82 ವರ್ಷದ ಮಹಿಳೆಯನ್ನು ಕಚ್ಚಿ ಕೊಂದ ಸಾಕಿದ ಪಿಟ್‌ಬುಲ್ ನಾಯಿ!

Pitbull

ಮಂಗಳವಾರ ಬೆಳಗ್ಗೆ ಲಕ್ನೋದ(Lucknow) ಕೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ನಿವೃತ್ತ ಶಿಕ್ಷಕಿಯ ಮಗ ಸಾಕಿದ್ದ ಮುದ್ದಿನ ಪಿಟ್‌ಬುಲ್(Pitbull dog kills ownerPitbull) ನಾಯಿ ಕಚ್ಚಿ ಕೊಂದಿದೆ.

ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದೆ. ಆಕೆಯ ಮಗ ಜಿಮ್ ತರಬೇತುದಾರನಾಗಿದ್ದು, ಎರಡು ಸಾಕು ನಾಯಿಗಳನ್ನು ಹೊಂದಿದ್ದರು.

ಒಂದು ಪಿಟ್ಬುಲ್ ಮತ್ತೊಂದು ಲ್ಯಾಬ್ರಡಾರ್(Labrador). ಮಹಿಳೆಯ ಮೇಲೆ ದಾಳಿ ಮಾಡಿದ ಬ್ರೌನಿ ಎಂಬ ನಾಯಿಯನ್ನು ಮೂರು ವರ್ಷಗಳ ಹಿಂದೆ ಮನೆಗೆ ತರಲಾಗಿತ್ತು.

ಮಹಿಳೆ ಮನೆಯಲ್ಲಿ ಒಬ್ಬರೇ ಸಮಯ ಕಳೆಯುವಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಏಕಾಏಕಿ ಪಿಟ್ಬುಲ್ ನಾಯಿ ಅವರ ಮೇಲೆ ದಾಳಿ ಮಾಡಿದೆ. ನಂತರ ಮನೆಗೆ ಬಂದ ವೃದ್ಧೆಯ ಮಗನಿಗೆ ಕಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ದೇಹ.

https://vijayatimes.com/the-crooked-forest-in-polland/

ಗಾಬರಿಗೊಂಡ ಮಗ ಕೂಡಲೇ ತಾಯಿಯನ್ನು ಬಲರಾಂಪುರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ, ದೇಹದಿಂದ ಹೆಚ್ಚಿನ ರಕ್ತ ಹೊರಹೋದ ಕಾರಣ ದಾರಿಯ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸುಶೀಲಾ ಅವರ ದೇಹದ ಮೇಲೆ ಕುತ್ತಿಗೆಯಿಂದ ಹೊಟ್ಟೆಯವರೆಗೆ ಒಟ್ಟು 12 ತೀವ್ರ ಗಾಯಗಳು ಪತ್ತೆಯಾಗಿವೆ.

ನೆರೆಹೊರೆಯವರ ಕೊಟ್ಟ ಮಾಹಿತಿಯ ಪ್ರಕಾರ, “ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾಯಿ ಬೊಗಳುವುದು ಮತ್ತು ಸುಶೀಲಾ ಮೇಲೆ ದಾಳಿ ಮಾಡಿದಾಗ ಸಹಾಯಕ್ಕಾಗಿ ಕೂಗುವುದು ನಮಗೆ ಕೇಳಿಸಿತು, ನಾವು ಅವರ ಮನೆಯತ್ತ ಓಡಿ ಹೋದೆವು. ಆದ್ರೆ, ಒಳಗಿನಿಂದ ಬೀಗ ಹಾಕಲಾಗಿತ್ತು. ಮಹಿಳೆಯ ಮಗ ಮನೆಗೆ ಬಂದಾಗ ಅವರು ಬೀಗವನ್ನು ತೆರೆದರು.

ಬಾಗಿಲನ್ನು ತೆರೆದಾಗ ಅವರ ತಾಯಿ ರಕ್ತದಲ್ಲಿ ಓದಾಡುತ್ತಿದ್ದರು” ಎಂದು ಮಾಹಿತಿ ನೀಡಿದ್ದಾರೆ. ನಾಯಿಗಳನ್ನು ಸಾಕಲು ನಿಯಂತ್ರಣ ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ (LMC) ಸ್ವಾನ್ ಲೈಸೆನ್ಸ್ ಕಂಟ್ರೋಲ್ ಮತ್ತು ರೆಗ್ಯುಲೇಶನ್ ಬೈ-ಲಾ 2003 ಎಂಬ ಹೆಸರಿನ ನಾಯಿಗಳನ್ನು ಸಾಕಲು ಕೈಪಿಡಿಯನ್ನು ಬಿಡುಗಡೆ ಮಾಡಿದೆ.

ಕೈಪಿಡಿಯ ಪ್ರಕಾರ, ನಾಯಿಗಳನ್ನು ಸಾಕಲು ಇಷ್ಟಪಡುವ ಜನರು ಹಲವಾರು ಷರತ್ತುಗಳನ್ನು ಅನುಸರಿಸಿದ ನಂತರ ಕಡ್ಡಾಯವಾಗಿ ಪರವಾನಗಿಯನ್ನು ಪಡೆಯಬೇಕಾಗುತ್ತದೆ. ಯಾವುದೇ ವ್ಯಕ್ತಿಯು ತನ್ನ ನಾಯಿಯನ್ನು ನೆರೆಹೊರೆಯವರಿಗೆ ಯಾವುದೇ ಆಕ್ಷೇಪಣೆಯಿಲ್ಲದ ರೀತಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಬಂಧಿಸಬೇಕು ಎಂದು ಕೈಪಿಡಿಯಲ್ಲಿ ಹೇಳಲಾಗಿದೆ.

ಲಕ್ನೋ ನಗರದಲ್ಲಿ ಒಟ್ಟು 4,824 ಪರವಾನಗಿಗಳನ್ನು ನೀಡಲಾಗಿದ್ದು, ಅವುಗಳಲ್ಲಿ 2,370 ದೊಡ್ಡ ತಳಿಯ ನಾಯಿಗಳಿವ ಎಂದು ವರದಿಯಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ.
Exit mobile version