ಪ್ಲಾಸ್ಟಿಕ್ ದಂಧೆ: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದೆ ಪ್ಲಾಸ್ಟಿಕ್ ದಂಧೆ, ಯಾವುದೇ ಕ್ರಮ ತೆಗೆದುಕೊಳ್ಳದ ಮಾಲಿನ್ಯ ನಿಯಂತ್ರಣ ‌ಮಂಡಳಿ

Bengaluru: ರಾಜಧಾನಿಯಲ್ಲಿ ಪ್ಲಾಸ್ಟಿಕ್ ಉತ್ಪಾದನೆಯನ್ನು ಒಂದು ವರ್ಷದ ಹಿಂದೆ ಬ್ಯಾನ್ ಮಾಡಲಾಗಿತ್ತು. ಇನ್ನು ಸಿಂಗಲ್ ಯೂಸ್ ಪ್ಲಾಸ್ಟಿಕ್​ಗಳನ್ನ (Plastic racket – Bengaluru)

ಬಳಕೆ ಮಾಡಿದರೆ ಫೈನ್ ಹಾಕುವುದಾಗಿ ಅಧಿಕಾರಿಗಳು ಹೇಳಿದ್ದರು.‌ ಯಲಚೇನಹಳ್ಳಿಯ (Yelachanhalli) ನಾಯ್ಡು ಲೇಔಟ್ ನಲ್ಲಿ ಪ್ಲಾಸ್ಟಿಕ್ ತಯಾರಿ ಮಾಡಿ, ತಮಗಿಷ್ಟದ ಬೆಲೆಗೆ ಮಾರಾಟ (Sales)

ಮಾಡುತ್ತಿದ್ದು, ಪ್ಲಾಸ್ಟಿಕ್ (Plastic Production) ತಯಾರಿಕಾ ಘಟಕದ ಮಾಲೀಕರು ಯಾವುದೇ ಅನುಮತಿ ಪಡೆಯದೇ ತಯಾರಿಸುವುದಲ್ಲದೇ, ಎಲ್ಲರೂ ಉತ್ಪಾದನೆ ಮಾಡ್ತಿದ್ದಾರೆ.

ನಗರದಲ್ಲಿ ಮಾತ್ರ ಪ್ಲಾಸ್ಟಿಕ್ ಬ್ಯಾನ್ ಆಗಿಲ್ಲ. ಈ ಬ್ಯಾನ್ ಕೇವಲ ಹೆಸರಿಗೆ ಮಾತ್ರ ಎನ್ನುವಂತೆ ಕಾಣುತ್ತಿದ್ದು, ಯಾವುದೇ ಅಧಿಕಾರಿಗಳ‌ ಭಯವಿಲ್ಲದೇ ಕಾರ್ಖಾನೆಗಳಲ್ಲಿ ಫ್ಲಾಸ್ಟಿಕ್ ತಯಾರಾಗುತ್ತಿದೆ.

ಅಧಿಕಾರಿಗಳು ಮಾತ್ರ ಏನೂ (Plastic racket – Bengaluru) ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ.‌

ಇನ್ನು ಸಣ್ಣ-ಪುಟ್ಟ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸಿದ್ರೆ ಪೌರುಷ ತೋರಿಸುವ ಅಧಿಕಾರಿಗಳು, ರಾಜಾರೋಷವಾಗಿ ಕಾರ್ಖಾನೆಗಳಲ್ಲಿ ಪ್ಲಾಸ್ಟಿಕ್ ತಯಾರಾಗುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಹೀಗಾಗಿ ಯಲಚೇನಹಳ್ಳಿಯ ನಾಯ್ಡು ಲೇಔಟ್ ನಲ್ಲಿ ಪ್ಲಾಸ್ಟಿಕ್ ತಯಾರಿ ಮಾಡಿ, ತಮಗಿಷ್ಟದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಈ ಸಿಂಗಲ್ ಯೂಸ್ ಪ್ಲಾಸ್ಟಿಕ್ ಉತ್ಪಾದನೆ ಮಾಡಬೇಕು ಎಂದು ಹೇಳಿದರೆ ಪರಿಸರ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ ಪಡಿಯಬೇಕು. ಆದರೆ ಈ ಪ್ಲಾಸ್ಟಿಕ್ ತಯಾರಿಕಾ ಘಟಕದ ಮಾಲೀಕರು

ಯಾವುದೇ ಅನುಮತಿ ಪಡೆಯದೇ ಯಾಮಾರಿಸುವುದಲ್ಲದೆ ಎಲ್ಲರೂ ಉತ್ಪಾದನೆ ಮಾಡುತ್ತಿದ್ದಾರೆ.

ಈ ಕುರಿತು ಸ್ಥಳೀಯ ಎಇ, ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳ ವೀಕ್ಷಣೆ ಮಾಡಿ ದೂರು ದಾಖಾಲಿಸಿಕೊಂಡಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ತಯಾರಿಕಾ ಘಟಕದ ಬೆಸ್ಕಾಂ ಪವರ್ (BESCOM)

ಲೈನ್ ಕಟ್ ಮಾಡುವುದಾಗಿ ಹೇಳಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳ‌ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸದಿರುವುದೇ ಈ ಪ್ಲಾಸ್ಟಿಕ್ ತಯಾರಿಕೆಗೆ ಕಾರಣವಾಗುತ್ತಿದ್ದು, ಕಾರ್ಖಾನೆಗಳ ಮೇಲೆ ಮಾಲಿನ್ಯ

ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಬೇಕಿದೆ.

ಇದನ್ನು ಓದಿ: ಡಿಸಿಸಿ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ

Exit mobile version