆರಾವನ್ನು ಇಟ್ಟಿದ್ದರು.

4 ಸಾವಿರ ಮೀಟರ್ ಅಡಿಯವರೆಗೆ ಕ್ಯಾಮೆರಾವನ್ನು ಇಳಿಬಿಟ್ಟಿದ್ದರು. ಒಂದು ವರ್ಷದ ನಂತರ ಕ್ಯಾಮೆರಾವನ್ನು ಹೊರತೆಗೆದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್ ಫಿಶ್ ನೋಡಿ ಸಂತಸಗೊಂಡಿದ್ದಾರೆ. ಗುಲಾಬಿ ಹ್ಯಾಂಡ್ ಫಿಶ್ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ. ಆ್ಯಂಗ್ಲರ್​​ಫಿಶ್ ಕುಟುಂಬಕ್ಕೆ ಸೇರಿದ ಈ ಪಿಂಕ್ ಹ್ಯಾಂಡ್​ ಫಿಶ್​ ಇದುವರೆಗೆ ಕೇವಲ ಐದು ಬಾರಿ ಕಾಣಿಸಿಕೊಂಡಿತ್ತು.

ಇದು ಕೊನೆಯದಾಗಿ ಕಾಣಿಸಿಕೊಂಡಿದ್ದು, ತಾಸ್ಮೇನಿಯಾದ ರಾಜಧಾನಿ ಹೊಬಾರ್ಟ್​ಆಗ್ನೇಯ ಭಾಗದ ಕರಾವಳಿ ಪ್ರದೇಶದಲ್ಲಿ, ಅದು 1999ರಲ್ಲಿ.
ಇದನ್ನು ಪತ್ತೆ ಹಚ್ಚಿದ್ದು, ತಾಸ್ಮೇನಿಯಾ ವಿಶ್ವವಿದ್ಯಾಲಯದ ತಜ್ಞರು. ಇತ್ತೀಚೆಗೆ ಟಾಸ್ಮನ್ ಫ್ರಾಕ್ಚರ್ ಮರೈನ್ ಪಾರ್ಕ್​​ನಲ್ಲಿ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಸಮುದ್ರದಲ್ಲಿನ ಹವಳ, ವಿಭಿನ್ನವಾದ ಕಲ್ಲುಗಳು ಮತ್ತು ಮೀನುಗಳ ಬಗ್ಗೆ ಅಧ್ಯಯನಕ್ಕಾಗಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಪಿಂಕ್ ಹ್ಯಾಂಡ್​ಫಿಶ್ ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ.

ಈ ಮೊದಲು 1999ರಲ್ಲಿ 20 ರಿಂದ 30 ಮೀಟರ್ ಆಳದಲ್ಲಿ ಕಂಡುಬಂದಿದ್ದ ಮೀನು, ಅದಕ್ಕೂ ಮುನ್ನ ಕೇವಲ ಸಮುದ್ರದ 10 ಮೀಟರ್ ಆಳದಲ್ಲಿ ಕಂಡುಬಂದಿತ್ತು ಎಂದು ತಿಳಿದುಬಂದಿದೆ. ಸಮುದ್ರದ ತಳದಲ್ಲಿ ನಡೆದಾಡಲು ಪುಟ್ಟ ಕೈಗಳನ್ನು ಹೊಂದಿರುವ ಈ ಮೀನು, ತಿಳಿ ಗುಲಾಬಿ ಬಣ್ಣದಲ್ಲಿದ್ದು ನೋಡಲೂ ಆಕರ್ಷಕವಾಗಿದೆ. ತನ್ನ ಕೈಗಳ ಸಹಾಯದಿಂದ ಮುಂದೆ ಸಾಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ನೀವು ಬಗೆ ಬಗೆಯ ಮೀನುಗಳ ಬಗ್ಗೆ ಕೇಳಿರಬಹುದು, ನೋಡಿರಬಹುದು. ಆದ್ರೆ ಈ ನಡೆದಾಡುವ ಫಿಶ್ ಬಗ್ಗೆ ಕೇಳಿರೋಕೆ ಸಾಧ್ಯವೇ ಇಲ್ಲ.

Exit mobile version